ಗ್ಯಾರೇಜ್ ಮಾಲೀಕರ, ನೌಕರರ ಬೃಹತ್ ಮಹಾಸಮಾವೇಶ. ದೇಶದ ಅಭಿವೃದ್ಧಿಗೆ ಪೂರಕ ಶ್ರಮವಿದು: ಸುಬ್ರಹ್ಮಣ್ಯ ಶ್ರೀ.

ಗ್ಯಾರೇಜ್ ಮಾಲೀಕರ, ನೌಕರರ ಬೃಹತ್ ಮಹಾಸಮಾವೇಶ. ದೇಶದ ಅಭಿವೃದ್ಧಿಗೆ ಪೂರಕ ಶ್ರಮವಿದು: ಸುಬ್ರಹ್ಮಣ್ಯ ಶ್ರೀ.

ಮಂಗಳೂರು: ಗ್ಯಾರೇಜ್ ಮಾಲೀಕರ ಹಾಗೂ
ನೌಕರರ ಸೇವೆ ಈ ನಾಡಿಗೆ ಸ್ಮರಣೀಯವಾಗಿದೆ.
ಈ ಸಂಸ್ಥೆಗಳು ಮತ್ತಷ್ಟು ಸಂಘಟಿತಗೊಂಡು
ಕಾರ್ಮಿಕರು, ಸಮಾಜದ ಧ್ವನಿಯಾಗಬೇಕು ಮತ್ತು
ಉತ್ಕೃಷ್ಟ ಸೇವೆಗಳು ಈ ಮೂಲಕ ಆಗಲಿ ಎಂದು
ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ
ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.


ದಕ್ಷಿಣ ಕನ್ನಡ ಗ್ಯಾರೇಜ್ ಮಾಲೀಕರ ಸಂಘದ
ವತಿಯಿಂದ ನಗರದ ಪುರಭವನದಲ್ಲಿ
ಸೋಮವಾರ ನಡೆದದ.ಕ. ಮತ್ತು ಉಡುಪಿಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಉಭಯ ಜಿಲ್ಲೆಗಳ ಗ್ಯಾರೇಜ್ ಮಾಲೀಕರ ಹಾಗೂ ನೌಕರರ ಬೃಹತ್ ಮಹಾಸಮಾವೇಶದಲ್ಲಿ ಆಶೀರ್ವಚನ ನೀಡಿದರು.


ಸಕಾಲಿಕ ಯಾಂತ್ರಿಕ ಯುಗದಲ್ಲಿ ನಾವಿದ್ದು, ದೇಶದ
ಅಭಿವೃದ್ಧಿಗೆ ಗ್ಯಾರೇಜ್ ಮಾಲೀಕರು ಮತ್ತು
ಕಾರ್ಮಿಕರ ಪಾತ್ರ ಹಿರಿದಾಗಿದೆ.ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಗ್ಯಾರೇಜ್ ಮಾಲೀಕರು ಮತ್ತು ಕಾರ್ಮಿಕರು ದಿನದ ಪ್ರತಿಕ್ಷಣವನ್ನು
ತೊಡಗಿಸಿಕೊಂಡಿದ್ದಾರೆ ಎಂದರು. ಸಮಾಜ ಸೇವೆಗೆ
ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ,ವಂ.ಫಾ. ಫ್ರಾನ್ಸಿಸ್ ಡೇವಿಯರ್ ಗೋಮ್ಸ್ ಮಾತನಾಡಿ, ಗ್ಯಾರೇಜ್‌ನಲ್ಲಿರುವವರಿಗೆ ಸರಕಾರದಿಂದ ಸಿಗುವ ಸಂಘಟಿತ-ಅಸಂಘಟಿತ ಕಾರ್ಮಿಕರ ಪ್ರಯೋಜನ ಸಿಗುವಂತಾಗಬೇಕು.ಅದಕ್ಕೆ ಮಾಲೀಕರು, ಕಾರ್ಮಿಕರ ಸಂಘಪೂರಕವಾಗಿ ಕೆಲಸ ಮಾಡಲಿ ಎಂದರು.ಶಾಸಕ ಯು.ಟಿ. ಖಾದರ್, ಮೇಯರ್‌ ಜಯಾನಂದ ಅಂಚನ್, ಉಪಮೇಯರ್‌ ಪೂರ್ಣಿಮಾ, ಕಾರ್ಪೊರೇಟರ್‌ಗಳಾದ ದಿವಾಕರ್,ಶೈಲೇಶ್ ಶೆಟ್ಟಿ, ಭರತ್ ಎಸ್., ಮಂಗಳೂರು


ಪೊಲೀಸ್ ಆಯುಕ್ತ ಎನ್. ಶಶಿಕುಮಾರ್,ಅರವಿಂದ್ ಮೋಟರ್‌ ಆಡಳಿತ ನಿರ್ದೇಶಕ ಆರೂರು ಕಿಶೋರ್ ರಾವ್, ಐಒಸಿಎಲ್ ಹಿರಿಯ ಪ್ರಬಂಧಕ ವೈಭವ್ ಚಂದ್ರನ್, ರಮಾನಾಥ್ ಟ್ರೇಡಿಂಗ್ ಕಾರ್ಪೊರೇಷನ್‌ನ ಪ್ರಸನ್ನ ಕೆ.ಆರ್.,ಮಂಗಳೂರು ಐಒಸಿಎಲ್ ಸೇಲ್ಸ್ ಎಕ್ಸಿಕ್ಯೂಟಿವ್ ಪಂಕಜ್ ಕುಮಾರ್, ಸಮ್ಮೇಳನದ ಪ್ರಧಾನ ಸಂಚಾಲಕ ದಿವಾಕರ್ ಎಂ., ದಕ್ಷಿಣ ಕನ್ನಡ
ಗ್ಯಾರೇಜ್ ಮಾಲೀಕರು ಮತ್ತು ಕಾರ್ಮಿಕರ ಸಂಘದ
ಅಧ್ಯಕ್ಷ ಕೇಶವ, ಕೋಶಾಧಿಕಾರಿ ರಾಜ್‌ಗೋಪಾಲ್,
ಸಹಸಂಚಾಲಕ ದಿನೇಶ್ ಕುಮಾರ್, ಸಂಘಟನಾ
ಕಾರ್ಯದರ್ಶಿ ಸತೀಶ್ ಗಟ್ಟಿ ಉಪಸ್ಥಿತರಿದ್ದರು.
ದ.ಕ. ಗ್ಯಾರೇಜ್ ಮಾಲೀಕರ ಮತ್ತು ಕಾರ್ಮಿಕ
ಸಂಘದ ನಿರ್ದೇಶಕ ಎ. ಜನಾರ್ದನ್ ಪ್ರಾಸ್ತಾವಿಕವಾಗಿ
ಮಾತನಾಡಿದರು. ಡಿಕೆಜಿಎಂ ಸಂಘದ ಕಾರ್ಯದರ್ಶಿ
ಪುರುಷೋತ್ತಮ ಕಮಿಲ ಸ್ವಾಗತಿಸಿದರು. ಸುಧಾಕರ್
ರಾವ್ ಪೇಜಾವರ, ವಾಸುದೇವ ರಾವ್ ಕುಡುಪು
ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯ
ಮಾಧವ ಬಂಗೇರ ವಂದಿಸಿದರು. ಮಹಾಸಮಾವೇಶಕ್ಕೆ ಮುನ್ನ ಗ್ಯಾರೇಜ್ ಮಾಲೀಕರು ಮತ್ತು ಕಾರ್ಮಿಕರಿಂದ ಬಲ್ಮಠ ಯುಬಿಎಂ ಮೈದಾನದಿಂದ ಬೃಹತ್ ಜಾಥಾ
ನಡೆಯಿತು. ಉದ್ಘಾಟನಾ ಕಾರ್ಯಕ್ರಮದ ಬಳಿಕ 4
ಉಪನ್ಯಾಸಗಳು ನಡೆಯಿತು. ಸಂಜೆ ತೆಲಿಕೆ ಬಂಜಿ
ನಿಲಿಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ರಾಜ್ಯ