
ದಾರುಲ್ ಐತಾಮ್ ವಲ್ ಮಸಾಕೀನ್ ದಮ್ಮಾಮ್ ಅಲ್ ಖೋಬಾರ್ ಸಮಿತಿಯ ವಾರ್ಷಿಕ ಮಹಾ ಸಭೆ ನೂತನ ಸಮಿತಿಯ ರಚನೆ ಕಾರ್ಯಕ್ರಮವು ಜ. 13 ಶುಕ್ರವಾರ ಸೌಧಿ ಅರೇಬಿಯಾದ ಶಂಸುದ್ದೀನ್ ಸಿ ಪಿ ಮೀಟಿಂಗ್ ಹಾಲ್ ನಲ್ಲಿ ನಡೆಯಿತು.



ಬಹು:ಉಬೈದ್ ಉಸ್ತಾದ್ (ರಿಸಿವೆರ್ ದಾರುಲ್ ಹಿಕ್ಮ ಬೆಳ್ಳಾರೆ)ರವರು ದುಆ ಗೆ ನೇತೃತ್ವವನ್ನು ವಹಿಸಿದ್ದರು ಸಭಾಧ್ಯಕ್ಷತೆಯನ್ನು ವಹಿಸಿದ ಶಂಸುದ್ದೀನ್ ರವರು ವಹಿಸಿದ್ದರು ಮತ್ತು ರಫೀಕ್ ಕದಿಕಡ್ಕ ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಗಿ,
ಸಮಿತಿಯ ಅಧ್ಯಕ್ಷರಾಗಿ ಮಜೀದ್ ಮರಸಂಕ ರವರು ಆಯ್ಕೆಯಾದರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶೆರೀಫ್ ಬಾಬ ಹಾಗು ಖಜಾಂಜಿಯಾಗಿ ಎಂ.ಬಿ ಮೊಹಮ್ಮದ್ ಮದನಿ ರವರು ಆಯ್ಕೆಯಾದರು ಮತ್ತು ಸೆಲೀಂ ಇಸ್ಮಾಯಿಲ್ ರವರು ಗೌರವಾಧ್ಯಕ್ಷರಾಗಿ ಆಯ್ಕೆಯಾದರು.

ನೂತನ ಸಮಿತಿ ರಚಿಸಲಾಗಿ
ಉಪಾಧ್ಯಕ್ಷರಾಗಿ ರಶೀದ್ ಬೆಳ್ಳಾರೆ ಹಾಗು ಅಶ್ರಫ್ ನಡುವಡ್ಕ ಕಾರ್ಯದರ್ಶಿಯಾಗಿ ಇಷ್ಟ್ಫಾಕ್ ಕದಿಕಡ್ಕ ಹಾಗು ಸಫ್ವಾನ್ ಇಸ್ಮಾಯಿಲ್
ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಮರಸಂಕ
ಸಲಹಾ ಸಮಿತಿ ಸದಸ್ಯರಾಗಿ ಶಂಸುದ್ದೀನ್ ಸಿ ಪಿ, ಅಶ್ರಫ್ ಪಾಲ್ಮಗ್ರೋವ್ ಹಾಗು ರಫೀಕ್ ಕದಿಕಡ್ಕ
ಕಾರ್ಯಕಾರಿ ಸಮಿತಿ ಸದಸ್ಯರು: ಹಮೀದ್ ಪೆರಾಜೆ, ರಝಕ್ ಸುಳ್ಯ, ರಾಶಿದ್ ಎ.ಕೆ, ಝಕೀರ್ ಬೆಳ್ಳಾರೆ, ಅಶ್ರಫ್ ಟ್ರೈಸ್ಟರ್, ಅಶ್ರಫ್ ಕೆ.ಕೆ .ವೈ, ಬಷೀರ್ ಅಡ್ಕಾರ್ ಸೇರಿದಂತೆ ಒಟ್ಟು ಹತ್ತೊಂಬತ್ತು ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸೆಲೀಂ ಇಸ್ಮಾಯಿಲ್ ರವರು ಸ್ವಾಗತ ಭಾಷಣವನ್ನು ನೆರವೇರಿಸಿದರು, ಕಾರ್ಯದರ್ಶಿ ಶೆರೀಫ್ ಬಾಬ ರವರು ವಾರ್ಷಿಕ ವರದಿ ಹಾಗು ಲೆಕ್ಕಪತ್ರವನ್ನು ಮಂಡಿಸಿದರು, ಮತ್ತು ಕಾರ್ಯಕ್ರಮವನ್ನು ನಿರೂಪಿಸಿದರು,
ಮತ್ತು ನಿರ್ಗಮನಾ ಅಧ್ಯಕ್ಷರಾದ ಸೆಲೀಂ ಇಸ್ಮಾಯಿಲ್ ರವರು ಪ್ರಾಸ್ತಾವಿಕ ಭಾಷಣವನ್ನು ನಡೆಸಿದರು,
ರಫೀಕ್ ಕದಿಕಡ್ಕ ಧನ್ಯವಾದ ನೆರವೇರಿಸಿದರು.
