ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿ : ಭಾರೀ ಜನಸ್ತೋಮದ ನಡುವೆ ರೋಡ್ ಶೋ..

ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿ : ಭಾರೀ ಜನಸ್ತೋಮದ ನಡುವೆ ರೋಡ್ ಶೋ..


ಹುಬ್ಬಳ್ಳಿ: ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆಗಾಗಿ ಹುಬ್ಬಳ್ಳಿಗೆ ಆಗಮಿಸಿರುವ ಪ್ರಧಾನಿ ಮೋದಿ, ರೋಡ್ ಶೋ ನಡೆಸಿದರು.
ಈ ವೇಳೆ, ಭಾರೀ ಜನಸ್ತೋಮ ಕಂಡುಬಂತು. ಗುರುವಾರ ಮಧ್ಯಾಹ್ನ ವಾಯುಸೇನೆ ವಿಮಾನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯಲಿರುವ
ರೈಲ್ವೆ ಮೈದಾನದವರೆಗೂ ಅಂದರೆ ಎಂಟು ಕಿಮೀ
ದೂರವನ್ನು ಮೋದಿ ಅದ್ದೂರಿ ರೋಡ್ ಶೋಮೂಲಕ
ಕ್ರಮಿಸಿದರು.
ಗೋಕುಲ್ ರೋಡ್, ಅಕ್ಷಯ ಪಾರ್ಕ್, ಹೊಸೂರು ಸರ್ಕಲ್ ದೇಶಪಾಂಡೆ ನಗರ ಮೂಲಕ ರೋಡೋ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಜನರು ಮೋದಿ ಮೋದಿ ಎಂದು ಘೋಷಣೆ ಮೂಲಕ ಸ್ವಾಗತ ಕೋರಿದರು.
ಮಾರ್ಗ ಮಧ್ಯದಲ್ಲಿ ಕಾರು ನಿಲ್ಲಿಸಿದ ಮೋದಿ, ಜನರತ್ತ
ಕೈಬೀಸಿ ಧನ್ಯವಾದ ಸಲ್ಲಿಸಿದರು.

ರಾಜ್ಯ