


ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ರಿದ್ದ ಮಂಗಳೂರು ಭಾಗದ ಜನರು ಪ್ರಯಾಣಿಸುತ್ತಿದ್ದ ವ್ಯಾನ್ ದೇವರಕೊಲ್ಲಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ವರದಿಯಾಗಿದೆ.ಎಮ್ಮೆಮಾಡು ಪುಣ್ಯ ಸ್ಥಳವನ್ನು ಸಂದರ್ಶಿಸಿ ಸುಳ್ಯ ಕಡೆ ಬರುತ್ತಿದ್ದರು ಎಂದು ತಿಳಿದು ಬಂದಿದೆ ಗಾಯಾಳುಗಳನ್ನು ಸಾರ್ವಜನಿಕರ ಸಹಾಯದಿಂದ ಹೊರ ತೆಗೆದು ಸುಳ್ಯ ಕೆವಿಜಿ ಆಸ್ಪತ್ರೆ ಗೆ ದಾಖಲಿಸಿದ್ದಾರೆ. .ಬ್ರೇಕ್ ಸಿಗದ ಕಾರಣ ಚಾಲಕ ತನ್ನ ನಿಯಂತ್ರಣ ಕಳೆದುಕೊಂಡು ಸ್ಕಾರ್ಪಿಯೋ ವಾಹನಕ್ಕೆ ಡಿಕ್ಕಿ ಹೊಡೆದಿದು ಘಟನೆ ಸಂಭವಿಸಿದೆ, ತಿಂಗಳಾಡಿ ಮತ್ತು ಬದಿಯಡ್ಕ ಮೂಲದವರು ಎಂದು ಹೇಳಲಾಗಿದೆ, ವ್ಯಾನ್ ನಲ್ಲಿ ಹಲವು ಜನರಿದ್ದರು, ನಾಲ್ಕು ಮಕ್ಕಳಿಗೂ ಗಾಯಗಳಾಗಿದ್ದು ಗಾಯಾಳುಗಳ ಹಲವರಿದ್ದಾರೆ, ಗಾಯಾಳುಗಳನ್ನು ೨ ಅಂಬ್ಯಲೆನ್ಸ್, ಮತ್ತು ಪಿಕಪ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.




ವರದಿ :ಫಾರೂಕ್ ಕಾನಕ್ಕೋಡು