
ಸುಳ್ಯದ ಪ್ರಮುಖ ಸಮಸ್ಯೆಯಾಗಿದ್ದ ಕುಡಿಯುವ ನೀರಿನ ಸಮಸ್ಯೆ ಶೀಘ್ರದಲ್ಲಿ ಬಗೆಹರಿಯಲಿದೆ. ನೀರಿನ ಯೋಜನೆಗೆ 59.82 ಕೋಟಿ ರೂ ಮಂಜೂರಾಗಿದ್ದು ಶೀಘ್ರ ಇದರ ಕೆಲಸ ಕಾಮಗಾರಿ ನಡೆಯಲಿದ್ದು, ಈ ಸಂದರ್ಭದಲ್ಲಿ ಕೆಲವು ರಸ್ತೆಗಳನ್ನು ಅಗೆದು ಪೈಪ್ ಹಾಕಬೇಕಾದೀತು, ಇತಂಹ ಸಂದರ್ಭದಲ್ಲಿ ಸಾರ್ವಜನಿಕರು, ಸುಳ್ಯ ನಾಗರೀಕರು,ವರ್ತಕರು ಸಹಕಾರವನ್ನು ತೋರಬೇಕು, ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ.



ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ಅಭಿವೃದ್ದಿಯಾಗುವಾಗ ಕೆಲವು ತೊಂದರೆಗಳಾಗುತ್ತದೆ ಈ ಸಮಯ ಸಾರ್ವಜನಿಕರ ಸಹಕಾರ ನೀಡಬೇಕು. ಇದೀಗ ಅಮೃತ್ 2 ಯೋಜನೆಯಡಿಯಲ್ಲಿ ಅನುದಾನ ಮಂಜೂರಾಗಿದೆ.ಈ ಯೋಜನೆಯ ಸಮಿತಿ ಹಾಗು ತಾಂತ್ರಿಕ ಸಮಿತಿಯಲ್ಲಿ ಈ ಕೆಲಸ ಅನುಮೋಧನೆಗೊಂಡು ಶೀಘ್ರ ಟೆಂಡರ್ ಪ್ರಕ್ರಿಯೆ ನಡೆದು ಕೆಲಸ ಆರಂಭವಾಗಲಿದೆ ಎಂದು ಹೇಳಿದರು. ನಗರದಲ್ಲಿ ಈಗಿರುವ ನೀರಿನ ವ್ಯವಸ್ಥೆ
ಹಳೆಯದಾಗಿದ್ದು, ಸುಳ್ಯ ನಗರಕ್ಕೆ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ 2008ರಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2014ರಲ್ಲಿ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಿನ ಆಡಳಿತ ಸಮಿತಿ ಬೆನ್ನು ಬಿದ್ದು ಅನುದಾನ ಈಗ ಬಿಡುಗಡೆ ಆಗಿದೆ , ಮೊನ್ನೆಯಷ್ಟೆ ಗುದ್ದಲಿಪೂಜೆ ನಡೆಸಿದ್ದ 17 ಕೋಟಿ ರೂಗಳ ವೆಂಟೆಡ್ ಡ್ಯಾಂ ಮತ್ತು 2.5 ಕೋಟಿ ರೂಗಳ ಜಾಕ್‌ವೆಲ್ ಕಾಮಗಾರಿ ನಡೆಯುತ್ತಿದೆ. ಒಟ್ಟಿನಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು ಕಾರ್ಯಗತವಾಗಿದೆ ಇದಕ್ಕೆ ಸಚಿವ ಎಸ್.ಅಂಗಾರ, ವಿಪಕ್ಷ ಸದಸ್ಯರು ಸೇರಿ ಎಲ್ಲಾ ಸದಸ್ಯರು ಪೂರ್ಣ ಸಹಕಾರ ಕೊಟ್ಟ ಹಿನ್ನಲೆಯಲ್ಲಿ ಸಾದ್ಯವಾಗಿದೆ ಎಂದು ಹೇಳಿದರು.ನಗರಕ್ಕೆ ನಿರಂತರ ನೀರು ಸರಭರಾಜು ಮಾಡುವ ಉದ್ದೇಶದಿಂದ 180hp ಯ ಎರಡು ಪಂಪ್ ಅಳವಡಿಸಿ ,ಕುರುಂಜಿಗುಡ್ಡೆ, ಬೀರಮಂಗಲ,ಜಯನಗರ ಕೊರಂಬಡ್ಕ,ಕಲ್ಲುಮುಟ್ಲು, ಬೋರುಗುಡ್ಡೆಯಲ್ಲಿ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ನೀರು ಹರಿಸುವ ಯೋಜನೆ ಮಾಡಲಾಗಿದೆ,ಎಂದರು, ಈ ಎಲ್ಲಾ ಯೋಜನೆಗಳ ಕಾರ್ಯಗತದ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸ ಬೇಕು ಎಂದು ನಗರ ಪಂಚಾಯತ್ ಅಧ್ಯಕ್ಷರು ಕೇಳಿಕೊಂಡರು.
ಸುದ್ದಿಗೋಷ್ಠಿಯಲ್ಲಿ ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ ಕುರುಂಜಿ, ಸದಸ್ಯರಾದ ಬುದ್ಧ ನಾಯ್ಕ್, ಸುಧಾಕರ ಕೆ. ಉಪಸ್ಥಿತರಿದ್ದರು.
