ಸುಳ್ಯ ಜಾತ್ರೆಯ ಸಂತೆ ವ್ಯಾಪಾರದ ಸ್ಥಳ ಏಲಂನಲ್ಲಿ ಹಿಂದೂಯೇತರರಿಗೆ ಅವಕಾಶವಿಲ್ಲ: ತುರ್ತು ಸಭೆಯಲ್ಲಿ ನಿರ್ಣಯ.

ಸುಳ್ಯ ಜಾತ್ರೆಯ ಸಂತೆ ವ್ಯಾಪಾರದ ಸ್ಥಳ ಏಲಂನಲ್ಲಿ ಹಿಂದೂಯೇತರರಿಗೆ ಅವಕಾಶವಿಲ್ಲ: ತುರ್ತು ಸಭೆಯಲ್ಲಿ ನಿರ್ಣಯ.

ಸುಳ್ಯ:ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ವ್ಯಾಪಾರ ನಡೆಸಲು ಅನ್ಯಮತಿಯರಿಗೆ ಅವಕಾಶ ನೀಡಬಾರದು ಎಂಬ ಹಿಂದೂ ಸಂಘಟನೆಯ ಆಗ್ರಹದಂತೆ ಹಿಂದುಗಳಿಗೆ ಮಾತ್ರ ಅವಕಾಶ ನೀಡಲು ದೇವಸ್ಥಾನದಲ್ಲಿ ಇಂದು ಸಂಜೆ ದೇವಸ್ಥಾನ ಆಡಳಿತ ಸಮಿತಿ ಮತ್ತು ಹಿಂದೂ ಸಂಘಟನೆಯ ಪದಾಧಿಕಾರಿಗಳು ನಡೆಸಿದ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಂಡ ಘಟನೆ ನಡೆದಿದೆ. ದೇವಸ್ಥಾನದಿಂದ ಸಂತೆ ವ್ಯಾಪಾರ ನಡೆಸಲು ಏಲಂನಲ್ಲಿ ದೇವಸ್ಥಾನ ವತಿಯಿಂದ ಏಲಂ ಮಾಡಲಿರುವ ಸ್ಥಳದಲ್ಲಿ ಹಿಂದುಗಳನ್ನು ಹೊರತು ಪಡಿಸಿ ಉಳಿದವರಿಗೆ ಭಾಗವಹಿಸಲು ಮತ್ತು ವ್ಯಾಪಾರ ನಡೆಸಲು ಅವಕಾಶ ನೀಡುವುದಿಲ್ಲ, ಕೆಲವು ಗೊಂದಲಗಳಿಂದ ಹೀಗಾಗಿದೆ, ಇಂತಹ ಗೊಂದಲಗಳಿಗೆ ಅಂತ್ಯ ಹಾಡಲು ಧಾರ್ಮಿಕ ದತ್ತಿ ಇಲಾಖೆ ನಿಯಮದಂತೆ, ದೇವಸ್ಥಾನ ಮತ್ತು ಸುತ್ತಮುತ್ತ ಹಾಗೂ ಸಮೀಪದ ಜಾಗದಲ್ಲಿ ಹಿಂದುಯೇತರರಿಗೆ ಅವಕಾಶ ನೀಡುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ನಿರ್ಧಾರ ಪ್ರಕಟಿಸಿದ್ದಾರೆ.

ಘಟನೆ ವಿವರ

ಜ.೨ ರಂದು ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನದಿಂದ ಯಾವುದೇ ನಿರ್ಭಂದ ಇಲ್ಲದೆ ಮುಕ್ತ ಅವಕಾಶಕ್ಕೆ ಅನುವು ಮಾಡಿ ಕೊಡುವುದಾಗಿ ನಿರ್ಧಾರವಾಗಿತ್ತು, ದೇವಸ್ಥಾನದ ಈ ನಿರ್ಣಯ ಹಿಂದೂಸಂಘಟನೆಗಳ ಆಕ್ರೋಶಕ್ಕೆ ಕಾರಣವಾದರೆ, ದೇವಸ್ಥಾನ ಆಡಳಿತ ಸಮಿತಿಯ ನಿರ್ಣಯವನ್ನು ಹಲವು ಮುಸ್ಲಿಮ್ ನಾಯಕರು ಸ್ವಾಗತಿಸಿದ್ದರು, ಈ ಮಧ್ಯೆ ಕೆಲವು ಮಾಧ್ಯಮಗಳಲ್ಲಿ ದೇವಸ್ಥಾನದ ಈ ನಿರ್ಣಯ ಹಿಂದೂ ಸಂಘಟನೆಗಳಿಗೆ ತೀವ್ರ ಮುಖಬಂಗ, ಸಂಘಟನೆಯ ಸೋಲು,ಎಂದೆಲ್ಲಾ ವರದಿ ಮಾಡಿತ್ತು,ಇದು ಸಂಘಪರಿವಾರವನ್ನು ಕೆರಳಿಸಿ ಸವಾಲಾಗಿ ಸ್ವೀಕರಿಸುವಂತೆ ಮಾಡಿತ್ತು,ಹಾಗಾಗಿ ಸಂಘಟನೆಗೆ ಸಂಭಂದಿಸಿದ ಎಲ್ಲಾ ಗ್ರೂಪ್ಗ್ ಗಳಲ್ಲಿ ಜ.4 ಮತ್ತೆ ಮನವಿ ನೀಡುವುದಿದೆ,ಸಂಘಟನೆಯವರು ಅಸಂಖ್ಯ ಸಂಖ್ಯೆಲ್ಲಿ ಕಾರ್ಯಕರ್ತರು ಸೇರುವಂತೆ ಕರೆ ನೀಡಿತ್ತು, ಹಾಗಾಗಿ ಬುದವಾರ ಬೆಳಿಗ್ಗೆ ನೂರಕ್ಕೂ ಮಿಕ್ಕಿ ಸಂಘಟನೆಯ ನಾಯಕರು, ಸದಸ್ಯರು, ಹಾಗೂ ಬಿಜೆಪಿ ಮುಖಂಡರು ಜಮಾವಣೆಗೊಂಡು ದೇವಸ್ಥಾನಕ್ಕೆ ಅನ್ಯಧರ್ಮಿಯರಿಗೆ,ಅವಕಾಶವೀಯದಂತೆ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಿಗೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆಗೆ ಹಾಗು ಧಾರ್ಮಿಕ ದತ್ತಿ ಇಲಾಖೆಗೆ ಮನವಿ ನೀಡಿದ್ದರು. ಈ ಹಿನ್ನಲೆಯಲ್ಲಿ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಜ.4 ರಂದು ತುರ್ತು ಸಭೆಯನ್ನನು ಕರೆಯಲಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ, ಲಿಂಗಪ್ಪ ಗೌಡ ಕೇರ್ಪಳ, ಕೃಪಾಶಂಕರ ತುದಿಯಡ್ಕ, ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ದಾಮೋದರ ಮಂಚಿ, ಹಿಂದೂ ಹಿತ ರಕ್ಷಣಾ ವೇದಿಕೆಯ ಸಂಚಾಲಕ ಚಿದಾನಂದ ವಿದ್ಯಾನಗರ, ಕೇಶವ ನಾಯಕ್ ಸುಳ್ಯ,ಲತೀಶ್ ಗುಂಡ್ಯ, ಸುನಿಲ್ ಕೇರ್ಪಳ,ನಿಕೇಶ್ ಉಬರಡ್ಕ,ಸುಪ್ರಿತ್ ಮೊಂಟಡ್ಕ ಜಿ.ಜಿ.ನಾಯಕ್, ಗೋಪಾಲಕೃಷ್ಣ, ಗಿರೀಶ್ ಕಲ್ಲುಗದ್ದೆ, ರಜತ್ ಅಡ್ಕಾರ್,ವರ್ಷಿತ್ ಚೊಕ್ಕಾಡಿ, ಪ್ರಥ್ವಿ ,ರಾಜೇಶ್,ಸೂರ್ಯಕುಮಾರ್,ರಾಮ್ ಪ್ರಸಾದ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ರಾಜ್ಯ