ಮೇಯಲು ಬಿಡುತ್ತಿದ್ದ ಆಡುಗಳನ್ನು ಕಳ್ಳತನ:ಇಬ್ಬರನ್ನು ಪೋಲಿಸರಿಗೆ ಒಪ್ಪಿಸಿದ ಸಾರ್ವಜನಿಕರು.

ಮೇಯಲು ಬಿಡುತ್ತಿದ್ದ ಆಡುಗಳನ್ನು ಕಳ್ಳತನ:ಇಬ್ಬರನ್ನು ಪೋಲಿಸರಿಗೆ ಒಪ್ಪಿಸಿದ ಸಾರ್ವಜನಿಕರು.

ವಿಟ್ಲ : ಮೇಯಲು ಬಿಡುತ್ತಿದ್ದ ಆಡುಗಳನ್ನು ಕಳ್ಳತನ
ಮಾಡುತ್ತಿದ್ದ ಇಬ್ಬರು ಯುವಕರನ್ನು ಸಾರ್ವಜನಿಕರು
ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲದಲ್ಲಿ
ನಡೆದಿದೆ.ಪೆರುವಾಯಿ, ಅಡ್ಯನಡ್ಕ ಕೇಪು, ಮರಕ್ಕಿಣಿ, ಅಳಿಕೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ತಿಂಗಳಿನಿಂದ ಗುಡ್ಡಕ್ಕೆ ಮೇಯಲು ಬಿಡುತ್ತಿದ್ದ
ಆಡುಗಳು ನಾಪತ್ತೆಯಾಗುತ್ತಿತ್ತು ಇದರಿಂದ ಮಾಲೀಕರು ಹೈರಾಣರಾಗಿದ್ದು, ಆಡುಗಳ್ಳರ ಪತ್ತೆಗಾಗಿ ಕಾಯುತ್ತಿದ್ದರು.ನಿನ್ನೆ ಮುಂಜಾನೆ ಕಳ್ಳತನ ಮಾಡಿ ಬರುತ್ತಿದ್ದ ವೇಳೆ ಯುವಕರಿಬ್ಬರನ್ನು ಕೇಪು ಕಲ್ಲಂಗಳ ದ್ವಾರ ಸಮೀಪ ಸಾರ್ವಜನಿಕರು ರೆಡ್ ಹ್ಯಾಂಡಾಗಿ ಹಿಡಿದು ಧರ್ಮದೇಟು ನೀಡಿ ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದಾರೆ.ಆದರೆ ಪ್ರಕರಣ ಇನ್ನು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯ