
ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾ ಬೆನ್ ಜಿ ನಿಧನರಾಗಿ ಇಂದಿಗೆ ಒಂದು ದಿನ ಕಳೆದಿದೆ.ಅವರ ಅಂತ್ಯಕ್ರಿಯೆ ನೆರವೇರಿಸಿ ಅಗಿದೆ .ಎಲ್ಲಾ ರಾಜಕೀಯ, ಧಾರ್ಮಿಕ ನೇತಾರರು, ವಿರೋಧಪಕ್ಷದವರೂ ಯಾವುದೇ ಕಲ್ಮಶ ವಿಲ್ಲದೆ ಪ್ರಧಾನಿ ತಾಯಿ ನಿದನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ತನ್ನ ಕರ್ತವ್ಯಕ್ಕೆ ತೆರಳಿಯೂ ಆಗಿದೆ . ಆದರೆ ಈ ಮಧ್ಯೆ ಪ್ರಧಾನಿ ಸರಳತೆಯ ಬಗ್ಗೆ ಪೋಸ್ಟ್ ಹರಿದಾಡಿದ್ದು ಆಗಿದೆ. ಆದರೆ ಇದೊಂದು ಪೋಸ್ಟ್ ಮಾತ್ರ ಸಕತ್ ವೈರಲ್ ಆಗಿದೆ..
ತನ್ನ ತಾಯಿಯ ಶವವನ್ನು ಸಾಮಾನ್ಯರಂತೆ ಹೊತ್ತ ಪ್ರಧಾನಿ ಮೋದಿಯ ಪೋಟೊ ಹಾಕಿ ಕೆಳಗೆ
ಬೆಳಗ್ಗೆ 6.00 ಗಂಟೆ ಹೊತ್ತಿಗೆ ವಿಷಯ ಗೊತ್ತಾಯ್ತು. 9:30 ಅಷ್ಟು ಹೊತ್ತಿಗೆ ಎಲ್ಲಾ ಕೆಲಸಗಳೂ
ಕೇವಲ 3:30 ಗಂಟೆ ಅಷ್ಟೇ…ಮುಗಿದೋಯ್ತು…
ದೇಶದ ಜನಪ್ರಿಯ ಪ್ರದಾನಿಯೊಬ್ಬರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರವಿಲ್ಲದೆ
ಮುಗಿದೋಯ್ತು…!ಬೆಳ್ಳಗ್ಗಿನಿಂದ ಸಂಜೆವರೆಗಿನ ಮಾಧ್ಯಮಗಳ ಲೈವ್ ಇಲ್ಲ..ದೊಡ್ಡ ದೊಡ್ಡ ವ್ಯಕ್ತಿಗಳ ಭೇಟಿಗೆ ಅವಕಾಶ ಇಲ್ಲ ದೊಡ್ಡ ಮಟ್ಟದಲ್ಲಿ ಶವಯಾತ್ರೆಗೆ ವ್ಯವಸ್ಥೆ ಇಲ್ಲ…ರಸ್ತೆ ಹೆದ್ದಾರಿಗಳ ಟ್ರಾಫಿಕ್ ಜಾಮ್ ಇಲ್ಲ..ಸಾರ್ವಜನಿಕ ದರ್ಶನಕ್ಕಾಗಿ ವ್ಯವಸ್ಥೆ ಇಲ್ಲ…ಮಗನ ಅಭಿಮಾನಿಗಳ ಘೋಷಣೆಗಳ ಕೂಗಿಲ್ಲ…ಅಂತ್ಯಸಂಸ್ಕಾರಕ್ಕಾಗಿ ಎಕರೆಗಟ್ಟಲೆ ಜಾಗದ
ನೆಲಸಮ ಇಲ್ಲ…ಶವದ ಮೇಲೆ ರಾಷ್ಟ್ರಧ್ವಜದ ಹೊದಿಕೆ
ಇಲ್ಲ…ಅಗ್ನಿಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆಗಳಿಲ್ಲ… ಸಾಮಾನ್ಯರಲ್ಲಿ ಸಾಮಾನ್ಯರಂತೆ ನಡೆದ ಒಂದು ಪ್ರಧಾನಿ ತಾಯಿಯ ಅಂತ್ಯಕ್ರೀಯೆ .
ಈ ರೀತಿಯ ಪೋಸ್ಟ್..ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು. ಇದು ಮೋದಿ ಅಭಿಮಾನಿಗಳು ತಮ್ಮ ತಮ್ಮ ಖಾತೆಗಳಲ್ಲಿ ಹಾಕಿ ಪ್ರಚಾರ ಮಾಡಿದ್ದಾದರೂ..ಈ ಪೋಸ್ಟ್ ವಾಸ್ತವಿಕತೆಗೆ ಹತ್ತಿರವಾದದ್ದು ಸತ್ಯ. ಇಂದಿನ ಕಾಲಘಟ್ಟದಲ್ಲಿ ಕೆಲವೊಂದು ವ್ಯಕ್ತಿಗಳು ಮೃತಪಟ್ಟಾಗ ದಿನಗಟ್ಟಲೆ ಪ್ರಸಾರ ಮಾಡುವ ಟಿ ವಿ ಮಾಧ್ಯಮಗಳು, ಆಗಮಿಸುವ ಲಕ್ಷಾಂತರ ಗಣ್ಯರು ಹಾಗೂ ಅಭಿಮಾನಿಗಳು, ಇದಕ್ಕೆ ಮಾಡುವ ವ್ಯವಸ್ಥೆಗಳು, ಖರ್ಚು ವೆಚ್ಚಗಳು .ಎಲ್ಲವನ್ನೂ ಗಮನಿಸಿದಾಗ, ನಿನ್ನೆಯ ಘಟನೆಗೂ ಮತ್ತು ಈ ಪೋಸ್ಟ್ ಸಾಮ್ಯತೆ ಇರುವುದು ಸತ್ಯ ಎನ್ನುವುದು ಸಾರ್ವಜನಿಕ ವಲಯದಲ್ಲಿ ಮಾತಾಡುತ್ತಿರುವ ವಿಷಯ.


