ಯಕ್ಷ ಲೋಕದ ಮಿನುಗುತಾರೆ ಶ್ರೀ ಕುಂಬ್ಳೆ ಸುಂದರ್ ರಾವ್ : ಎ ಎಸ್ ಭಟ್

ಯಕ್ಷ ಲೋಕದ ಮಿನುಗುತಾರೆ ಶ್ರೀ ಕುಂಬ್ಳೆ ಸುಂದರ್ ರಾವ್ : ಎ ಎಸ್ ಭಟ್

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ದಿನಾಂಕ 30-11-2022ನೇ ಬುಧವಾರದಂದು ಇಹಲೋಕ ತ್ಯಜಿಸಿದ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ  ಶ್ರೀ  ಕುಂಬ್ಳೆ ಸುಂದರ್ ರಾವ್   ಅವರಿಗೆ ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಸಲಾಯಿತು.

ಕುಂಬ್ಳೆ ಸುಂದರ್ ರಾವ್ ಅವರು ಯಕ್ಷಗಾನ ರಂಗದಲ್ಲಿ ಶೇಣಿಯವರ ನಂತರದ ಅತ್ಯಂತ ಮೇರು ಕಲಾವಿದರು, ಅವರ ಸಾವಿನಿಂದ ಯಕ್ಷ ಲೋಕಕ್ಕೆ ತುಂಬಲಾರದ ನಷ್ಟ ಆಗಿದೆ, ಅವರು ಹಾಕಿ ಕೊಟ್ಟ ದಾರಿಯಲ್ಲಿ ಯುವ ಕಲಾವಿದರು ನಡೆದರೆ ಯಕ್ಷ ಲೋಕದಲ್ಲಿ ಇನ್ನಷ್ಟು ಹೊಸ ಸಾಧಕರು ಬರಲು ಸಾಧ್ಯ. ಅವರ ಸಾವಿನಿಂದ ಯಕ್ಷಗಾನ ಲೋಕ ನಿಜವಾಗಿಯೂ ಬಡವಾಗಿದೆ ಎಂದು ಯಕ್ಷ ಅಭಿಮಾನಿ ಶ್ರೀ ಎ. ಎಸ್ ಭಟ್ ಅವರು ನುಡಿದರು.

ಈ ಸಂದರ್ಭದಲ್ಲಿ ಕ. ಸಾ. ಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ್ ರೇವಣಕರ್, ಕಾರ್ಯದರ್ಶಿಗಳಾದ ಡಾ|| ಮುರಲೀ ಮೋಹನ್ ಚೂಂತಾರು, ಶ್ರೀ ಗಣೇಶ್ ಪ್ರಸಾದ್ ಜೀ, ಕೋಶಾಧಿಕಾರಿಗಳಾದ ಶ್ರೀ ಸುಬ್ರಾಯ ಭಟ್, ಕ. ಸಾ. ಪ ದಲ್ಲಿ ಸದಸ್ಯರಾದ ಶ್ರೀ ಕೆ ಶಶಿಧರ್, ಶ್ರೀ ಅನಂತ್ ಶರ್ಮ, ಸುರೇಶ್ ನಾಥ್, ದಿವಾಕರ್ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ