ಅರಂತೋಡಿನಲ್ಲಿ ಹೆಂಗಸಿನ ವೇಷ ದರಿಸಿ ಬಿಕ್ಷಾಟನೆ ಮಾಡಿದ ಗಂಡಸು: ಸ್ಥಳೀರಿಂದ ಗೂಸಾ.

ಅರಂತೋಡಿನಲ್ಲಿ ಹೆಂಗಸಿನ ವೇಷ ದರಿಸಿ ಬಿಕ್ಷಾಟನೆ ಮಾಡಿದ ಗಂಡಸು: ಸ್ಥಳೀರಿಂದ ಗೂಸಾ.

ಅರಂತೋಡಿನಲ್ಲಿ ತೃತೀಯ ಲಿಂಗೀಯ ನಂತೆ ಹೆಂಗಸಿನ ವೇಷ ಭೂಷಣ ಮಾಡಿ ಅಂಗಡಿಗಳಿಗೆ ತೆರಳಿ ಬಿಕ್ಷೆ ಬೇಡುತ್ತಾ ಇದ್ದ ವ್ಯಕ್ತಿಗೆ ಸ್ಥಳೀಯರು ಗೂಸ ನೀಡಿ ಕಳುಹಿಸಿರುವ ಬಗ್ಗೆ ವರದಿಯಾಗಿದೆ.ಅರಂತೋಡಿನಲ್ಲಿ ಬಾಡಿಗೆ ರೂಮಿನಲ್ಲಿ ವಾಸವಿದ್ದ ಗೂನಡ್ಕದ 43 ವರ್ಷದ ಉಮೇಶ್ ಪೂಜಾರಿ ಎಂಬ ವ್ಯಕ್ತಿ ಈ ರೀತಿ ವೇಷ ಹಾಕಿ ಬಿಕ್ಷಾಟನೆ ಮಾಡಿದವ ಹಲವು ಸಮಯಗಳಿಂದ ಅರಂತೋಡಿನಲ್ಲಿ ಹಲವರಿ ಉಪಟಳ ಮಾಡುತ್ತಿದ್ದ ಎಂದು ಹೇಳಲಾಗುತಿದೆ .ಆಟಿಕೆ ಪಿಸ್ತೂಲ್ ಹಿಡಿದು ಬೆದರಿಸುವ ತಂತ್ರ ಮಾಡುತ್ತಿದ್ದ ಎಂದು ಆರೋಪ ಈತನ ಮೇಲಿತ್ತು, ತನ್ನ ಆಸ್ತಿ ಮಾರಾಟ‌ ಮಾಡಿ ಕುಟುಂಬ ತೊರೆದು ಈ ರೀತಿಯ ಜೀವನ ಮಾಡುತ್ತಿದ್ದ ಎಂದು ಹೇಳಲಾಗಿದೆ, ನ.೨೩ ರಂದು ಅರಂತೋಡಿನಲ್ಲಿ ತಡರಾತ್ರಿ ಅಂಗಡಿಯವರಲ್ಲಿ ಹಣ ವಸೂಲಿ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳಿಯರು ಸರಿಯಾಗಿ ಗೂಸ ನೀಡಿ ಬುದ್ದಿ ಹೇಳಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ