ಮಂಗಳೂರು: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ: 132 ಕೆ.ಜಿ ಗಾಂಜಾ ಮತ್ತು ಕಾರು ಜಪ್ತಿ.

ಮಂಗಳೂರು: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ: 132 ಕೆ.ಜಿ ಗಾಂಜಾ ಮತ್ತು ಕಾರು ಜಪ್ತಿ.

ಮಂಗಳೂರು ಸೆನ್ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ
132 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ ಅರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ಅವರು ಸಾಗಿಸುತ್ತಿದ್ದ ಗಾಂಜಾ ಹಾಗೂ ವಾಹನ ವಶಪಡಿಸಿಕೊಂಡ ಘಟನೆ ವರದಿಯಾಗಿದೆ.ಆಂಧ್ರದ ವಿಶಾಖಪಟ್ಟಣಂ ನಿಂದ ತರುತ್ತಿದ್ದ ಗಾಂಜಾ ಎಂದು ತಿಳಿದು ಬಂದಿದೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ರಮೀಜ್,ಅಬ್ದುಲ್ ಖಾದರ್ ಬಂಧಿತ ಆರೋಪಿಗಳು
ಮಂಗಳೂರು ನಗರ ಹೊರವಲಯದ ಮುಡಿಪಿನ ಮುರ್ನಾಡು ಗ್ರಾಮದ ಕಾಯರ್ ಗೋಳಿಯಲ್ಲಿ ಕಾರ್ಯಾಚರಣೆ ನಡೆಸಿದ ಪೋಲಿಸರು ,ಬಂಧಿತರಿಂದ 132 ಕೆ.ಜಿ ಗಾಂಜಾ,ಶಸ್ತ್ರಾಸ್ತ್ರ ಸೇರಿದಂತೆ 39ಲಕ್ಷ ರೂಪಾಯಿ ಮೌಲ್ಯದ ಸೊತ್ತು ವಶಪಡಿಸಿ ಕೊಂಡಿದ್ದಾರೆ.ರಮೀಜ್ ಮೇಲೆ ಈ ಹಿಂದೆ ದಾಖಲಾಗಿರುವ ಆರು ಪ್ರಕರಣಗಳು ದಾಖಲಾಗಿದ್ದವು ಎಂದು ಬಂದಿದೆ ಅಬ್ದುಲ್ ಖಾದರ್ ಮೇಲೂ ಮೂರು ಪ್ರಕರಣಗಳು ದಾಖಲ ವಿಶಾಖಪಟ್ಟಣಂ ಕಾಡಿನಿಂದ ಗಾಂಜಾ ತಂದು ಮಂಗಳೂರು,ಉಡುಪಿ,ಕಾಸರಗೋಡಿನ ಹಲವು ಭಾಗದಲ್ಲಿ ಮಾರಾಟ ಮಾಡಲು ಸಂಚು ನಡೆಸುತ್ತಿದ್ದರು ಹೇಳಲಾಗಿದೆ.ಈ ಹಿಂದೆಯೂ ಹಲವು ಬಾರಿ ಗಾಂಜಾ ಸಾಗಾಟ ಮಾಡಿರುವ ಬಗ್ಗೆ ಮಾಹಿತಿ ಪೋಲಿಸರಿಗೆ ಇತ್ತು ಎಂದು ಹೇಳಲಾಗಿದೆ.ಆರೋಪಿಗಳ ಜೊತೆ ಮತ್ತಷ್ಟು ಗಾಂಜಾ ಮಾರಾಟಗಾರರು ಸೇರಿರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಪೋಲೀಸ್ ವಿಚಾರಣೆ ನಡೆದಿದೆ .ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಕುಮಾರ್ ಈ ಬಗ್ಗೆ ಮಾದ್ಯಮ ಮಾಹಿತಿ ನೀಡಿದ್ದಾರೆ.

ರಾಜ್ಯ