

ಸುಳ್ಯ: ತಾಲೋಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನಲೆಯಲ್ಲಿ ಸುಳ್ಯದಲ್ಲೂ ಹಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸುಳ್ಯ ನಗರದ ರೋಟರೀ ಪ್ರಾಥಮಿಕ ಶಾಲೆ, ಮತ್ತು ಪ್ರೌಢ ಶಾಲೆ, ಸೈಂಟ್ ಜೋಸೆಪ್ ,ಸೈಂಟ್ ಬ್ರಿಜಿಡ್ಸ್. ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿದೆ ,ಅಲ್ಲದೆ ಸುಭ್ರಹ್ಮಣ್ಯ ಭಾಗದಲ್ಲಿ ಭಾರೀ ಮಳೆಯ ಕಾರಣ ಕುಮಾರಾಧಾರ ನದಿ ಹಾಗೂ ಉಪನದಿಗಳು ಉಕ್ಕಿ ಹರಿಯುತ್ತಿದ್ದು ಇಲ್ಲಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ, ಎಸ್ ಎಸ್ ಪಿ ಯು ಸುಬ್ರಹ್ಮಣ್ಯ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ವಾಲ್ಮೀಕಿ ಆಶ್ರಮ ಶಾಲೆ ಸುಬ್ರಹ್ಮಣ್ಯ.ಸರಕಾರಿ
ಕಿರಿಯ ಪ್ರಾಥಮಿಕ ಶಾಲೆ ದೇವರಹಳ್ಳಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೇಲ್ಯಡ್ಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಲ್ಕುಂದ,ಹರಿಹರ ಕ್ಲಸ್ಟರ್ ನ ಎಲ್ಲಾ ಶಾಲೆಗಳು ಈ ಶಾಲೆಗಳಿಗೆ ಜು.24 ರಂದು ಮಳೆ ಕಾರಣ ರಜೆ ಘೋಷಿಸಲಾಗಿದೆ. ಈ ದಿನದ ರಜೆಯನ್ನು ಮುಂದಿನ 2 ಶನಿವಾರಗಳಂದು ತರಗತಿ ನಡೆಸಿ ಮರುಹೊಂದಿಸಲು ಸೂಚಿಸಿದೆ.ನಗರದಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ತರಗತಿ ನಡೆಸಲು ತೀರ್ಮಾನಿಸಿದ್ದು,ಭಾರೀ ಮಳೆಯ ಸೂಚನೆ ಇದ್ದಲ್ಲಿ ರಜೆ ನೀಡುವ ತೀರ್ಮಾನಕ್ಕೆ ಬರಲಿದ್ದಾರೆ.