ರಾಜ್ಯ

ಕಂದಕಕ್ಕೆ ಉರುಳಿದ ಸೇನಾ ಟ್ರಕ್ : 16 ಸೇನಾ ಯೋಧರು ಹುತಾತ್ಮ.

ಸಿಕ್ಕಿಂ: ಸೇನಾ ಟ್ರಕ್‌ವೊಂದು ರಸ್ತೆ
ಅಪಘಾತಕ್ಕೆ ಒಳಗಾದ ಪರಿಣಾಮ ವಾಹನದ ಒಳಗಿದ್ದ
16 ಮಂದಿ ಭಾರತೀಯ ಯೋಧರು ಹುತಾತ್ಮರಾದ
ಘಟನೆಯು ಉತ್ತರ ಸಿಕ್ಕಿಂನ ಝೀಮಾ ಎಂಬಲ್ಲಿ
ಸಂಭವಿಸಿದೆ. ಝೀಮಾದ ಕಡಿದಾದ ತಿರುವಿನಲ್ಲಿ
ವಾಹನವನ್ನು ಇಳಿಸುತ್ತಿದ್ದ ಸಂದರ್ಭದಲ್ಲಿ ವಾಹನವು
ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ
ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಉತ್ತರ ಸಿಕ್ಕಿಂನಲ್ಲಿ ಅಪಘಾತಕ್ಕೀಡಾದ ಭಾರತೀಯ
ಸೇನಾ ವಾಹನವು ಚಾಟೆನ್‌ನಿಂದ ಥಾಂಗು ಪ್ರದೇಶಕ್ಕೆ
ತೆರಳುತ್ತಿದ್ದ ಮೂರು ವಾಹನಗಳ ಬೆಂಗಾವಲಿನ
ಭಾಗವಾಗಿತ್ತು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ
ಹುತಾತ್ಮರಾದ ಯೋಧರ ಬಗ್ಗೆ ಇನ್ನಷ್ಟೇ ಮಾಹಿತಿ
ತಿಳಿಯಬೇಕಿದೆ.

Leave a Response

error: Content is protected !!