ರಾಜ್ಯ

ನೆಹರುನಗರದಲ್ಲಿ ರೈಲ್ವೇ ಮೇಲ್ಸೇತುವೆ ಪುನರ್‌ನಿರ್ಮಾಣ ಹಿನ್ನೆಲೆ:ಸಂಚಾರಕ್ಕೆ ತಾತ್ಕಾಲಿಕ ತಡೆ-ಮುರ ಪರ್ಯಾಯ ರಸ್ತೆ ಬಳಸಲು ಸೂಚನೆ.

ಪುತ್ತೂರು: ಕಿ.ಮೀ 42/300-400 ಕಬಕ ಪುತ್ತೂರು – ನೇರಳಕಟ್ಟೆ ರೈಲು ನಿಲ್ದಾಣಗಳ ನಡುವೆ ಇರುವ ಮೇಲ್ಸೇತುವೆ ಸಂಖ್ಯೆ 520 ಇದರ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಸೌತ್ ವೆಸ್ಟರ್ನ್ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲ್ವೇ ಮೇಲ್ಸೇತುವೆ ಪುನರ್‌ನಿರ್ಮಾಣಕ್ಕೆ ಸಂಬಂಧಿಸಿ ನ.15ರಿಂದ ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ರಸ್ತೆ ಮುಚ್ಚಲು ಜಿಲ್ಲಾಧಿಕಾರಿಯವರು ಅನುಮತಿ ನೀಡಿದ್ದರು. ನ.17ರಿಂದ ಮುಂದಿನ ಮೂರು ತಿಂಗಳು ನೆಹರುನಗರ ವಿವೇಕಾನಂದ ರಸ್ತೆಯನ್ನು ಮುಚ್ಚಲಾಗುವುದು ಎಂದು ರೈಲ್ವೇ ಸೌತ್‌ವೆಸ್ಟರ್ನ್ ರೈಲ್ವೇಯ ಸಕಲೇಶಪುರ ವಿಭಾಗದ ಸಹಾಯಕ ವಿಭಾಗೀಯ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುರದಿಂದ ಪರ್ಯಾಯ ರಸ್ತೆ:
ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿದ ಬಳಿಕ ಲಘು ವಾಹನಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಮುರದಿಂದ ತೆರಳಲು ಅವಕಾಶವಿದೆ. ಉಳಿದಂತೆ ಹಾರಾಡಿ ಬನ್ನೂರು, ಪಡೀಲು ರಸ್ತೆಯಾಗಿಯೂ ಕಾಲೇಜು ರಸ್ತೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

Leave a Response

error: Content is protected !!