ಉಪ್ಪಿನಂಗಡಿ: ಅಡಿಕೆ ಅಂಗಡಿಯಿಂದ 1ಲಕ್ಷ ರೂ. ಕಳ್ಳತನ.

ಉಪ್ಪಿನಂಗಡಿ: ಅಡಿಕೆ ಅಂಗಡಿಯಿಂದ 1ಲಕ್ಷ ರೂ. ಕಳ್ಳತನ.

ಉಪ್ಪಿನಂಗಡಿ: ಇಲ್ಲಿನ ರಾಜಧಾನಿ ಟವರ್ಸ್ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮಾರಾಟ ಅಂಗಡಿಯಿಂದ ಹಾಡ ಹಗಲೇ ಒಂದು ಲಕ್ಷ ರೂಪಾಯಿ ಹಣವನ್ನು ಕದ್ದೊಯ್ದ ಘಟನೆ ನ.15ರಂದು ಸಂಭವಿಸಿದೆ.
ಅಡಿಕೆ ವ್ಯಾಪಾರಿ ಮಧ್ಯಾಹ್ನ ಊಟಕ್ಕೆಂದು ಹೋಗುವ ವೇಳೆ ಕ್ಯಾಶ್ ಡ್ರಾವರ್ ಗೆ ಬೀಗ ಹಾಕಿ , ಅಂಗಡಿಯ ಶಟರ್ ನ್ನು ಅರ್ಧಾಂಶ ಎಳೆದು ಹೋಗಿದ್ದರು. ಊಟ ಮುಗಿಸಿ ವಾಪಾಸು ಬರುವ ವೇಳೆಗೆ ಅಂಗಡಿಯೊಳಗಿನ ಕ್ಯಾಶ್ ಡ್ರಾವರ್ ತೆರೆಯಲ್ಪಟ್ಟಿದ್ದು, ಯಾರೋ ಕಳ್ಳರು ಅಂಗಡಿಯೊಳಗೆ ನುಗ್ಗಿ ಕ್ಯಾಶ್ ಡ್ರಾವರ್ ಬೀಗ ಮುರಿದು ಅದರೊಳಗಿದ್ದ ಒಂದು ಲಕ್ಷ ರೂಪಾಯಿ ನಗದನ್ನು ಕದ್ದೊಯ್ದಿರುವುದು ಗಮನಕ್ಕೆ ಬಂದಿದೆ.
ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರಿಂದ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಆದಾಗ್ಯೂ ಅಂಗಡಿಯೊಳಗೆ ನುಗ್ಗಿರುವ ವ್ಯಕ್ತಿಯ ಬಗ್ಗೆ ಪೊಲೀಸ್ ಇಲಾಖೆ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದು, ಕಳ್ಳನನ್ನು ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ರಾಜ್ಯ