ಪರಪ್ಪೆಯಲ್ಲಿ ಇನ್ನೋವ ಕಾರು ಅಪಘಾತ: ಮದುವೆ ದಿಬ್ಬಣಕ್ಕೆಂದು ಹೊರಟ ತಾಯಿ ಮತ್ತು ಮಗುವಿನ ಧಾರುಣ ಅಂತ್ಯ: ಮೃತಪಟ್ಟವರು ಸುಳ್ಯ ಮೂಲದವರು:

ಪರಪ್ಪೆಯಲ್ಲಿ ಇನ್ನೋವ ಕಾರು ಅಪಘಾತ: ಮದುವೆ ದಿಬ್ಬಣಕ್ಕೆಂದು ಹೊರಟ ತಾಯಿ ಮತ್ತು ಮಗುವಿನ ಧಾರುಣ ಅಂತ್ಯ: ಮೃತಪಟ್ಟವರು ಸುಳ್ಯ ಮೂಲದವರು:

ಜಾಲ್ಸೂರು – ಕಾಸರಗೋಡು ರಸ್ತೆಯ ಪರಪ್ಪೆ ಬಳಿ
ಮದುವೆ ದಿಬ್ಬಣ ಹೋಗುತ್ತಿದ್ದ ಇನೋವಾ ಕಾರೊಂದು
ಸ್ಕಿಡ್ ಆಗಿ ಪಲ್ಟಿ ಹೊಡೆದ ಪರಿಣಾಮವಾಗಿ ಆ
ವಾಹನದಲ್ಲಿದ್ದ ಸುಳ್ಯ ಮೂಲದ ತಾಯಿ ಮತ್ತು ಮಗು
ಮೃತಪಟ್ಟು ನಾಲ್ವರು ತೀವ್ರ ಜಖಂಗೊಂಡ ಘಟನೆ ಡಿ12. ಸಂಜೆ ನಡೆದಿದೆ.


ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲಾ ಎಂಬವರ
ಪುತ್ರಿ, ಪರಪ್ಪೆಯ ಶಾನ್ ಎಂಬವರ ಪತ್ನಿ ೨೮ ವರ್ಷದ
ಶಾಹಿನಾ ಹಾಗೂ ಮಗು ೩ ವರ್ಷ ಪ್ರಾಯದ ಶಜಾ
ಮೃತಪಟ್ಟಿದ್ದಾರೆ. ಇನೋವಾ ಕಾರಲ್ಲಿದ್ದ ಇನ್ನು ನಾಲ್ವರು
ತೀವ್ರ ಜಖಂಗೊಂಡಿದ್ದು, ಅವರನ್ನು ಕಾಸರಗೋಡು
ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದುಬಂದಿದೆ. ಮೃತಪಟ್ಟ ತಾಯಿ ಮತ್ತು ಮಗುವಿನ ಮೃತದೇಹಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ತರಲಾಗಿದೆ. ಇದೀಗ ಅಪಘಾತ ನಡೆದ ಸ್ಥಳ ಕರ್ನಾಟಕ ಅಥವಾ ಕೇರಳ ಪ್ರದೇಶವ ಎಂದು ಇನ್ನೂ ಇತ್ಯರ್ಥ ಆಗಿಲ್ಲ ಸ್ಥಳದಲ್ಲಿ ಕೇರಳ ಪೋಲಿಸ್ ಮತ್ತು ಕರ್ನಾಟಕ ಪೋಲಿಸ್ ಧಾವಿಸಿದ್ದಾರೆ.ಸ್ಥಳದಲ್ಲಿ ಕೆಬಲ್ ಹಾಕಲು ಗುಂಡಿ ತೋಡಿದ್ದು ಈ ಭಾಗದಲ್ಲಿ ಒಂದು ವಾಹನ ಮಾತ್ರ ಸಂಚಾರ ಮಾಡಲು ಸಾಧ್ಯವಿದ್ದು ಮಳೆ ಇದ್ದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ಮದುವೆ ಹೆಣ್ಣನ್ನು ಪೈಂಬೇಚಾಲ್ ಕರೆದು ತರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇವರ ಉಳಿದ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬಂದ ಹಿನ್ನಲೆಯಲ್ಲಿ ಅವರು ಅದೃಷ್ಟವಶಾತ್ ಪಾರಾಗಿದ್ದಾರೆ.ಮಹಿಳೆ ಚಾಲಕನ ಸೀಟಿನ ಹಿಂಬಾಗದ ಸೀಟಿನಲ್ಲಿ ಕುಳಿತ್ತಿದ್ದು ಅಪಘಾತ ಸಂಭವಿಸುವ ಸಂದರ್ಭದಲ್ಲಿ ಅವರ ತಲೆ ಮರವೊಂದಕ್ಕೆ ತಾಗಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಕಾರು ಇನ್ನು ಮುಂದೆ ಹೋದಲ್ಲಿ ಹೊಳೆಗೆ ಬೀಳುವ ಸಾದ್ಯತೆ ಎಂದು ಹೇಳಲಾಗಿದೆ.

ರಾಜ್ಯ