

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಾರ್ಕೋಡು ಕೋಲ್ಚಾರ್ ಕನ್ನಡಿತೋಡು ಮೂಲಕ ಅಂತರ್ ರಾಜ್ಯ ಸಂಪರ್ಕದ ಮುಖ್ಯ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ಕಳೆದ 4 ವರ್ಷಗಳ ಹಿಂದೆ ಶಾಸಕ ಎಸ್.ಅಂಗಾರ ರವರು ಕೋಲ್ಚಾರಿನಲ್ಲಿ ಗುದ್ದಲಿ
ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.
ಅನುದಾನ ರೂ. 10.5 ಕೋಟಿ ಬಿಡುಗಡೆಗೊಂಡು
ಜೆ.ಡಿ.ಸುವರ್ಣ ಎಂಬ ಗುತ್ತಿಗೆದಾರರು ಕಾಮಗಾರಿ ಕೆಲಸ ಮಾಡುತ್ತಿದ್ದರು.ರಸ್ತೆಅಗಲೀಕರಣದ ಅರ್ಥ್ ವರ್ಕ್ ಮುಗಿದು ಇದೀಗ ಅಂತಿಮ ಹಂತದ ಡಾಮರೀಕರಣ ಕೆಲಸ ನಡೆಯುತ್ತಿದ್ದು ಕಾಮಗಾರಿಯು ಅತ್ಯಂತ ಕಳಪೆ ಮಟ್ಟದಾಗಿದೆ ಎಂದು ಆರೋಪಿಸಿ ಸ್ಥಳೀಯ ಊರಿನ ನಾಗರಿಕರು ಸೇರಿ ಪ್ರತಿಭಟನೆ ಕೈಗೊಂಡು ಪರಿಶೀಲನೆಯ ಪಾದಯಾತ್ರೆ ಮಾಡಿದ ಘಟನೆ ವರದಿಯಾಗಿದೆ.

ನಾರ್ಕೋಡಿನಿಂದ ಕನ್ನಡಿ ತೋಡಿನವರೆಗೆ ಕಳೆದ ವಾರವಷ್ಟೇ ಹಾಕಿರುವ ಡಾಮರೀಕರಣ ಅವೈಜ್ಞಾನಿಕವಾಗಿ ನಿರ್ವಹಿಸಿದ್ದು ಈಗಾಗಲೇ ಎದ್ದು ಹೋಗಿವೆ. ರಸ್ತೆಯ ಮಣ್ಣಿನ ಮೇಲೆ ಜಲ್ಲಿ ಹಾಕದೆ ಬರಿ ಕಳಪೆ ಗುಣ ಮಟ್ಟದ ಡಾಮರು ಮಾತ್ರ ಹಾಕಿದ್ದಾರೆ.
ಜಲ್ಲಿ ಹಾಕಿ ಸಮರ್ಪಕ ರೀತಿಯಲ್ಲಿ ಕೆಲಸ ನಿರ್ವಹಿಸದೆ ಕಳಪೆ ಗುಣ ಮಟ್ಟದ ಕಾಮಗಾರಿ ಕೆಲಸ ನಿರ್ವಹಿಸಿರುವುದನ್ನು ಮನಗಂಡ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹಾಕಲಾರಂಭಿಸಿದರು. ಇದರ ಕುರಿತು ಸಾಧಕ ಬಾಧಕಗಳನ್ನು ಚರ್ಚಿಸಿ ಪ್ರತಿಭಟನೆ ಮಾಡುವ ನಿರ್ಧಾರ ಮಾಡಲಾಯಿತು.
ದೊಡ್ಡ ಮೊತ್ತದ ಅನುದಾನವಿದ್ದರೂ ಈ ರೀತಿಯ ಕಾಮಗಾರಿ ನಿರ್ವಹಿಸಿ ಜನತೆಗೆ ಸಮಾಜಕ್ಕೆ ದ್ರೋಹ ಮಾಡುತ್ತಿರುವುದನ್ನು ಖಂಡಿಸುವುದಾಗಿ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಬರಲೇಬೇಕೆಂದು ಪ್ರತಿಭಟನಾ ನಿರತ ಸಾರ್ವಜನಿಕರು ಪಟ್ಟು ಹಿಡಿದರು.

ಸಚಿವ ಎಸ್ .ಅಂಗಾರ ರವರು ಕೇರಳದ ಕಡೆಗೆ ಸಂಚರಿಸುವಾಗ ಸ್ಥಳೀಯರು ವಿಷಯವನ್ನು
ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು
ಇಂಜಿನಿಯರ್ ರವರಿಗೆ ದೂರವಾಣಿ ಮೂಲಕ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಸ್ಥಳಕ್ಕೆ ಬಂದ ಲೋಕೋಪಯೋಗಿ ಇಂಜಿನಿಯರ್ ಲೋಕೇಶ್ ಮತ್ತು ಪರಮೇಶ್ವರ್ ಹಾಗೂ ಗುತ್ತಿಗೆದಾರರ ಪೃಥ್ವಿ ಯವರನ್ನು ಕಳಪೆ ಕಾಮಗಾರಿ ಕುರಿತು ಪ್ರತಿಭಟನಾ ನಿರತರು ತರಾಟೆಗೆತ್ತಿಕೊಂಡರು.

ಡಾಮರೀಕರಣ ಮಾಡಿದ ರಸ್ತೆಯ ಗುಣ ಮಟ್ಟವನ್ನು ಪರಿಶೀಲಿಸುವಂತೆ ಆಗ್ರಹಿಸಿ
ಕೋಲ್ಟಾರಿನಿಂದ ಕನ್ನಡಿತೋಡುವರೆಗೆ ಸುಮಾರು 6
ಕಿ.ಮೀ.ನಷ್ಟು ಕಾಲ್ನಡಿಗೆಯಲ್ಲಿ ಕರೆದುಕೊಂಡು
ಹೋಗಲಾಯಿತು. ಅಲ್ಲಲ್ಲಿ ಕಾಮಗಾರಿ ಕಳಪೆಯಾಗಿರುವುದನ್ನು ಊರವರು ಕೈಯಲ್ಲಿ ತೆಗೆದು ತೋರಿಸಿದರು. ಅಸರ್ಮಪಕ ಕಾಮಗಾರಿ ಆಗಿರುವುದನ್ನು ಪರಿಶೀಲನೆ ನಡೆಸಿದ
ಇಂಜಿನಿಯರ್ ರವರು ಒಂದು ವಾರದೊಳಗೆ
ಮೇಲಾಧಿಕಾರಿಗಳ ಗಮನಕ್ಕೆ ತಂದು ಗುತ್ತಿಗೆದಾರರನ್ನು ಕರೆಸಿ ಸಮರ್ಪಕ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ
ನಿರ್ವಹಿಸುವಂತೆ ಸೂಚಿಸುತ್ತೇವೆ ಕಾಮಗಾರಿ ಕಳಪೆಯಾಗಿರುವ ಎಲ್ಲಾ ಕಡೆಗಳಲ್ಲಿ ಮತ್ತೆ
ಮರುಡಾಮರೀಕರಣ ಮಾಡಿಸುತ್ತೇವೆ ಎಂದು
ತಿಳಿಸಿದರು ಮುಂದಿನ ಒಂದು ವಾರದೊಳಗೆ
ಗುತ್ತಿಗೆದಾರರನ್ನು ಕರೆಸಿ ಸಮರ್ಪಕ ಕಾಮಗಾರಿ ನಿರ್ವಹಿಸುವ ಬಗ್ಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರಾದ
ಪಂಚಾಯತ್ ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಮಾಜಿ ಉಪಾಧ್ಯಕ್ಷ ಹರೀಶ್ ಕೊಯಿಂಗಾಜೆ, ನ್ಯಾಯವಾದಿ ಸತೀಶ್ ಕುಂಭಕ್ಕೋಡು,ಪಂಚಾಯತ್ ಸದಸ್ಯೆ ಶಂಕರಿ ಕೊಲ್ಲರಮೂಲೆ, ಆಲೆಟ್ಟಿ ಸೊಸೈಟಿ ನಿರ್ದೇಶಕ ಸುದರ್ಶನ ಪಾತಿಕಲ್ಲು, ಜಗದೀಶ್
ಕೂಳಿಯಡ್ಕ ಪ್ರಣೀತ್ ಕಣಕ್ಕೂರು, ಯಶಸ್ ಕೊಯಿಂಗಾಜೆ, ಪ್ರದೀಪ್ ಕೊಲ್ಲರಮೂಲೆ, ನೀಲಕಂಠ ಕೊಲ್ಲರಮೂಲೆ, ಚಿದಾನಂದ ಕೋಲ್ಟರು, ವಿನೋದ್ ಕೊಯಿಂಗಾಜೆ, ಮಣಿಕಂಠ ಹಾಸ್ಪಾರೆ, ಕಮಲಾಕ್ಷ ಕೊಯಿಂಗಾಜೆ, ಸಜೇಶ್ ಕೊಯಿಂಗಾಜೆ, ಲಕ್ಷ್ಮಣ
ಕಣಕ್ಕೂರು, ಬಾಲಕೃಷ್ಣ ಕಣಕ್ಕೂರು, ಹರೀಶ್
ಕೋಲ್ಚಾರು, ಜಯರಾಜ್ ಕಣಕ್ಕೂರು, ಹೇಮಾವತಿ ಕುಡೆಂಬಿ,ಪುರುಷೋತ್ತಮ ಕುಂಭಕ್ಕೋಡು, ಮತ್ತಿತರರು ಭಾಗವಹಿಸಿದರು.