ರಾಜ್ಯ

ದ.ಕ:ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ನಂದಕುಮಾರ್ ಅಭಿಮಾನಿಗಳು|ಸುಳ್ಯ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸಲು ಒತ್ತಯ: ಮಂಗಳೂರಿನಲ್ಲಿ ಪ್ರತಿಭಟನೆ.

ಸುಳ್ಯ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸಲು 15 ಬಸ್ ಗಳಲ್ಲಿ ಮಂಗಳೂರಿಗೆ ಬಂದ ನಂದಕುಮಾರ್ ಅಭಿಮಾನಿಗಳು ಅಭ್ಯರ್ಥಿಯನ್ನು ಬದಲಾಯಿಸಬೇಕೆಂದು ಪಟ್ಟುಹಿಡಿದಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಘೋಷಿಸಿರುವ ಅಭ್ಯರ್ಥಿ ಜಿ. ಕೃಷ್ಣಪ್ಪ ಅವರನ್ನು ಬದಲಿಸಬೇಕು ಎಂದು ಒತ್ತಾಯಿಸಿ ಸುಳ್ಯ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿಗೆ ಬಂದು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆಗೆ ಕುಳಿತಿದ್ದಾರೆ.
ನಾಯಕರ ಅಭ್ಯರ್ಥಿ ನಮಗೆ ಬೇಡ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು’. ‘ನಂದಕುಮಾರ್ ಅವರಿಗೆ ಬಿ ಫಾರ್ಮ್ ಕೊಡಿ, ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಡುತ್ತೇವೆ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಫಲಕಗಳನ್ನು ಹಿಡಿದು ಕಾಂಗ್ರೆಸ್ ಕಚೇರಿ ‌ಎದುರು ಪ್ರತಿಭಟನೆಗೆ ಕುಳಿತಿದ್ದಾರೆ. ಈ ಕುರಿತು ಪಕ್ಷದ ವರಿಷ್ಠರು ನ್ಯಾಯ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.ಜಿಲ್ಲಾಕಚೇರಿಯಲ್ಲಿ ಕೆಪಿಸಿಸಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಕಿವಿಗೆ ತಲುಪದ ಕೂಗು


ಆದರೆ ನಿನ್ನೆ ನಡೆದ ಕೆಪಿಸಿಸಿ ಸಭೆಯಲ್ಲಿ ರಾಜ್ಯದ ನಾನಾ ಭಾಗದ ಅಸಮದಾನಿತರ ಕುರಿತು ಚರ್ಚೆ ನಡೆಸಿದ್ದರು ಸುಳ್ಯ ಕ್ಷೇತ್ರದಲ್ಲಿರುವ ಬಿನ್ನಭಿಪ್ರಾಯ ಕೆ ಪಿ ಸಿ ಸಿ ವರೆಗೆ ತಲುಪಿಲ್ಲ ಎಂದೂ ಹೇಳಲಾಗುತ್ತಿದೆ, ಮತ್ತು ಇಲ್ಲಿಯ ವಿಚಾರ ಸಭೆಯಲ್ಲಿ ಚರ್ಚೆಯಾಗಿಲ್ಲ , ಸುಳ್ಯದ ನಂದಕುಮಾರ್ ಅಭಿಮಾನಿ ಕಾರ್ಯಕರ್ತರು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಲ್ಲಿ , ಸುಳ್ಯದ ಕಾಂಗ್ರೇಸ್ ಅಸಮದಾನ ರಾಜ್ಯ ಹಾಗು ರಾಷ್ಟ್ರ ಮಟ್ಟಕ್ಕೂ ತಲುಪಲಿದೆ.


ಇಂದಿನ ಪ್ರತಭಟನೆಯಲ್ಲಿ ಸುಳ್ಯ ಹಾಗೂ ಕಡಬ ತಾಲೋಕಿನ ಕಾಂಗ್ರೇಸ್ ಮುಖಂಡರಾದ ,ಗೋಕುಲ್ ದಾಸ್, ಭವಾನಿ ಶಂಕರ ಕಲ್ಮಡ್ಕ, ಸತ್ಯಕುಮಾರ್ ಆಡಿಂಜ, ಸಚಿನ್ ರಾಜ್ ಶೆಟ್ಟಿ, ಅನಿಲ್ ರೈ, ಬಾಗೇಶ್ ಕೆ ಟಿ, ಚೇತನ್ ಕಜೆಗದ್ದೆ, ಬಾಲಕೃಷ್ಣ ಬಲ್ಲೇರಿ, ಗಣೇಶ್ ಕೈಕುರೆ, ಉಷಾ ಅಂಚನ್, ವಿಜಯಕುಮಾರ್ ಸೇರಿದಂತೆ 500 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

Leave a Response

error: Content is protected !!