

ಬಿಗ್ ಬಾಸ್ ಸೀಸನ್ 9 | ತುಳುನಾಡ ಕುವರ ರೂಪೇಶ್ ಶೆಟ್ಟಿ ವಿನ್ನರ್ ಖ್ಯಾತ ಕಿರುತೆರೆ ಕಾರ್ಯಕ್ರಮ ಬಿಗ್‌ಬಾಸ್ 9 ನೇ ಸೀಸನ್ ಗೆ ಅಧಿಕೃತ ತೆರೆ ಬಿದ್ದಿದ್ದು, ಕರಾವಳಿ ಮೂಲದ ನಟ ರೂಪೇಶ್ ಶೆಟ್ಟಿ ಅವರು ವಿಜಯಿಯಾಗಿದ್ದಾರೆ.
ಹಲವು ತುಳು ಚಲನಚಿತ್ರಗಳಲ್ಲಿ ನಟಿಸಿರುವ ರೂಪೇಶ್ ಶೆಟ್ಟಿ, ಕನ್ನಡದ ಇನ್ನೋರ್ವ ನಟ ರಾಕೇಶ್ ಅಡಿಗ ಅವರನ್ನು ಹಿಂದೆ ತಳ್ಳಿ ಬಿಗ್ ಬಾಸ್ ವಿನ್ನರ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.ರೋಪೇಶ್ ಶೆಟ್ಟಿ ಹುಲಿ ವೇಷ ನರ್ತನ ಕರಾವಳಿಗರ ಮನಸೂರೆಗೊಂಡಿತ್ತು, ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಹುಲಿವೇಷ ತಂಡದೊಂದಿಗೆ ರೂಪೇಶ್ ಸಖತ್ ಸ್ಟೆಪ್ ಹಾಕುವುದರ ಮೂಲಕ,ಬಿಗ್ ಬಾಸ್ 9 ಸೀಸನ್ ನಲ್ಲೂ ವಿಜಯದ ಸ್ಟೆಪ್ ಹಾಕಿದ್ದಾರೆ, ಬರೋಬ್ಬರಿ 60 ಲಕ್ಷ ತನ್ನದಾಗಿಸಿಕೊಂಡಿದ್ದಾರೆ, ರೂಪೇ ಶ್ ಬಿಗ್ಬಾಸ್ ವಿನ್ನರ್ ಆಗುವುದರ ಮೂಲಕ ತುಳುನಾಡ ಕುವರ ಆದರೂ ..ಕನ್ನಡಿಗರ ಕಣ್ಮಣಿ ಆಗಿದ್ದಾರೆ.
add a comment