ವಿದ್ಯಾರ್ಥಿಗಳ ಬಸ್ ಪಾಸಿನಲ್ಲಿ ಪುತ್ತೂರು ಬದಲು  ಬೊಳುವಾರು ನಮೂದನೆ, ತೊಂದರೆಗೊಳಗಾದ ಪುತ್ತೂರಿನ ಕಾಲೇಜು ವಿದ್ಯಾರ್ಥಿಗಳಿಂದ ಶಾಸಕರಿಗೆ ದೂರು.

ವಿದ್ಯಾರ್ಥಿಗಳ ಬಸ್ ಪಾಸಿನಲ್ಲಿ ಪುತ್ತೂರು ಬದಲು  ಬೊಳುವಾರು ನಮೂದನೆ, ತೊಂದರೆಗೊಳಗಾದ ಪುತ್ತೂರಿನ ಕಾಲೇಜು ವಿದ್ಯಾರ್ಥಿಗಳಿಂದ ಶಾಸಕರಿಗೆ ದೂರು.

 

ಉಪ್ಪಿನಂಗಡಿ ಕಡೆಯಿಂದ ಪುತ್ತೂರಿಗೆ ಆದೇಷ್ಟೂ ವಿದ್ಯಾರ್ಥಿಗಳು ತಮ್ಮ ತಮ್ಮ ವಿದ್ಯಾಭ್ಯಾಸಕೆಂದು ಹೋಗುತ್ತಾರೆ ಈಗಿರುವಾಗ ದಿನನಿತ್ಯ ಹೋಗಿ ಬರುವ ವಿದ್ಯಾರ್ಥಿಗಳು ಇದರಲ್ಲಿ ಆನೇಕರು ಇದ್ದಾರೆ ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಬಸ್ಸ್ ಪಾಸ್ ಮಾಡಿಕೊಳ್ಳುತ್ತಾರೆ ಅದರಲ್ಲಿ ಪುತ್ತೂರಿನ ನಗರ , ವಿಟ್ಲ ಕಡೆಗೆ ಹೋಗುವ ವಿದ್ಯಾರ್ಥಿಗಳು ಪ್ರತಿ ವರ್ಷ ಪುತ್ತೂರು ಬಸ್ಸು ನಿಲ್ದಾಣಕ್ಕೆ ತೆರಳಿ ಅಲ್ಲಿಂದ ತಮ್ಮ ಕಾಲೇಜಿನ ಕಡೆಗೆ ತೆರಳುತ್ತಿದ್ದರು ಅಂದರೆ ಇಲ್ಲಿ ಪುತ್ತೂರು ಅನ್ನುವುದು ಮಾರ್ಗ ಬದಲಾವಣೆ ಸ್ಥಳವಾಗಿತ್ತು ಆದರೇ ಈ ವರ್ಷದ ಬಸ್ಸ್ ಪಾಸ್ ವಿತರಣೆಯ ಸಮಯದಲ್ಲಿ D.C ಯ ಆದೇಶದಂತೆ ಪುತ್ತೂರು ಮಾರ್ಗ ಬದಲಾವಣೆ ಆಯ್ಕೆ ಕೊಡದೇ ಬೊಳುವಾರು ಎಂದು ಕೊಟ್ಟಿರುವ ಘಟನೆ ನಡೆದಿದೆ. ಇದರಿಂದ ಆನೇಕ ವಿಧ್ಯಾರ್ಥಿಗಳಿಗೆ ನಾನ ರೀತಿಯಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಶೋಕ್ ರೈ ಶಾಸಕರನ್ನು ಬೇಟಿ ಮಾಡಿ ಸಮಸ್ಯೆಯನ್ನು ಹೇಳಿದ ತಕ್ಷಣ D.C ಯವರಿಗೆ ಕರೆ ಮಾಡಿ ತಕ್ಷಣ ಆ ನಿಯಮವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದರು.ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಧನುಶ್ ಮತ್ತು ವಿಶೃತ್ ಉಪಸ್ಥಿತರಿದ್ದರು.

ರಾಜ್ಯ