ಸುಳ್ಯ ನಗರದಲ್ಲಿ ಸೌಜನ್ಯ ಪರ ಹಾಕಲಾಗಿದ್ದ ಬ್ಯಾನರ್ ಗಳ ತೆರವು : ನಗರ ಪಂಚಾಯತ್ ಕಾರ್ಯಾಚರಣೆ.ಜಾಲತಾಣದಲ್ಲಿ ಪರ ವಿರೋಧ ಚರ್ಚೆ.

ಸುಳ್ಯ ನಗರದಲ್ಲಿ ಸೌಜನ್ಯ ಪರ ಹಾಕಲಾಗಿದ್ದ ಬ್ಯಾನರ್ ಗಳ ತೆರವು : ನಗರ ಪಂಚಾಯತ್ ಕಾರ್ಯಾಚರಣೆ.
ಜಾಲತಾಣದಲ್ಲಿ ಪರ ವಿರೋಧ ಚರ್ಚೆ.

ಸುಳ್ಯ ನಗರದ ಅಲ್ಲಲ್ಲಿ ಅಳವಡಿಸಲಾಗಿದ್ದ ನಿನ್ನೆ ರಾತ್ರಿ ಸೌಜನ್ಯ ಪರ ಬ್ಯಾನರ್ ಗಳನ್ನು ಇಂದು ಬೆಳಗ್ಗಿನ ಜಾವ ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯದಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗಾಂಧಿ ಸ್ಮೃತಿ, ಜನಜಾಗೃತಿ ಜಾಥಾ ಮತ್ತು ಸಮಾವೇಶ ನಡೆಯುತ್ತಿದೆ. ಈ ಮಧ್ಯೆ ನಿನ್ನೆ ರಾತ್ರಿ ನಗರದ ಹಲವೆಡೆ ಸೌಜನ್ಯ ಪರ ಬ್ಯಾನರ್ ಗಳು ಪ್ರತ್ಯಕ್ಷಗೊಂಡಿತ್ತು. ಅನುಮತಿ ಪಡೆಯದೆ ಈ ಬ್ಯಾನರ್ ಹಾಕಲಾಗಿರುವುದರಿಂದ ನ.ಪಂ.ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆಂದು ತಿಳಿದುಬಂದಿದೆ. ಆದರೆ ಇದಕ್ಕೆ ಪರವಾನಿಗೆ ಅವಧಿ ಮುಗಿದಿರಲಿಲ್ಲ ಎಂದು ಪ್ರತಿವಾಧಿಗಳು ಹೇಳುತ್ತಿದ್ದಾರೆ, ಒಟ್ಟಿನಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆ ಆರಂಭವಾಗಿದೆ.

.

Uncategorized ರಾಜ್ಯ