ಅಕ್ರಮ ಗೋ ಸಾಗಾಟ : ಆರೋಪಿಗಳು ಸೆರೆ.

ಅಕ್ರಮ ಗೋ ಸಾಗಾಟ : ಆರೋಪಿಗಳು ಸೆರೆ.

ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಸೆ. 18ರಂದು ಕುತ್ಲೂರು ಗ್ರಾಮದ ಕುತ್ಲೂರು ಎಂಬಲ್ಲಿ ಪತ್ತೆ ಹಚ್ಚಿರುವ ವೇಣೂರು ಠಾಣಾ ಪೊಲೀಸರು ಈರ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಯಾವುದೇ ಪರವಾನಿಗೆ ಇಲ್ಲದೆ ಗೋವಧೆ ನಡೆಸಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜೀಪಿನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ವೇಣೂರು ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು 1 ಗಂಡು ಕರು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಜೀಪನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಕೇರಳದ ಇಡ್ಕಿ ಜಿಲ್ಲೆಯ ತೋಡುಪುಡ ತಾಲೂಕಿನ ಜಿನು ತೋಮಸ್ (34ವ) ಮತ್ತು ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ರಂಜಿತ್ (31ವ ) ಎಂಬವರ ವಿರುದ್ಧ ವೇಣೂರು ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020ರಂತೆ ಪ್ರಕರಣ ದಾಖಲಿಸಲಾಗಿದೆ

ರಾಜ್ಯ