ಸುಳ್ಯ ಇನ್ನರ್ ವ್ಹೀಲ್ ನಿಂದ ವಿದ್ಯಾರ್ಥಿಗಳಿಗೆ ಸ್ವ ರಕ್ಷಣಾ ಮಾಹಿತಿ ಕಾರ್ಯಕ್ರಮ.

ಸುಳ್ಯ ಇನ್ನರ್ ವ್ಹೀಲ್ ನಿಂದ ವಿದ್ಯಾರ್ಥಿಗಳಿಗೆ ಸ್ವ ರಕ್ಷಣಾ ಮಾಹಿತಿ ಕಾರ್ಯಕ್ರಮ.

ಸುಳ್ಯ ಗಾಂಧಿನಗರ ಪ್ರೌಢ ಶಾಲೆಯಲ್ಲಿವಿದ್ಯಾರ್ಥಿಗಳಿಗೆ ಸ್ವ ರಕ್ಷಣಾ ಮಾಹಿತಿ ಕಾರ್ಯಕ್ರಮವನ್ನು ಆ. ೧೦ ರಂದು ಸುಳ್ಯ ಇನ್ನರ್ ವ್ಹೀಲ್ ನಿಂದ ನಡೆಸಲಾಯಿತು. ಸಂಪನ್ಮೂಲವ್ಯಕ್ತಿ ಯಾಗಿ ಸುಳ್ಯ ಕ್ರೈಂ ವಿಭಾಗದ ಅಧೀಕ್ಷಕಿ ಸರಸ್ವತಿ ಬಿ ಟಿ ಯವರು ಪಾಲ್ಗೊಂಡು ಮಾಹಿತಿ ನೀಡಿದರು.
ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಸವಿತ ನಾರ್ಕೋಡ್ ಸಮಾರಂಭ ದಲ್ಲಿ ಅಧ್ಯಕ್ಷತೆ ವಹಿಸಿದ್ದರು, ಪ್ರೌಢ ಶಾಲಾ ಪ್ರಭಾರ ಮುಖ್ಯೋಪಾದ್ಯಾಯಿನಿ ಜ್ಯೋತಿಲಕ್ಷ್ಮಿ, ಪ್ರಾ, ಶಾಲಾ ಹಿರಿಯ ವಿದ್ಯಾರ್ಥಿಸಂಘ ದ ಅಧ್ಯಕ್ಷ ಜೆ ಕೆ ರೈ, ಪೋಲಿಸ್ ಕಾನ್ಸ್ಟೆಬಲ್ ದಿನೇಶ್, ಚಿಂತನ, ಇನ್ನರ್ ವೀಲ್ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅಧ್ಯಕ್ಷೆ ಸವಿತ ನಾರ್ಕೋಡ್ ಸ್ವಾಗತಿಸಿ ಕಾರ್ಯದರ್ಶಿ ಚಿಂತನ ಸುಬ್ರಮಣ್ಯ ವಂದಿಸಿದರು.

ವರದಿ: ಜೆ ಕೆ ರೈ ಸುಳ್ಯ
ರಾಜ್ಯ