ಕೊಯಿಲ ಫಾರ್ಮ್: ಪಾಳುಬಿದ್ದ ಜಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಫಾರಂ ನಿರ್ಮಾಣಕ್ಕೆ ಅವಕಾಶಪಶುಸಂಗೋಪನಾ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಕೊಯಿಲ ಫಾರ್ಮ್: ಪಾಳುಬಿದ್ದ ಜಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಫಾರಂ ನಿರ್ಮಾಣಕ್ಕೆ ಅವಕಾಶ
ಪಶುಸಂಗೋಪನಾ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ


ಪುತ್ತೂರು: ಪ್ರತ್ತೂರು ತಾಲ್ಲೂಕಿನ ಕೊಯಿಲ ಗ್ರಾಮದ ಪಾಳು ಬಿದ್ದಿರುವ ೬೮೦ ಎಕರ ಪಶು ಸಂಗೋಪನೆ ಇಲಾಖೆಗೆ ಸೇರಿದ ಜಾಗದಲ್ಲಿ ಪಿ.ಪಿ.ಪಿ. ಆಧಾರದ ಮೇಲೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ಆಧಾರದ ಮೇಲೆ ಪೌಲ್ಟ್ರಿಫಾರಂ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ ಮಾಡಲು ಅವಕಾಶ ಕಲ್ಪಿಸುವಂತೆ ಅಗ್ರಹಿಸಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ಪಶುಸಂಗೋಪನಾ ಸಚಿವ ವೆಂಕಟೇಶ್‌ರವರಿಗೆ ಮನವಿ ಸಲ್ಲಿಸಿದ್ದಾರೆ.
ಜೂ. ೨೨ ರಂದು ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಈ ಮನವಿ ಸಲ್ಲಿಸಿದ್ದು, ಪರಿಸರದಲ್ಲಿ ಸುಮಾರು ೬೮೦ ಎಕರೆ ಜಾಗವು ಪಶು ಸಂಗೋಪನೆ ಇಲಾಖೆಗೆ ಸೇರಿದ್ದು, ಯಾವುದೇ ಉಪಯೋಗಕ್ಕೆ ಬಾರದೇ ಪಾಳು ಬಿದ್ದಿರುತ್ತದೆ, ಈ ೬೮೦ ಎಕರೆ ಜಾಗದಲ್ಲಿ ಪಿ.ಪಿ.ಪಿ, ಮಾದರಿಯಲ್ಲಿ ಪೌಲ್ಟ್ರಿ ಫಾರಂ, ಕುರಿ ಸಾಕಾಣಿಕೆ,ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ ಮಾಡಲು ಅನುಕೂಲವಾಗುವಂತೆ ತಾವುಗಳು ನೋಡಲ್ ಅಧಿಕಾರಿಯನ್ನುನೇಮಿಸಿ, ಕೂಡಲೇ ಪ್ರಕ್ರಿಯೆ ಪ್ರಾರಂಭಿಸಿದಲ್ಲಿ ಗುತ್ತಿಗೆ ಆಧಾರದ ಮೇಲೆ ಪಡೆಯಲು ಹೆಚ್ಚಿನ ಖಾಸಗಿ ಸಂಸ್ಥೆಗಳು ಆಸಕ್ತರಾಗಿರುತ್ತಾರೆ. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಹಾಗೂ ಪಿ.ಪಿ.ಪಿ. ಮಾದರಿಯಿಂದ ಸರ್ಕಾರಕ್ಕೆ ಕಂದಾಯವು ಸಹ ಸಂಗ್ರಹಣೆಯಾಗುತ್ತದೆ. ಅಲ್ಲದೇ ಪಾಳು ಬಿದ್ದಿರುವ ಜಾಗವು ಸಹಉಪಯೋಗವಾಗುತ್ತದೆ.
ಆದುದರಿಂದ ತಾವುಗಳು ಕೂಡಲೇ ಪುತ್ತೂರು ತಾಲ್ಲೂಕಿನ ಕ್ಯೂಲಾ ಗ್ರಾಮದ ಪಾಳು ಬಿದ್ದಿರುವ ೬೮೦ ಎಂದೆ ಪಶು ಸಂಗೋಪನೆ ಇಲಾಖೆಗೆ ಸೇರಿದ ಜಾಗದಲ್ಲಿ ಪಿ.ಪಿ.ಪಿ, ಆಧಾರದ ಮೇಲೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ಆಧಾರದ ಮೇಲೆ ಮೌಲ್ಕಿ ಫಾರಂ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ ಮಾಡಲು ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟವರಿಗೆ ಆದೇಶಿಸುವಂತೆ ಸಚಿವರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ರಾಜ್ಯ