ಸವಣೂರು: ಕೆರೆಗೆ ಬಿದ್ದು ಯುವಕ ಸಾವು.

ಸವಣೂರು: ಕೆರೆಗೆ ಬಿದ್ದು ಯುವಕ ಸಾವು.

ತೋಟದ ಕೆರೆಯಲ್ಲಿದ್ದ ಪಾಚಿ
ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ
ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಬೆಳ್ಳಾರೆ
ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ತಾಡಿ
ಗ್ರಾಮದಿಂದ ವರದಿಯಾಗಿದೆ.
ಮೃತಪಟ್ಟ ಯುವಕನನ್ನು ಪಾಲ್ತಾಡಿ ಗ್ರಾಮದ
ಕಾಪುತಮೂಲೆ ನಿವಾಸಿ ಮೋನಪ್ಪ ನಾಯ್ಕ
ಎಂಬವರ ಪುತ್ರ ಗೋಪಾಲಕೃಷ್ಣ ಕೆ.(34) ಎಂದು
ಗುರುತಿಸಲಾಗಿದೆ.
ತೋಟದ ಕೆರೆಯಲ್ಲಿರುವ ಪಾಚಿಯನ್ನು ತೆಗೆಯಲು
ಹೋದ ಗೋಪಾಲಕೃಷ್ಣ ಅವರು
ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು
ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ
ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ

ರಾಜ್ಯ