
ಕಾಸರಗೋಡು: ಕಸಾಯಿಖಾನೆಗೆಂದು ತಂದ
ಎಮ್ಮೆಯೊಂದು ರೊಚ್ಚಿಗೆದ್ದು ಯುವಕನನ್ನು ತಿವಿದು ಬಲಿ
ಪಡೆದುಕೊಂಡ ಘಟನೆ ಗುರುವಾರ ಸಂಜೆ
ಕಾಸರಗೋಡಿನ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಮೃತನನ್ನು ಮೊಗ್ರಾಲ್ ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಮೂಲದ ಸಾದಿಕ್ (22) ಎಂದು ಗುರುತಿಸಲಾಗಿದೆ ಮೊಗ್ರಾಲ್ ಪುತ್ತೂರಿನ ಕಸಾಯಿಖಾನೆಗೆ ತರಲಾಗಿದ್ದ ಎಮ್ಮೆಯನ್ನು ವಾಹನದಿಂದ ಇಳಿಸುವಾಗ ಹಗ್ಗ ತುಂಡಾಗಿ
ಎಮ್ಮೆ ತಪ್ಪಿಸಿಕೊಂಡಿದೆ. ಓಡುತ್ತಿರುವ ಎಮ್ಮೆಯನ್ನು
ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಸಾದಿಕ್ ಗೆ ಎಮ್ಮೆ
ಕೊಂಬಿನಿಂದ ಹೊಟ್ಟೆ ಭಾಗಕ್ಕೆ ಚುಚ್ಚಿದೆ. ಗಂಭೀರ
ಗಾಯಗೊಂಡ ಯುವಕನನ್ನು ಮಂಗಳೂರಿನ ಆಸ್ಪತ್ರೆಗೆ
ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾನೆ ಎಮ್ಮೆ ಮೊಗ್ರಾಲ್ ಪುತ್ತೂರಿನಿಂದ ಮೊಗ್ರಲ್ ಹತ್ತಿರದ
ಪ್ರದೇಶಕ್ಕೆ ಓಡಿ ಅಲ್ಲಿಯೂ ದಾಳಿ ಮಾಡಿದೆ. ಈ ವೇಳೆ
ಎರಡು ಅಂಗಡಿಗಳಿಗೆ ಹಾನಿಯಾಗಿದೆ. ಸುಮಾರು 25
ಜನರನ್ನು ಕೊಂಬಿನಿಂದ ಚುಚ್ಚಿ ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ. ರೊಚ್ಚಿಗೆದ್ದ ಎಮ್ಮೆಯನ್ನು ಹತೋಟಿಗೆ ತರಲು ಸ್ಥಳೀಯರಿಗೆ ಸಾಧ್ಯವಾಗದೇ ಕೊನೆಗೆ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಸೆರೆ ಹಿಡಿದರು.