
ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಹರಿಯುವ ನದಿಗಳಲ್ಲಿ
ತುಂಬಿರುವ ಹೂಳನ್ನು ಮುಂದಿನ ಮಳೆಗಾಲದೊಳಗೆ
ಮೇಲೆತ್ತಬೇಕು. ನದಿ ಬದಿಯಲ್ಲಿ ಕಲ್ಲುಗುಂಡಿ ಪರಿಸರದ ಸುತ್ತ ತಡೆಗೋಡೆ ಮಾಡುವುದಾಗಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಹೇಳಿ ಹೋದ ಅಧಿಕಾರಿಗಳು ಇನ್ನೂ ಕೆಲಸ ಆರಂಭಿಸಿಲ್ಲ , ಸಂಪಾಜೆ ಗ್ರಾಮವನ್ನು ಕಡೆಗಣಿಸಲಾಗಿದೆ,ಬೇಡಿಕೆಯನ್ನು ಈ ಬಾರಿ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ. ಉಡಾಪೆ ತೋರುವ ಅಧಿಕಾರಿಗಳು ಸ್ಪಂದನೆ
ನೀಡುತ್ತಿಲ್ಲ. ಆದ್ದರಿಂದ ಎಲ್ಲ ದಾಖಲೆಗಳನ್ನಿಟ್ಟು ಪ್ರಧಾನ ಮಂತ್ರಿಗಳ ಕಚೇರಿಗೂ ದೂರು ನೀಡಲು ನಿರ್ಧಾರ ಮಾಡಿರುವುದಾಗಿ ಸಂಪಾಜೆ ಗ್ರಾಮದ ಕೃಷಿಕರು ಹಾಗೂ ಉದ್ಯಮಿಗಳು ತಿಳಿಸಿದ್ದಾರೆ.



ಮಾ.೧೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಮಾತನಾಡಿಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ “ಕಳೆದ ಕೆಲವು ವರ್ಷಗಳಿಂದ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳಿಂದ ಸಂಪಾಜೆಯ ಗ್ರಾಮಸ್ಥರು ಸಾಕಷ್ಟು
ತೊಂದರೆಗಳನ್ನು ಅನುಭವಿಸುತ್ತಿದ್ದು ಕಳೆದ ವರ್ಷವಂತು ನಲುಗಿದ್ದಾರೆ. ೨೦೧೮ ರ ಜೋಡುಪಾಲ ದುರಂತದಿಂದ ಹಿಡಿದು ಕಳೆದ ವರ್ಷದವರೆಗೆ ಮಳೆಗಾಲದಲ್ಲಿ ಇಲ್ಲಿನ ರೈತರು, ವರ್ತಕರು ಮತ್ತು ನಿವಾಸಿಗಳು ಕೃಷಿ, ವ್ಯಾಪಾರ ಮನೆ, ಕಳೆದುಕೊಂಡು ಅಪಾರ ನಷ್ಟ ಅನುಭವಿಸುತ್ತಿದ್ದಾರೆ.

ಈ ವರ್ಷವೂ ಕೂಡ
ಮಳೆಗಾಲದಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆಗಳಿದ್ದು
ಇಲ್ಲಿನ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ
ಒದಗಿಸಬೇಕು. ಕಳೆದ ವರ್ಷಗಳ ಪ್ರವಾಹದಿಂದ
ಹೊಳೆಯಲ್ಲಿ ಹೂಳು ನಿಂತಿದ್ದು ಇನ್ನೂ ಅದನ್ನು ತೆಗೆದಿಲ್ಲ.
ಹೂಳು ತುಂಬಿ ನದಿಯ ಹೊಂಡಗಳೆಲ್ಲ ತುಂಬಿ ನೀರಿನ
ಅಭಾವ ಎದುರಾಗಿದೆ. ಪ್ರಾಕೃತಿಕ ವಿಕೋಪದ ಸಂದರ್ಭ
ಸಚಿವರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬಂದು
ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದ್ದಾರೆಯೇ ಹೊರತು, ಅಂಗಡಿಗಳಿಗೆ ನೀರು ತುಂಬಿ ತೊಂದರೆಗೊಳಗಾದ ವ್ಯಾಪಾರಸ್ಥರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ, ಸಂಪಾಜೆ ಪೇಟೆಯಲ್ಲಿ ನದಿ ಬದಿಗೆ ತಡೆಗೋಡೆ ಕಟ್ಟಿ ಕೊಡುವುದಾಗಿ ಹೇಳಿದ್ದರೂ ಇನ್ನೂ ಮಾಡಿಲ್ಲ. ಈ ಬಾರಿಯ ಮಳೆಗಾಲಕ್ಕೂ ಮುನ್ನ
ಕಾರ್ಯಪ್ರವೃತ್ತರಾಗದಿದ್ದರೆ ಹೋರಾಟ ನಡೆಸುವುದು
ಅನಿವಾರ್ಯ ಎಂದು ಅವರು ಹೇಳಿದರು.ಉದ್ಯಮಿ ಪದ್ಮನಾಭ ಗೌಡರು ಮಾತನಾಡಿ ನದಿಯ ಹೂಳೆತ್ತದಿದ್ದರೆ ಇ ಬಾರಿಯೂ ಸಮಸ್ಯೆ
ಎದುರಾದೀತು. ಮಳೆ ಬರುವ ಮೊದಲೇ
ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಲಿ.
ಅಪಾಯ ಆದ ಮೇಲೆ ಬಂದು ಪ್ರಯೋಜನವಿಲ್ಲ.
ಇದು ನಮ್ಮ ಬದುಕಿಗಾಗಿ ಹೋರಾಟ” ಎಂದು
ಹೇಳಿದರು. ಅಧಿಕಾರಿಗಳು ಉದಾಸೀನ ಬಿಡಬೇಕು
ಕೆ.ಪಿ.ಸಿ.ಸಿ. ವಕ್ತಾರ ಟಿ.ಎಂ. ಶಹೀದ್
ಮಾತನಾಡಿ ಜೋಡುಪಾಲದ ದುರಂತದ ಬಳಿಕ
ಸಮಸ್ಯೆಗಳು ಪ್ರತೀ ವರ್ಷ ಸಂಭವಿಸುತ್ತಿದೆ. ಇದನ್ನು
ಅಧಿಕಾರಿಗಳು ಗಮಭೀರವಾಗಿ ತಗೊಂಡಿಲ್ಲ. ಕೃಷಿಕರು
ಏಳುತಿಂಗಳಿನಿಂದ ಇಲಾಖೆಗಳಿಗೆ ಅಲೆದರೂ ಸ್ಪಂದನೆ
ಸಿಗುತ್ತಿಲ್ಲವಾದರೆ ಹೇಗೆ? ಅಧಿಕಾರಿಗಳು ಉದಾಸೀನ
ಬಿಟ್ಟು ಕೆಲಸ ಮಾಡಬೇಕು. ಸಂಪಾಜೆಯಲ್ಲಿ ಭೂಕಂಪ,
ಪ್ರಳಯದಿಂದ ಭಾರೀ ಪ್ರಮಾಣದಲ್ಲಿ ನಾಶ ನಷ್ಟ
ಉಂಟಾಗಿತ್ತು. ಕೃಷಿಕರು, ವರ್ತಕರು, ಜನ ಸಾಮಾನ್ಯರು
ದೊಡ್ಡ ನಷ್ಟವನ್ನು ಅನುಭವಿಸಿದ್ದರು. ಇದರ ವೀಕ್ಷಣೆಗೆ
ರಾಜ್ಯದ ಮುಖ್ಯಮಂತ್ರಿ ಸಚಿವರುಗಳು ಬಂದರೂ ಏನೂ ಪ್ರಯೋಜನ ಆಗಲಿಲ್ಲ ಎಂದು ಹೇಳಿದರು.ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬೂಸಾಲಿ ಹಾಗೂ ಜಗದೀಶ್ ರೈ ಮಾತನಾಡಿ,

“ಮಳೆಗಾಲದ ಮೊದಲು ಇಲಾಖೆ ಎಚ್ಚೆತ್ತುಕೊಳ್ಳಬೇಕು
ಎನ್ನುವುದು ನಮ್ಮ ಬೇಡಿಕೆ. ಕಳೆದ ಬಾರಿ ಕೃಷಿಕರು
ತುಂಬಾ ನಷ್ಟ ಅನುಭವಿಸಿದ್ದಾರೆ. ಇದೆಲ್ಲವನ್ನು ಸರಕಾರ
ಹಾಗೂ ಅಧಿಕಾರಿಗಳು ಮನಗಮಡು ನಮ್ಮ ಬೇಡಿಕೆಗೆ
ಸ್ಪಂದಿಸಬೇಕೆಂದು ಕೇಳಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ
ಎಸ್.ಕೆ. ಹನೀಫ್ ಇದ್ದರು.