ಪೆರಾಜೆ ದಾಸರಹಿತ್ಲು ಪಿಕಪ್ ಬೈಕ್ ಗೆ ಡಿಕ್ಕಿ ಸವಾರರು ಗಂಭೀರ ಗಾಯ: ಪಿಕಪ್ ಚಾಲಕ ಸ್ಥಳದಿಂದ ಪರಾರಿ.

ಪೆರಾಜೆ ದಾಸರಹಿತ್ಲು ಪಿಕಪ್ ಬೈಕ್ ಗೆ ಡಿಕ್ಕಿ ಸವಾರರು ಗಂಭೀರ ಗಾಯ: ಪಿಕಪ್ ಚಾಲಕ ಸ್ಥಳದಿಂದ ಪರಾರಿ.

ಪೆರಾಜೆ ದಾಸರ ಹಿತ್ಲು ಬಳಿ ಇದೀಗ ಅರಂತೋಡಿನಿಂದ
ಬರುತ್ತಿದ್ದ ದ್ವಿಚಕ್ರ ವಾಹನ ಪೆರಾಜೆಯಿಂದ ಅರಂತೋಡಿಗೆ ಹೋಗುತ್ತಿದ್ದ ಪಿಕ್ ಅಪ್ ವಾಹನದ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರರಿಗೆ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ
ಘಟನೆಯಿಂದ ದ್ವಿಚಕ್ರ ವಾಹನದಲ್ಲಿದ್ದ ಹೊನ್ನಪ್ಪ ಎಂಬವರು ರಸ್ಥೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಮತ್ತು ಅವರ ಸಂಭಂದಿ
ಸಹಸವಾರನ ಕಾಲು ಮತ್ತು ಹೊಟ್ಟೆಯ ಭಾಗಕ್ಕೆ ಗಾಯವಾಗಿದ್ದು ಅವರನ್ನು ಚಿಕಿತ್ಸೆಗೆ ಕೆವಿಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದು ವರಿದಿದೆ.ಗೂನಡ್ಕದ ಮೋಹನ್ ಎಂಬವರ ಪಿಕಪ್ ಆಗಿದ್ದು, ರಾಜ ಎನ್ನುವವರು ಪಿಕಪ್ ಚಾಲನೆ ಮಾಡುತ್ತಿದ್ದರು , ಅಪಘಾತ ಸಂಭವಿಸಿದ ತಕ್ಷಣ ಅವರು ಸ್ಥಳದಿಂದ ಪರಾರಿಯಾಗಿದ್ದು , ಚಾಲಕನ ವಿರುದ್ದ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಂಪಾಜೆ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ