ಫೆ.12ರಂದು ಎಂ.ಬಿ. ಫೌಂಡೇಶನ್ ನೇತೃತ್ವದ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡ ಉದ್ಘಾಟನೆ.

ಫೆ.12ರಂದು ಎಂ.ಬಿ. ಫೌಂಡೇಶನ್ ನೇತೃತ್ವದ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡ ಉದ್ಘಾಟನೆ.

ಎಂ.ಬಿ. ಫೌಂಡೇಶನ್ ವತಿಯಿಂದ ಎಂ.ಬಿ. ಸದಾಶಿವರವರು ತಮ್ಮ ಜಾಗದಲ್ಲಿ ನಿರ್ಮಿಸಿರುವ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡದ ಉದ್ಘಾಟನಾ
ಸಮಾರಂಭ ಫೆ. 12 ರಂದು ನಡೆಯಲಿದೆ.

ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆಗಮಿಸಲಿದ್ದಾರೆ ಎಂದು ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವ ಹೇಳಿದ್ದಾರೆ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ
ಬೌದ್ಧಿಕ ಸವಾಲುಗಳೊಂದಿಗೆ ವಿವಿಧ ದೈಹಿಕ ನ್ಯೂನ್ಯತೆಗಳನ್ನು ಹೊಂದಿರುವ ಮಕ್ಕಳಿಗಾಗಿ ೨೦೦೦ನೇ ಇಸವಿಯಲ್ಲಿ ಸಾಂದೀಪ್ ವೀಶೇಷ ಶಾಲೆಯನ್ನು ಸುಳ್ಯದಲ್ಲಿ ಆರಂಬಿಸಲಾಯಿತು. ೨ ದಶಕಗಳಲ್ಲಿ ನೂರಾರು ವಿಶಿಷ್ಟ ಚೇತನರಿಗೆ, ತರಬೇತಿ ಶಿಕ್ಷಣ, ಚಿಕಿತ್ಸೆ ತರಬೇತಿ ನೀಡುವ ಮೂಲಕ ಬಿನ್ನ ಸಾಮರ್ಥ್ಯದ ಮಕ್ಕಳು ಎಲ್ಲರಂತೆ ಸಮಾಜದಲ್ಲಿ ಬದುಕುವಂತಾಗಬೇಕು ಎನ್ನುವ ದೃಷ್ಠಿಯಲ್ಲಿ ಆರಂಭಿಸಿದ ಈ ಶಿಕ್ಷಣ ಸಂಸ್ಥೆಯಲ್ಲಿ
ತೀರಾ ಬಡಕುಟುಂಬದಿಂದ ಬಂದ ಈ ದಿವ್ಯಾಂಗ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದರಿಂದ ಮಧ್ಯಾಹ್ನದ ಬಿಸಿಯೂಟ ಹಾಲು ನೀಡಲಾಗುತ್ತಿದೆ.

ವಿಶೇಷ ತರಬೇತು ಪಡೆದ ಶಿಕ್ಷಕರ ತಂಡ ಯೋಗ ಸಂಗೀತ ಶಿಕ್ಷಕರಿದ್ದು ಸರ್ವಾಂಗೀಣ ಬೆಳವಣಿಗೆಯ ಪ್ರಯತ್ನ ಮಾಡಲಾಗುತ್ತಿದೆ.ಇದೀಗ ರೂ.೧.೪೫ ಕೋಟಿ ವೆಚ್ಚದಲ್ಲಿ ಸರ್ವಸಜ್ಜಿತ ನೂತನ ಕಟ್ಟಡ ನಿರ್ಮಾಣಗೊಂಡಿದ್ದು ಫಿಸಿಯೋ ತೆರಪಿ, ವಾಕ್ ಶ್ರವಣ
ತರಬೇತಿ, ಮಾನಸಿಕ ಆರೋಗ್ಯ ಕೇಂದ್ರ ಹಾಗೂ ವಿದೇಶದಿಂದ ಆಮದು ಮಾಡಿದ ಯಂತ್ರದ ಮೂಲಕ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಬದುಕು ರೂಪಿಸಲು ಸ್ವಯಂ ಉದ್ಯೋಗ ಸೃಷ್ಠಿಸಲಾಗುತ್ತಿದೆ ಎಂದವರು ವಿವರ ನೀಡಿದರು.ಫೆ 12 ರಂದು ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನೂತನ ಕಟ್ಟಡವನ್ನುಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಭೋಜನ ಶಾಲೆಯನ್ನು ಉದ್ಘಾಟಿಸುವರು. ಸಚಿವ ಎಸ್.ಅಂಗಾರರು ಕೆಳ ಅಂತಸ್ತಿನ ಶಾಲಾ ಕೊಠಡಿ ಉದ್ಘಾಟಿಸುವರು.ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಖ್ ವೃತ್ತಿ ಶಿಕ್ಷಣ ಕೇಂದ್ರ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಫಿಜಿಯೋ ತೆರಫಿ ಕೊಠಡಿ ಉದ್ಘಾಟಿಸುವರು. ಲಯನ್ಸ್ ಜಿಲ್ಲಾ ರಾಜ್ಯಪಾಲರಾ ಲ.ಸಂಜೀತ್‌ ಶೆಟ್ಟಿ ನಾಯಕತ್ವ ತರಬೇತಿ ಕೇಂದ್ರ
ಉದ್ಘಾಟಿಸುವರು. ನ.ಪಂ. ಅಧ್ಯಕ್ಷ ವಿನಯ್ ಕುಮಾರ್
ಕಂದಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ಎ.ಒ.ಎಲ್.ಇ.
ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ವೈದ್ಯಕೀಯ ತಪಾಸಣಾ
ಕೊಠಡಿ ಉದ್ಘಾಟಿಸುವರು. ರಾಜ್ಯ ಒಕ್ಕಲಿಗರ ಸಂಘದ
ಉಪಾಧ್ಯಕ್ಷ ಡಾ| ರೇಣುಕಾ ಪ್ರಸಾದ್ ಕೆ.ವಿ.ಕಚೇರಿಯನ್ನು
ಉದ್ಘಾಟಿಸುವರು. ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಸಂಕೇಶ್ ಹಾಗೂ ಆರ್.ಕೆ. ನಾಯರ್ ಗೌರವ ಉಪಸ್ಥಿತರಿರುವರು ಎಂದು ಅವರು ವಿವರ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ. ಫೌಂಡೇಶನ್ ಪುಷ್ಪಾ ರಾಧಾಕೃಷ್ಣ, ಟ್ರಸ್ಟಿಗಳಾದ ಎಸ್.ಆರ್.ಸೂರಯ್ಯ, ಶರೀಫ್ ಜಟ್ಟಿಪಳ್ಳ, ಶಾಲಾ ಮಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ ಮೊದಲಾದವರಿದ್ದರು.


.

ರಾಜ್ಯ