ಧನಪಾಲ್ ಗೂನಡ್ಕ ಹೆಸರಿನಲ್ಲಿ ಬೇನಾಮಿ ದೂರು ಮರಳುಗಾರಿಕೆ ತಡೆಗಟ್ಟಲು ಯಾವ ಅಧಿಕಾರಿಗಳಿಗೂ ದೂರು ನೀಡಿಲ್ಲ – ಧನಪಾಲ್ ಗೂನಡ್ಕ ಸ್ಪಷ್ಟನೆ.


ಅರಂತೋಡು, ಸಂಪಾಜೆ ಭಾಗದಲ್ಲಿ ಅಕ್ರಮ
ಮರಳುಗಾರಿಕೆ ನಡೆಯುತ್ತಿದೆ ಇದನ್ನು ತಡೆಗಟ್ಟಬೇಕೆಂದು ಧನಪಾಲ್ ಗೂನಡ್ಕ ಅವರ ಹೆಸರಿನಲ್ಲಿ ಜಿಲ್ಲಾಧಿಕಾರಿಗೆ ಬೇನಾಮಿ ದೂರು ನೀಡಿದ ಘಟನೆ ನಡೆದಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಕೂಡ ವರದಿಯಾಗಿತ್ತು.
ಈ ಬಗ್ಗೆ ನ್ಯೂಸ್ ರೂಮ್ ಫಸ್ಟ್ ಗೆ ಧನಪಾಲ್ ಗೂನಡ್ಕ ಪ್ರತಿಕ್ರಿಯೆ ನೀಡಿ ಅಕ್ರಮ ಮರಳುಗಾರಿಕೆ ತಡೆಗಟ್ಟಲು ನಾನು ಯಾವಅಧಿಕಾರಿಗಳಿಗೂ ದೂರು ನೀಡಿಲ್ಲ. ಮರಳು ಸಾಗಾಟ ನಡೆಸುವವರೂ ನನ್ನ ಮೇಲೆ ದ್ವೇಷ ಸಾಧಿಸಲಿ ಎನ್ನುವ ದುರುದ್ದೇಶ ಇಟ್ಟುಕೊಂಡು ಯಾರೋ ಕಿಡಿಗೇಡಿಗಳು ಸುಳ್ಳು ದೂರು ನೀಡಿದ್ದಾರೆ. ನಾನು ದೂರು ನೀಡಿದ್ದೇನೆ ಎಂದು ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಕೆಲವು ಮರಳು ಸಾಗಾಟಗಾರರು ಬೆದರಿಕೆ ಕೂಡ ಹಾಕಿದ್ದಾರೆ. ಬೇನಾಮಿ ದೂರು ನೀಡಿದವರ ಹಾಗೂ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಿಡಿಓ, ಜಿಲ್ಲಾಧಿಕಾರಿ, ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರುನೀಡುತ್ತೇನೆ ಮತ್ತುಈ ಬಗ್ಗೆ ಬೈಲೆ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿರುತ್ತೇನೆ ಎಂದು ತಿಳಿಸಿದ್ದಾರೆ.

ರಾಜ್ಯ