
ರಾಜ್ಯದ ಉನ್ನತ ಸಚಿವರಾಗಿದ್ದು, ಅಡಿಕೆ ಬೆಳೆಗಾರ ಕಾರ್ಯಪಡೆ ಸಂಘದ ಅಧ್ಯಕ್ಷರಾಗಿದ್ದು, ಅಡಿಕೆ ಬೆಳಗಾರರಿಗೆ ಭವಿಷ್ಯವಿಲ್ಲ, ಅಡಿಕೆ ಕೃಷಿಗೆ ಭವಿಷ್ಯವಿಲ್ಲ. ಆದುದರಿಂದ ಅದಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರರು ವಿಧಾನಸಭೆಯಲ್ಲಿ ಹೇಳಿರುವುದರಿಂದ ಅಡಿಕೆ ಬೆಳೆಗಾರರಿಗೆ ನೂವು ತರಿಸಿದೆ. ಮತ್ತು ಸಭಾಪತಿ ಕಾಗೇರಿಯೂ ದ್ವನಿ ಗೂಡಿಸಿದ್ದಾರೆ ಅಧಿಕಾರ ಸ್ಥಾನದಲ್ಲಿರುವ ಈ ಇಬ್ಬರ ಹೇಳಿಕೆ ಖಂಡನೀಯ .ಹಾಗಾಗಿ ರೈತರ ಹಿತದೃಷ್ಢಿಯಿಂದ ಈ ಮಾತನ್ನು ಹಿಂತೆಗೆದು ಕೊಳ್ಳಬೇಕು ಎಂದು ಸುಳ್ಯ
ಬ್ಲಾಕ್ ಕಾಂಗ್ರೆಸ್ ಮತ್ತು ಕಾ ಂಗ್ರೇಸ್ ಕಿಸಾನ್ ಘಟಕ ಆಗ್ರಹಿಸಿದೆ.ಡಿ ೩೧. ರಂದು ಸುಳ್ಯದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ , ಈ ಬಗ್ಗೆ
ಸರಕಾರದ ಗಮನ ಸೆಳೆಯಲು ಜ. ೩ರಂದು ಸುಳ್ಯ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ತಾಲೂಕಿನ ಕೃಷಿಕರನ್ನು ಸೇರಿಸಿಕೊಂಡು ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ಹೇಳಿದರು.


ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಮಾತನಾಡಿ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದಿಂದ ಸಂತ್ರಸ್ತರಾಗಿರುವ ಕೃಷಿಕರಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಅಡಿಕೆಯ ಆಮದನ್ನು ಸ್ಥಗಿತಗೊಳಿಸುವ ಸಾಮರ್ಥ್ಯವಿಲ್ಲ. ಅಡಿಕೆ
ಕೃಷಿಕರಿಗೆ ಕಡಿವಾಣ ಹಾಕಲು ಹೊರಟಿದ್ದಾರೆ. ಇವರು ಕೃಷಿಕರ ಪರ ಎಂದು ಹೇಳುತ್ತಾರೆ.ಆದರೆ ಕೃಷಿಕರಿಗೆ ಅನ್ಯಾಯವನ್ನು ಮಾಡುತ್ತಿದ್ದಾರೆ ಕೃಷಿಕರ ಪರ ಕೆಲಸ ಮಾಡಲು ಬಿಜೆಪಿಯವರಿಗೆ ಯೋಗ್ಯತೆ ಇಲ್ಲ ಎಂದು ಹರಿ ಹಾಯ್ದರು .

ಸುಳ್ಯ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸುರೇಶ್
ಎಂ.ಎಚ್.ರವರು ಮಾತನಾಡಿ, ಈ ಸರಕಾರಕ್ಕೆ ಅಡಿಕೆ ಬೇಡವೆಂದಾದರೆ ಪರ್ಯಾಯ ಕೃಷಿ ಏನು ಮಾಡಬೇಕೆಂದು ಸರಕಾರ ತಿಳಿಸಿಬೇಕು. ಕಾಂಗ್ರೆಸ್ ಸರಕಾರವಿರುವಾಗ ಕೋವಿ ರಿನಿವಲ್‌ಗೆ ೩೦ ರೂ. ಕೊಡಬೇಕಿದ್ದರೆ, ಈಗ ೧೫೦೦ ರೂ.ಗೆ ಏರಿಸಿದ್ದಾರೆ. ೧೦ ರೂ.ಗೆ ಆರ್‌ಟಿಸಿ ಸಿಗುತಿತ್ತು. ಈಗ ಅದನ್ನು ೨೦ ರೂ.ಗೆ ಏರಿಸಿದ್ದಾರೆ. ೪೦೦ ರೂ. ಇದ್ದ ಗ್ಯಾಸ್ ರೇಟ್ ೧೦೦೦ ರೂ.ಗೆ ಏರಿಸಿದ್ದಾರೆ ಬಿಜೆಪಿಯವರು ಇದನ್ನೂ ಕೂಡ ಸಮರ್ಥಿಸಿ ಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಕಿಸಾನ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸನತ್ ಮುಳುಗಾಡು ಉಪಸ್ಥಿತರಿದ್ದರುಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಕೀರ್ತನ್ ಕೊಡಪಾಲ ವಂದಿಸಿದರು.
