ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ: ಸುರತ್ಕಲ್ ತಡಂಬೈಲ್ ನ ಯುವಕ ಮೃತ್ಯು.

ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ: ಸುರತ್ಕಲ್ ತಡಂಬೈಲ್ ನ ಯುವಕ ಮೃತ್ಯು.

ಸುರತ್ಕಲ್: ಸೌದಿ ಅರೇಬಿಯಾದಲ್ಲಿ ನಡೆದ
ರಸ್ತೆ ಅಪಘಾತವೊಂದರಲ್ಲಿ ಸುರತ್ಕಲ್
ತಡಂಬೈಲ್ ನ ಯುವಕನೋರ್ವ
ಮೃತಪಟ್ಟಿರುವ ಘಟನೆ ವರದಿಯಾಗಿದೆ.
ತಡಂಬೈಲ್ ಫಾತಿಮಾ ಸೂಪರ್ ಮಾರ್ಕೆಟ್ ನ
ಅಬ್ದುಲ್ ಖಾದರ್ ಹಾಗೂ ಬೀ ಫಾತಿಮಾ
ಎಂಬವರ ಪುತ್ರ ಫಾಝಿಲ್ (29) ಮೃತಪಟ್ಟ
ಯುವಕ ಎಂದು ತಿಳಿದು ಬಂದಿದೆ.
ಸೌದಿ ಅರೆಬಿಯಾದ ಅಲ್‌ಅಸಾ ಎಂಬಲ್ಲಿ
ಕಾರು ಮತ್ತು ಲಾರಿಯ ನಡುವೆ ಭೀಕರ
ಅಪಘಾತ ಸಂಭವಿಸಿ ಯುವಕ ಮೃತಪಟ್ಟ ಎನ್ನಲಾಗಿದೆ.

ರಾಜ್ಯ