
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವದ ಪ್ರಯುಕ್ತ ಜನವರಿ 1.ರಿಂದ ಕ್ರೀಡಾಕೂಟದ ಮೂಲಕ ಶತಮಾನೋತ್ಸವದ ಸಂಭ್ರಮಕ್ಕೆ ಚಾಲನೆ ನೀಡಲಿದ್ದೇವೆ ಎಂದು ಶತಮಾನೋತ್ಸವ ಸಮಿತಿಯ ಕ್ರೀಡಾ ಸಂಚಾಲಕ ಕೆ.ಪಿ ಜಗದೀಶ್ ತಿಳಿಸಿದ್ದಾರೆ. ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ .1921 ರಲ್ಲಿ ಆರಂಭಗೊಂಡ ಸಂಪಾಜೆ ಪ್ರಾಥಮಿಕ ಕೃಷಿ
ಪತ್ತಿನ ಸಹಕಾರಿ ಸಂಘಕ್ಕೆ ನೂರು ವರುಷ ತುಂಬಿದ
ಹಿನ್ನಲೆಯಲ್ಲಿ 2023 ರ ಜನವರಿ 21 ಮತ್ತು 22 ರಂದು
ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಇದರ
ಪ್ರಯುಕ್ತ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು

ಜ.1 , ಜ.2, ಜ.8 ರಂದು ಕಲ್ಲುಗುಂಡಿ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಜ.1 ರಂದು ಸುಳ್ಯ ತಾಲೂಕಿನ ಸಹಕಾರ ಸಂಘದ ಸದಸ್ಯರಿಗೆ ಪುರುಷರ ವಿಭಾಗದಲ್ಲಿ, ಹಗ್ಗಜಗ್ಗಾಟ, ಗುಡ್ಡಗಾಡು ಓಟ ಮಹಿಳೆಯರಿಗೆ ತ್ರೋಬಾಲ್, ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ.ಸ್ಪರ್ದೆ ನಡೆಯಲಿದೆ ಸುಳ್ಯ ತಾಲೂಕಿನ ಎಲ್ಲಾ ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೆ ವಿವಿಧ ಕ್ರೀಡಾಕೂಟ ನಡೆಯಲಿದೆ, ಅಲ್ಲದೆ ಗ್ರಾಮೀಣ ಸೋಗಡಿನ ವಿವಿಧ ಐವತಕ್ಕೂ ಹೆಚ್ಚು ಕ್ರೀಡಾ ಕೂಟ ನಡೆಯಲಿದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮಶೇಖರ್ ಕೊಯಿಂಗಾಜೆ ವಹಿಸಲಿದ್ದು. ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟು ಉದ್ಘಾಟನೆ ನೆರವೇರಿಸಲಿದ್ದು. ಕ್ಷೇತ್ರ
ಶಿಕ್ಷಣಾಧಿಕಾರಿ ಮಹಾದೇವ ಎಸ್.ಪಿ. ಮುಖ್ಯ
ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದು ಹೇಳಿದರು ಜ.1, 2 ಮತ್ತು.ಜ.8ರಂದು ನಡೆಯುವ ವಿವಿಧ ಕ್ರೀಡಾಕೂಟ. ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಹಾಗೂ ತಾಲೋಕಿನ ಎಲ್ಲಾ ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಸಹಕರಿಸುವಂತೆ ಕೇಳಿ ಕೊಂಡರು.ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಮಾತನಾಡಿ
ಜ.21 ಮತ್ತು 22 ರಂದು ಕಾರ್ಯಕ್ರಮ ನಡೆಯಲಿದ್ದು,
ಹಲವು ಗಣ್ಯರು ಭಾಗವಹಿಸಲಿದ್ದಾರೆ. ವಿವಿಧ ಸಾದಕರು ಹಾಗೂ ಸಂಸ್ಥೆಗೆ ಸೇವೆ ಸಲ್ಲಿಸಿದವರನ್ನು ಸನ್ಮಾನ, ಮೊದಲಾದ ಕಾರ್ಯಕ್ರಮ ನಡೆಯಲಿದೆ . ಒಟ್ಟು ನೂರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲಿದ್ದಾರೆ ಗ್ರಾಮದ ಪ್ರತಿಭೆಗಳಿಂದ, ಶಾಲಾ ಮಕ್ಕಳಿಂದ , ಹಾಗೂ ಆಹ್ವಾನಿತ ತಂಡಗಳಿಂದ
ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದವರು ಹೇಳಿದರು.
ಸಂಪಾಜೆ ಸಹಕಾರ ಸಂಘದ ಉಪಾಧ್ಯಕ್ಷ ಮಹಮ್ಮದ್
ಕುಂಞ ಗೂನಡ್ಕ,ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವೀರೇಂದ್ರ ಕುಮಾರ್ ಜೈನ್, ನಿರ್ದೇಶಕರುಗಳಾದ
ಚಂದ್ರಶೇಖರ ಕೆ.ಯು., ಹಮೀದ್ ಹೆಚ್, ಪ್ರಚಾರ ಸಮಿತಿ ಸಂಚಾಲಕ ಜಿ.ಕೆ.ಹಮೀದ್, ಸದಸ್ಯ ರಹೀಂ ಬೀಜದಕಟ್ಟೆ,ಸನ್ಮಾನ ಸಮಿತಿ ಸಂಚಾಲಕ ದಾಮೋದರ ಮಾಸ್ತರ್ ಮೊದಲಾದವರಿದ್ದರು.
