ಭಜನೆ ಬಗ್ಗೆ ಅಧಿಕಾರಿಯಿಂದ ಅವಹೇಳನಕಾರಿ ಸಂದೇಶ ಹರಿಬಿಟ್ಟ ನೀಡಿದ ಆರೋಪ: ಬೆಳ್ಳಾರೆ ಠಾಣೆಯಲ್ಲಿ ದುರ್ಗಾ ವಾಹಿನಿ ದೂರು.

ಭಜನೆ ಬಗ್ಗೆ ಅಧಿಕಾರಿಯಿಂದ ಅವಹೇಳನಕಾರಿ ಸಂದೇಶ ಹರಿಬಿಟ್ಟ ನೀಡಿದ ಆರೋಪ: ಬೆಳ್ಳಾರೆ ಠಾಣೆಯಲ್ಲಿ ದುರ್ಗಾ ವಾಹಿನಿ ದೂರು.

ಸರಕಾರಿ ಅಧಿಕಾರಿಯಾಗಿರುವ ಸಂಜೀವ ಪೂಜಾರಿ ತಮ್ಮ ಅಧಿಕಾರಿ ಸ್ಥಾನದ ಹೆಸರನ್ನು ದುರುಪಯೋಗಪಡಿಸಿಕೊಂಡು ಹಿಂದೂ ವಿರೋಧಿ ಲೇಖನ ಪುಸಾರ ಮಾಡಿದ್ದಾರೆ,ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಸಾಮಾಜಿಕ ಶಾಂತಿ ಕದಡಿದ್ದು, ಮಾತ್ರವಲ್ಲದೆ.ಅವಹೇಳನ ಮಾಡಿದಾರೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಬೆಳ್ಳಾರೆ ಠಾಣೆಗೆ ಮನವಿ ನೀಡಿರುವ
ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ,ದುರ್ಗಾ ವಾಹಿನಿ ಎಡಮಂಗಲ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.

ಭಜನೆ ಎಂಬುದು ಜನ ಸಾಮಾನ್ಯರು ಭಗವಂತನನ್ನು ಆರಾಧಿಸುವುದಕ್ಕೆ ಆಯ್ದುಕೊಂಡ ಭಕ್ತಿ
ಮಾರ್ಗ, ಜನಸಾಮಾನ್ಯರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ಈ ಭಜನೆಯ
ಬಗ್ಗೆ ದಿನಾಂಕ 20.12.2022 ರಂದು ಒಬ್ಬ ಸರಕಾರಿ ಅಧಿಕಾರಿಯಾಗಿದ್ದುಕೊಂಡು, ಸಾಮಾಜಿಕ ನ್ಯಾಯ
ಒದಗಿಸಿಕೊಡುವ ಕಾಪಾಡುವಂತಹ ಕರ್ತವ್ಯ ಮಾಡಬೇಕಾದ ವ್ಯಕ್ತಿಯಾದ ಸಂಜೀವ ಪೂಜಾರಿ
ಉಪವಲಯ ಅರಣ್ಯಾಧಿಕಾರಿ ತನ್ನ ಅಧಿಕಾರದ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ತನ್ನ ಸರಕಾರಿ
ಸ್ನಾನಮಾನದ ಹೆಸರು ಬಳಸಿಕೊಂಡು ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಸಿಕೊಂಡು


ಸಾಮಾಜಿಕ ಜಾಲತಾಣದಲ್ಲಿ ಕುಣಿತ “ಭಜನೆಯಿಂದ ಮಲಗಿದ ಭಜನೆ” ಎಂಬ ತಲೆಬರಹದಲ್ಲಿ ಸುಳ್ಳು ಮತ್ತು ಆಧಾರ ರಹಿತ ವಿಚಾರವನ್ನು ತಪ್ಪು ಮಾಹಿತಿಯಿಂದ ಕೂಡಿದಂತಹ ಸಂದೇಶ ಲೇಖನ ಪ್ರಕಟಿಸಿ, ರವಾನಿಸಿ, ಕುರಿತಾಗಿ, ಹಿಂದೂ ಭಜಕ ಹೆಣ್ಣು-ಗಂಡುಗಳು ಅನೈತಿಕ
ಚಟುವಟಿಕೆಯಲ್ಲಿ ಭಜನೆ ಹೆಸರಿನಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬಂತೆ ಬಿಂಬಿಸಿರುತ್ತಾರೆ. “ಗುಡ್ಡದ ಮರದಡಿಯಲ್ಲಿ ಮಲಗಿ ಭಜನೆ
ಎಂಬಿತ್ಯಾದಿ ಕೀಳು ಅಭಿವೃದ್ಧಿಯ,
ಅಪಮಾನಕರವಾದ ಮಹಿಳೆಯರ ಚಾರಿತ್ರಕ್ಕೆ ಗೌರವಕ್ಕೆ ಧಕ್ಕೆ ತರುವ ಒಳಾರ್ಥ ಹೊಂದಿರುವ ಅಶ್ಲೀಲ
ಪದ ಬಳಕೆ ಮಾಡಿ ಅದನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಸಾರ
ಮಾಡಿರುತ್ತಾರೆ. ಹಿಂದೂ ಸಮಾಜದ ಜನರನ್ನು ದೃತಿಗೆಡಿಸುವ ಮತ್ತು ಅವರ ಆತ್ಮಸ್ಯೆರ್ಯ ಕುಗ್ಗಿಸುವ
ಸಮಾಜದ ಭಿನ್ನ ವರ್ಗಗಳ ಮಧ್ಯದಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸಿ ಸಂಘರ್ಷ ಹುಟ್ಟು ಹಾಕುವ
ರೀತಿಯಲ್ಲಿ ಅನ್ಯಾನ್ಯ ಗುಂಪುಗಳ ಮಧ್ಯೆ ಸಂಘಟನೆಗಳ ಮಧ್ಯೆ ಗಲಭೆ ಹುಟ್ಟುವಂತೆ ಸಾಮಾಜಿಕ
ಸಾಮರಸ್ಯ ಸ್ವಾಸ್ಥ್ಯ ಕೆಡುವ ರೀತಿಯಲ್ಲಿ ಉದ್ರೇಕಿಸುವ ರೀತಿಯಲ್ಲಿ ಬಹಿರಂಗವಾಗಿ ಸಂದೇಶ
ರವಾನಿಸಿರುತ್ತಾರೆ. ಜನರನ್ನು ದಾರಿ ತಪ್ಪಿಸುವ ಹುನ್ನಾರ ಮಾಡಿರುತ್ತಾರೆ. ಹಾಗೂ ಇಲ್ಲಸಲ್ಲದ ಸುಳ್ಳು
ಸಂದೇಶಗಳನ್ನು ರವಾನಿಸಿ ಪರೋಕ್ಷವಾಗಿ ಸಂಘಟನೆಗಳ ವಿರುದ್ಧ ಜನರನ್ನು ಎತ್ತಿ ಕಟ್ಟಿರುತ್ತಾರೆ.
ಜಾಲತಾಣದ ಮೂಲ ಆಶಯಕ್ಕೆ ವಿರುದ್ಧವಾಗಿ ಜನರನ್ನು ಎತ್ತಿ ಕಟ್ಟಿರುತ್ತಾರೆ. ತನ್ಮೂಲಕ ಹಿಂದೂ
ಸಮಾಜದ ಬಗ್ಗೆ ಅವರ ಧಾರ್ಮಿಕ ಆಚರಣೆಯ ಬಗ್ಗೆ ಅವಹೇಳನಕಾರಿಯಾಗಿ, ಹಿಂದುಗಳ ಧಾರ್ಮಿಕ
ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಈ ವ್ಯಕ್ತಿ ಹಿಂದೆಯೂ ಹಿಂದುಗಳ ಭಾವನೆಗೆ ಧಕ್ಕೆ ಉಂಟು
ಮಾಡುವ ಹೇಳಿಕೆಯನ್ನು ನೀಡುತ್ತಾ ಬಂದಿದ್ದು ಇವರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿಕೊಂಡು
ನ್ಯಾಯ ಒದಗಿಸಿ ಕೊಡಬೇಕೆಂದು. ಗಿರೀಶ್ ನಡುಬೈಲು ಪ್ರಖಂಡ ಸಹ ಸಂಯೋಜಕ್. ಚೇತನ್ ದೋಳ್ತಿಲ ಲತೀಶ್ ಗುಂಡ್ಯ, ಸಂಚಾಲಕ್ ಪ್ರವೀಣ್ ರೈ ಮರ್ದೋರು
ರಾಮಣ್ಣ ಜಾಲ್ತಾರು ಪಂಚಾಯತ್ ಸದಸ್ಯರು
ಹವ್ಯ ಶ್ರೀ.ಮಾಲೆಂಗ್ರಿ. ದುರ್ಗವಾಹಿನಿಪ್ರಮುಖ
ಗೀತಾ ಪ್ರವೀಣ್ ಪರ್ಲ ಮಾತೃ ಶಕ್ತಿ ಪ್ರಮುಖ ಕಾರ್ಯ ಕರ್ತರು ಉಪಸ್ಥಿತಿ ಇದ್ದರು

ರಾಜ್ಯ