ಸುಳ್ಯದಲ್ಲಿ ಮರಳು ಮಾಫಿಯಾ ಮೇಲೆ ಅಧಿಕಾರಿಗಳ ಕೆಂಗಣ್ಣು: ವಾಹನಗಳ ಜಪ್ತಿ: ಗೂನಡ್ಕದಲ್ಲೂ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ..!?

ಸುಳ್ಯದಲ್ಲಿ ಮರಳು ಮಾಫಿಯಾ ಮೇಲೆ ಅಧಿಕಾರಿಗಳ ಕೆಂಗಣ್ಣು: ವಾಹನಗಳ ಜಪ್ತಿ: ಗೂನಡ್ಕದಲ್ಲೂ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ..!?


ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಮತ್ತು ಮರಳು ಸಾಗಾಟದ ಮೇಲೆ ನಡೆಯುತ್ತಿರುವ ಅಧಿಕಾರಿಗಳ ದಾಳಿಗಳು ನಿರಂತರವಾಗಿ ನಡೆಯುತ್ತಿದ್ದು, ಇಂದು ಅಜ್ಜಾವರದಲ್ಲಿ ಅಕ್ರಮವಾಗಿ ಮರಳು ಮತ್ತು ಕಲ್ಲು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿರುವ ಬಗ್ಗೆ ವರಧಿಯಾಗಿದೆ.

ಅಜ್ಜಾವರ ಗ್ರಾಮದ ವಿ ಎ ಶರತ್ ನೇತೃತ್ವದಲ್ಲಿ ಆಲೆಟ್ಟಿ ಮಿತ್ತಡ್ಕ ಬಳಿ ಮತ್ತು ಅಜ್ಜಾವರದ ಕಾಂತಮಂಗಲ ಬಳಿ ಮರಳ ಲಾರಿಯನ್ನು ವಶಪಡಿಸಿಕೊಂಡರೆ, ಕೇರಳ ಭಾಗದಿಂದ ಬರುತ್ತಿದ್ದ ಕೆಂಪು ಕಲ್ಲಿನ ಲಾರಿಯನ್ನು ಸುಳ್ಯ ವಿವೇಕಾನಂದ ಸರ್ಕಲ್ ಬಳಿ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗಡೆಯವರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.


ಇದೀಗ ಮೂರು ವಾಹನವನ್ನು ಕಂದಾಯ ನಿರೀಕ್ಷಕರ ಕಚೇರಿ ಬಳಿ ಇರಿಸಲಾಗಿದ್ದು ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇಂದು ಗೂನಡ್ಕದಲ್ಲಿ ಪೆಲ್ತಡ್ಕ ಎಂಬಲ್ಲಿ ಪಯಸ್ವಿನಿ ನದಿಯಿಂದ ಮರಳು ಎತ್ತುತಿದ್ದ ಕಡೆಗಳಲ್ಲಿ ಸುಳ್ಯ ತಹಶೀಲ್ದಾರ್ ಖದ್ದು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಇದು ಬಾಲೆಂಬಿಯವರು ನಡೆಸುತ್ತಿದ್ದ ಅಡ್ಡೆ ಎಂದು ತಿಳಿದು ಬಂದಿದೆ.


ಕಲ್ಲು ಮತ್ತು ಮರಳು ಸಾಗಾಟದಾರರು ಅಕ್ರಮ ಕಡಿವಾಣ ಕಲ್ಲು ಗಣಿಗಾರಿಕೆ ಮಾಡುವುದನ್ನು ತಡೆಯಿರಿ ಆದರೆ ಮರಳು ಮತ್ತು ಕಲ್ಲು ಸಾಗಾಟ ಮಾಡುವುದನ್ನು ತಡೆಯಬೇಡಿ, ಇದರಿಂದ ಸಾಗಾಟವನ್ನೆ ವೃತ್ತಿಯಾಗಿಸಿದವರಿಗೆ ಜೀವನಕ್ಕೆ ತೊಂದರೆ ಆಗುತ್ತದೆ, ಸಾಲಗಳು ಬಾಕಿ ಆಗಿ ವಾಹನ ಹರಾಜಾಗಿ ಜೀವನಕ್ಕೆ ತೊಂದರೆ ಆಗುತ್ತದೆ , ಹಾಗಾಗಿ ಸಾಗಾಟ ಮಾಡುವವರನ್ನು ತಡೆಯಬಾರದು ಎಂದು ಸಾಗಾಟದಾರರ ಮನವಿ ಮತ್ತು ವಾದ
ಆದರೆ ಸಾಗಾಟದಾರ ಈ ವಾದವನ್ನು ಒಪ್ಪದ ಅಧಿಕಾರಿಗಳು ಸಂಘಟಿತ ದಾಳಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ