ಅರಂತೋಡಿನಲ್ಲಿ ಆದಿಚುಂಚನಗಿರಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ ಅನುಗ್ರಹ ಸಂದೇಶ.     ವಿಧ್ಯಾರ್ಥಿಗಳಿಗೆ ಯಶಸ್ಸಿನ ಸಪ್ತ ಸೂತ್ರ ಭೋದನೆ.

ಅರಂತೋಡಿನಲ್ಲಿ ಆದಿಚುಂಚನಗಿರಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ ಅನುಗ್ರಹ ಸಂದೇಶ. ವಿಧ್ಯಾರ್ಥಿಗಳಿಗೆ ಯಶಸ್ಸಿನ ಸಪ್ತ ಸೂತ್ರ ಭೋದನೆ.


ಧರ್ಮ ಜಾಗೃತಿಗಾಗಿ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ‌ ಕಾರ್ಯಕ್ರಮ ಕೈಗೊಂಡಿರುವ
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ
ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಗ್ರಾಮ ವಾಸ್ತವ್ಯದ 3 ನೆ ದಿನವಾದ ಗುರುವಾರ ಬೆಳಿಗ್ಗೆ ಅರಂತೋಡು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ

ಕಾರ್ಯಕ್ರಮದಲ್ಲಿಅನುಗ್ರಹ ಸಂದೇಶ ನೀಡಿ.ಸುಳ್ಯ ಜನತೆ ಎಲ್ಲಾ ವಿಚಾರದಲ್ಲಿಯೋ ಸಾಧನೆ ಮಾಡಿದವರು ಮಠಕ್ಕೂ ಅಪಾರ ಕೊಡುಗೆ ದೊರೆತಿದೆ ಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಶಾಖಾ ಮಠದ ಮಹಾ ಸ್ವಾಮೀಜಿ ಪ್ರಸನ್ನ ನಾಥ ಸ್ವಾಮೀಜಿಯವರನ್ನು ಮಠಕ್ಕೆ ನೀಡಿರುವ ಪುಣ್ಯ ನೆಲ ಎಂದರಲ್ಲದೆ, ಸ್ವಾತಂತ್ರ್ಯ ಸಮರ ವೀರರಾದ ಕೆದಂಬಾಡಿ ರಾಮಯ್ಯ ಗೌಡ ಗುಡ್ಡೆಮನೆ ಅಪ್ಪಯ್ಯ ಗೌಡ , ಸಾಹಿತಿ ಅರೆಭಾಷೆ ಅಕಾಡೆಮಿ ಸ್ಥಾಪಕ ಅಧ್ಯಕ್ಷ ದಿ ಎನ್ ಎಸ್ ದೇವಿಪ್ರಸಾದ್ ರನ್ನು

ನೆನಪಿಸಿಕೊಂಡರು. ವಿದ್ಯಾರ್ಥಿಗಳಿಗೆ ಯಶಸ್ಸಿನ ಸಪ್ತ ಸೂತ್ರಗಳನ್ನು ಭೋದಿಸಿದರು, ಜ್ಞಾನದಿಂದ ಸಮಾಜದಲ್ಲಿ ಸರ್ವವನ್ನು ಜಯಿಸಬಹುದು, ಎಂದು ವಿದ್ಯಾರ್ಥಿಗಳಿ ಆಶೀರ್ವಚನ ನೀಡಿದರು.ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲ ನಾಥ ಸ್ವಾಮೀಜಿ ಉಪಸ್ಥಿತರಿದ್ದರು.
ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲರು ಮತ್ತು ಸಮುದಾಯ ಸಮ್ಮಿಲನ ಕಾರ್ಯಕ್ರಮದ ವಲಯ ಅಧ್ಯಕ್ಷ ಡಾ. ಲೀಲಾಧರ್ ಡಿ.ವಿ. ಸ್ವಾಗತಿಸಿ ಪ್ರಸ್ತಾವನೆಗೈದರು. ಅರಂತೋಡು ಕಾಲೇಜಿನ ಪ್ರಾಂಶುಪಾಲ ರಮೇಶ್ ವಂದಿಸಿದರು. ಕಿಶೋರ್ ಕಿರ್ಲಾಯ ಕಾರ್ಯಕ್ರಮ ನಿರೂಪಿಸಿದರು.ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ.ವಿ.ರೇಣುಕಾ ಪ್ರಸಾದ್ , ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ,ದ.ಕ. ಗೌಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ, ಪ್ರಮುಖರಾದ ಅಕ್ಷಯ ಕೆ.ಸಿ., ಚಂದ್ರಾ ಕೋಲ್ಚಾರ್, ನಿತ್ಯಾನಂದ ಮುಂಡೋಡಿ, ಪಿ.ಸಿ.ಜಯರಾಂ, ಭರತ್ ಮುಂಡೋಡಿ, ಕೆ ಆರ್ ಗಂಗಾಧರ್ , ಸಂತೋಷ್ ಕುತ್ತಮೊಟ್ಟೆ,ಕಿಶೋರ್ ಕುಮಾರ್ ಉಳುವಾರು ವೇದಿಕೆಯಲ್ಲಿದ್ದರು.

ರಾಜ್ಯ