
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸುಳ್ಯ ತಾಲೂಕು ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಸುಳ್ಯ ತಾಲೋಕಿನಾದ್ಯಂತ ಸಂಚರಿಸುತ್ತಿದ್ದು ಡಿ.೨೧ ರಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ ಅವರ ಮನೆಯಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.



ಅವರ ಮನೆಗೆ ಆಗಮಿಸಿದ ಡಾ.ನಿರ್ಮಲಾನಂದನಾಥ ಸ್ವಾಮಿ ಹಾಗು ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮಿ ಅವರಿಗೆ ಭಕ್ತಿ ಪೂರ್ವಕ ಸ್ವಾಗತ ನೀಡಲಾಯಿತು. ಎಸ್.ಎನ್.ಮನ್ಮಥ ದಂಪತಿಗಳು ,ಸಹೋದರ ದೇವಿಪ್ರಸಾದ್ ಹಾಗು ಕುಟುಂಬಸ್ಥರು ಗುರುವಂದನೆ ಹಾಗು ಪಾದಪೂಜೆ ನೆರವೇರಿಸಿದರು. ಸ್ವಾಮೀಜಿ ಅವರು ಸಂದೇಶ ನೀಡಿದರು. ಸ್ಥಳೀಯ ಭಕ್ತಾಧಿಗಳ ಕೋರಿಕೆ ಮತ್ತು ಎಸ್ ಎನ್ ಮನ್ಮಥ ಕೋರಿಕೆ ಮೇಲೆ ಐವರ್ನಾಡಿನ ಕೃಷಿ ಪತ್ತಿನ ಸಹಕಾರಿ ಸಂಘದ ವಠಾರದಲ್ಲಿರುವ ದಿ.ಬಾಲಕೃಷ್ಣ ಗೌಡರ ಪತ್ಥಳಿಜಾಗಕ್ಕೆ ಬರವಂತೆ ಕೇಳಿಕೊಂಡ ಮೇರೆಗೆ ಸ್ವಾಮೀಜಿಗಳು ಭೇಟಿ ನೀಡಿ ಪುತ್ಥಳಿಗೆ ಹಾರಾರ್ಪಣೆ ಮಾಡಿದರು.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಡಾ. ಡಿ ವಿ.ಲೀಲಾಧರ್ ಸೇರಿದಂತೆ ಗೌಡ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

