

ಸುಳ್ಯ ಚೆನ್ನಕೇಶವ ದೇವಸ್ಥಾನ ವಠಾರದಲ್ಲಿ ಡಿ 16.ರಿಂದ 18 ರ ವರೆಗೆ, ಮೂರು ದಿನಗಳ ಬೃಹತ್ ಕೃಷಿ ಮೇಳ ನಡೆಯಲಿದ್ದು ಒಟ್ಟು 15000 ಕ್ಕೂ ಅಧಿಕ ಮಂದಿ ಮೇಳದಲ್ಲಿ ಪಾಲ್ಗೊಂಡು ಕೃಷಿ ಮೇಳದ ಸದುಪಯೋಗ ಪಡೆಯಲಿದ್ದಾರೆ ಎಂದು ಕೃಷಿ ಮೇಳದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಜಿ ಆರ್ ಪ್ರಸಾದ್ ಹೇಳಿದ್ದಾರೆ, ಅವರು ಡಿ.9 ರಂದು ಸುಳ್ಯ ಪ್ರೆಸ್ಬಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ಪ್ರಣವ ಸೌಹಾರ್ದ ಸಹಕಾರಿ ಸಂಘ ,ಸುಳ್ಯ ರೈತ ಉತ್ಪಾದಕರ ಕಂಪೆನಿ, ಮಂಗಳೂರು ವಿಶ್ವ ವಿದ್ಯಾನಿಲಯ , ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು, ಸಹಕಾರಿ ಯೂನಿಯನ್ ಸುಳ್ಯ, ಸುದ್ದಿ ಸಮೂಹ ಸಂಸ್ಥೆ ಇವುಗಳ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕೃಷಿ ಮೇಳ ಸಂಘಟಿಸಲಾಗಿದ್ದು,
ಡಿ .16 ರಂದು ಪೂ 9.30 ಕ್ಕೆ ತಹಶೀಲ್ದಾರ್ ಅನಿತಾ ಲಕ್ಷ್ಮೀ ಧ್ವಜಾರೋಹಣ ಮಾಡಿ ಕಾರ್ಯಕ್ರಮ ಆರಂಭ ಆಗುತ್ತದೆ . ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಗೋಪೂಜೆ ನಡೆಸಿ ಆಶೀರ್ವಚನ ನೀಡಲಿದ್ದಾರೆ . ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅಧ್ಯಕ್ಷತೆ ಈ ಕಾರ್ಯಕ್ರಮ ನಡೆಯಲಿದ್ದು. ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರದರ್ಶನ ಮಳಿಗೆ ಚಾಲನೆ ನೀಡುತ್ತಾರೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎನ್. ಭವಾನಿಶಂಕರ್ ತಾರಾಲಯಕ್ಕೆ ಚಾಲನೆ ನೀಡಲಿದ್ದು ಇದರಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿ ಸಾಧಕ , ಪದ್ಮಶ್ರೀ ಪುರಸ್ಕೃತರಾದ ಮಹಾಲಿಂಗ ನಾಯ್ಕ ವಿಟ್ಲ, .ಪೂ. 11 ರಿಂದ ಡಾ. ಕುರುಂಜಿ ವೆಂಕಟರಮಣ ಗೌಡ ವೇದಿಕೆಯಲ್ಲಿ ವಿಚಾರ ಸಂಕಿರಣ. ತೋಟಗಾರಿಕೆ ಕೃಷಿ , ರೋಗಗಳು , ಪರಿಹಾರ , ಬೆಳೆವಿಮೆ ಬಗ್ಗೆ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಾಗಾರ ಸಹಕಾರಿ ಯೂನಿಯನ್ ಅಧ್ಯಕ್ಷ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಹೆಚ್ ಆರ್ ನಾಯಕ್,ಡಾ. ನಾಗರಾಜ್, ಪ್ರಗತಿ ಪರ ಕೃಷಿಕ ಅಶೋಕ್ ಪ್ರಬು , ಪ್ರಶಾಂತ್ ಪೈ ಪ್ರೇಮ ವಸಂತ ಭಟ್ ಮೊದಲಾದವರು ಭಾಗವಹಿಸಲಿದ್ದು.12.30ರಿಂದ ಕೃಷಿಕರ ಸಂವಾದ . 2.30 ರಿಂದ ಹೈನುಗಾರಿಕೆ ಮತ್ತು ಕೃಷಿ ಮಾಹಿತಿ. ಬಾಪೂ ಸಾಹೇಬ್ ಅರಂಬೂರು ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಪಶು ಸಂಗೋಪನೆ ಇಲಾಖೆಯ ಡಾ.. ನಿತಿನ್ ಪ್ರಭು, ನಾಗರಾಜ್, ಪೂಜಾ ಪೈ, ಡಾ.ಅಣ್ಣಯ್ಯಕುಲಾಲ್ ಉಳ್ತೂರು, ರತ್ನಾಕರ ಕುಳಾಯಿ ಉಪಸ್ಥಿತಿ ಇರಲಿದ್ದಾರೆ. ಸಂಜೆ 5 ಕ್ಕೆ ಕೃಷಿ ಮೇಳದ ಉದ್ಘಾಟನೆ ಕೃಷಿ ಮೇಳವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ನೆರವೇರಿಸಲಿದ್ದು . ಮೀನುಗಾರಿಕೆ , ಬಂದರು ಮತ್ತು ಒಳನಾಡು ಜಲಸಾರಿಗೆ ಎಸ್ . ಅಂಗಾರ ಅಧ್ಯಕ್ಷತೆ ವಹಿಸಲಿದ್ದು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ದೀಪ ಪ್ರಜ್ವಲನೆ ಮತ್ತು ಆಶೀರ್ವಚನ ನೀಡಲಿದ್ದಾರೆ . ಪ್ರಾಚೀನ ವಸ್ತು ಸಂಗ್ರಹಾಲಯವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಂಧನ , ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ವಿ . ಸುನಿಲ್ ಕುಮಾರ್ ,ತಾರಾಲಯವನ್ನು ಸಂಸದರಾದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ . ಪಾರಂಪರಿಕ ಗ್ರಾಮವನ್ನು ಮಂಗಳೂರು ವಿಶ್ವವಿದ್ಯಾಲಯ ಉಪಕುಲಪತಿಗಳಾದ ಡಾ ಪಿ . ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟನೆ.ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ , ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ವಿ. ರೇಣುಕಾಪ್ರಸಾದ್ .ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ , ಹಿರಿಯ ಸಹಕಾರಿ , ರಾಷ್ಟ್ರ ಮಧ್ಯ ಕ್ಷೇತ್ರಿಯ ಸಂಪರ್ಕ ಪ್ರಮುಖ್ ಸತೀಶ್ಚಂದ್ರ ಎಸ್.ಆರ್, ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕರು , ನಿರ್ದೆಶಕ ಹಾಗೂ ನಟ ಶಿವಧ್ವಜ್ ಶೆಟ್ಟಿ ಅತಿಥಿಗಳು ಬಾಗವಹಿಸಲಿದ್ದಾರೆ . ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಟರಾಜ ನೃತ್ಯನಿಕೇತನ ಕಲ್ಲುಗುಂಡಿ ಇವರಿಂದ ಜಾನಪದ ನೃತ್ಯ ವೈಭವ, ಖ್ಯಾತ ನಿರ್ಮಾಪಕ ನಿರ್ದೇಶಕ ಶಿವಧ್ವಜ್ ಶೆಟ್ಟಿ ಇವರ ಈ ಮಣ್ಣು ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ಪ್ರದರ್ಶನ
ಡಿ 17 ರಂದು ಬೆ.9.30 ರಿಂದ 10.30 : ಆಧುನಿಕ ಕೃಷಿ ಮತ್ತು ಪರ್ಯಾಯ ಸಮಗ್ರ ಕೃಷಿ ಬಗ್ಗೆ ವಿಚಾರ ಸಂಕಿರಣ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಕೃಷಿಕ ಪ್ರಭಾಕರ ಮಯ್ಯ ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಕಡಮಜಲು ಸುಭಾಷ್ ರೈ, ವೇದಾವತಿ ಅನಂತ ಬಡ್ಡಡ್ಕ, ಪುರುಷೋತ್ತಮ ಗೌಡ ಮಾಣಿಬೆಟ್ಟು, ಇರಲಿದ್ದಾರೆ . 10.30 ರಿಂದ ಸಂವಾದ , 11.30 ರಿಂದ 1.30 ರ ವರೆಗೆ ಜೇನು ಸಾಕಾಣಿಕೆ ಬಗ್ಗೆ ಸಂವಾದ ನಡೆಯಲಿದೆ.ಇದರ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಜೇನು ಸಹಕಾರಿ ಸಂಘದ ಅಧ್ಯಕ್ಷ ಚಂದ್ರಾ ಕೊಲ್ಚಾರ್ ವಹಿಸಲಿದ್ದು,ದುರ್ಗಾಕುಮಾರ್ ನಾಯರ್ ಕೆರೆ ನಡೆಸಿ ಕೊಡಲಿದ್ದಾರೆ, ಈ ಸಂದರ್ಬ್ ದಲ್ಲಿ ಪುಟ್ಟಣ್ಣ ಗೌಡ ಕಾಡುತೋಟ, ಮನಮೋಹನ ಅರಂಬ್ಯ,ರಾಧಾಕೃಷ್ಣ ಬೆಟ್ಟಂಪಾಡಿ, ಹರೀಶ ಕೊಡ್ಲ ವಿವೇಕ್ ಪಡ್ಪು, ಲತಾ ಮರ್ಕಂಜ,ಭಾಗವಹಿಸಲಿದ್ದಾರೆ .3 ರಿಂದ 4 ಒಳನಾಡು ಮೀನುಗಾರಿಕೆ ಬಗ್ಗೆ ಕಾರ್ಯಾಗಾರ ಮೀನು ಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು,ಸಂಪನ್ಮೂಲ ವ್ಯಕ್ತಿಯಾಗಿ ರಮೇಶ್ ಎಂ ಆರ್,ಭಾಗವಹಿಸಲಿದ್ದು, ಮಹೇಶ್ ಕುಮಾರ್ ಮೇನಾಲ, ಸಂತೋಷ್ ಕುಮಾರ್ ಶೆಟ್ಟಿ,ನೂಜಾಲು ಪದ್ಮನಾಭ ಗೌಡ ಉಪಸ್ಥಿತಿ ಇರಲಿದ್ದಾರೆ . 4 ರಿಂದ 4.30 ರವರೆಗೆ ಸಂವಾದ .
ಸಂಜೆ5.30ಕ್ಕೆ ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಅಧ್ಯಕ್ಷತೆ ಸುಳ್ಯ ಎ.ಒ.ಎಲ್ .ಇ . ಅಧ್ಯಕ್ಷ ಡಾ . ಕೆ.ವಿ. ಚಿದಾನಂದ . ಆಶೀರ್ವಚನವನ್ನು ಮಂಗಳೂರು ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಗುಣಕರ ರಾಮದಾಸ್ ಭಾಗವಹಿಸಲುದ್ದಾರೆ. ಮುಖ್ಯ ಅತಿಥಿಗಳಾಗಿ ತೋಟಗಾರಿಕಾ ಸಚಿವರಾದ ಮುನಿರತ್ನ , ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಡಾ.ಎಂ.ಎನ್ . ರಾಜೇಂದ್ರ ಕುಮಾರ್ , ಮಂಗಳೂರು ವಿವಿ ಕುಲ ಸಚಿವರಾದ ಡಾ.ಕಿಶೋರ್ ಕುಮಾರ್ ಕೆ.ಟಿ. , ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕೇಸರರಾದ ಡಾ . ಹರಪ್ರಸಾದ್ ತುದಿಯಡ್ಕ , ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷರಾದ ಸೀತಾರಾಮ ರೈ ಸವಣೂರು , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನರಾಮ್ ಸುಳ್ಳಿ , ಗೌರವ ಉಪಸ್ಥಿತಿ ಹಿರಿಯ ಸಹಕಾರಿ ಜಾಕೆ ಮಾಧವ ಗೌಡ , ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾದ ಪಿ.ಸಿ. ಜಯರಾಮ , ಜಿ.ಪಂ. ಮಾಜಿ ಸದಸ್ಯರಾದ ಹರೀಶ್ ಕಂಜಿಪಿಲಿ ಭಾಗವಹಿಸಲಿದ್ದು
ಅಡಿಕೆಗೆ ಎಲೆ ಹಳದಿ ರೋಗದ ಬಗ್ಗೆ ತೋಟಗಾರಿಕಾ ಸಚಿವರೊಂದಿಗೆ ಸಂವಾದ ನಡೆಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.4.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಟೀಂ ಟ್ಯಾಲೆಂಟ್ ಹಂಟರ್ಸ್ ತಂಡದಿಂದ ಕೊಳಲುವಾದನ ನಡೆದು 7.00 ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಕಲಾವಿದರಿಂದ ಶ್ವೇತಾ ಅರೆಹೊಳೆ ನಿರ್ದೇಶನದ ನೃತ್ಯ ವೈಭವ ನಡೆಯಲಿರುವುದು. ಡಿ .18 ರಂದು 9.30 ರಿಂದ 11.30 ರ ವರೆಗೆ ಸಾವಯವ ಕೃಷಿ ಮತ್ತು ತರಕಾರಿ ಬೆಳೆಗಳ ಮಾಹಿತಿ ಕಾರ್ಯಾಗಾರ ಸಂಪನ್ಮೂಲ ವ್ಯಕ್ತಿಯಾಗಿ ಹರಿಕೃಷ್ಣ ಕಾಮತ್, ಪದ್ಮಾಕೋಲ್ಚಾರ್,ಭಾಗವಹಿಸಲಿದ್ದು ಈ ಸಂದರ್ಭದಲ್ಲಿ ದೇರಣ್ಣ ಗೌಡ,ಅಡ್ಡಂತಡ್ಕ, ರತ್ನಾಕರ ಕುಳಾಯಿ ಉಪಸ್ತಿತಿ ಇರಲಿದ್ದಾರೆ. 11.30 ರಿಂದ ಸಂವಾದ , 12.00 ರಿಂದ 1.30 ರವರೆಗೆ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಜನ ಸಂವಾದ 3.00 ರಿಂದ 4.00 ಉತ್ಪನ್ನ ಮೌಲ್ಯವರ್ಧನ ಬಗ್ಗೆ ಮತ್ತು ಕಿರು ಆಹಾರ ಸಂಸ್ಕರಣೆ (PMFME Scheme) ಹಾಗೂ ಆತ್ಮನಿರ್ಭರ ಯೋಜನೆಗಳಿಗೆ ಸಂಬಂಧಪಟ್ಟಂತೆ ಸರಕಾರದ ಸವಲತ್ತುಗಳು ಅಧ್ಯಕ್ಷತೆ ಅಡೂರು ಕೃಷ್ಣ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಡಾ ಫಝಲ್, ಸತೀಶ್ ಮಾಬೆನ್ ಭಾಗವಹಿಸಲಿದ್ದು, ಸೋಮಪ್ಪ ನಾಯಕ್, ಶರತ್ ಕುಮಾರ್ , ಚಂದ್ರಹಾಸ ಕುಂದರ್ ಉಪಸ್ಥಿತಿ ಇರಲಿದ್ದಾರೆ. ಸಂಜೆ ಗಂಟೆ 4 ರಿಂದ 4.30 ರ ತನಕ ಸಂವಾದ , 5.30 ರಿಂದ ಕೃಷಿ ಮೇಳದ ಸಮಾರೋಪ ಸಮಾರಂಭ ನಡೆಯಲಿದ್ದು. ಅಧ್ಯಕ್ಷತೆಯನ್ನು ಮಂಗಳೂರು ಪ್ರಣವ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಜಿ.ಆರ್ . ಪ್ರಸಾದ್ ವಹಿಸಲಿದ್ದಾರೆ . ಆಶೀರ್ವಚನವನ್ನು ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನೀಡುವರು . ಮುಖ್ಯ ಅತಿಥಿಗಳು ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಿ . ಇದರ ಅಧ್ಯಕ್ಷ ಸುಚರಿತ ಶೆಟ್ಟಿ , ಸುದ್ದಿ ಮಾಧ್ಯಮ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ. ಶಿವಾನಂದ , ಭಾರತೀಯ ರಬ್ಬರ್ ಮಂಡಳಿ ನಿರ್ದೇಶಕ ಮುಳಿಯ ಕೇಶವ ಭಟ್ , ಗೌರವ ಉಪಸ್ಥಿತಿಯಲ್ಲಿ ಸುಳ್ಯ ಟಿ.ಎ.ಪಿ.ಸಿ.ಎಂ. ಸೊಸೈಟಿ ಅಧ್ಯಕ್ಷರು ನಿತ್ಯಾನಂದ ಮುಂಡೋಡಿ , ಹಿರಿಯ ಸಹಕಾರಿ ಪಿ.ಬಿ. ದಿವಾಕರ ರೈ , ತೂಗು ಸೇತುವೆಗಳ ಸರದಾರ ಪದ್ಮಶ್ರೀ ಡಾ. ಗಿರೀಶ್ ಭಾರಧ್ವಜ್ , ನಗರ.ಪಂಚಾಯತ್. ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ , ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಸ್.ಎನ್ . ಮನ್ಮಥ ಭಾಗವಹಿಸಲಿದ್ದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 3.30 ರಿಂದ 4.30 ರವರೆಗೆ ರಂಗಮಯೂರಿ ಕಲಾಶಾಲೆ ಸುಳ್ಯ ಇವರಿಂದ ಲೋಕೇಶ್ ಊರುಬೈಲು ನಿರ್ದೇಶನದಲ್ಲಿ ವಿಶ್ವಮಾನವ ರಂಗರೂಪಕ . ಸಂಜೆ 7 ರಿಂದ ರಾಜ್ಯ ಪ್ರಶಸ್ತಿವಿಜೇತ ಕಲಾಕುಂಭ ಕಲಾವಿದರು ಕುಳಾಯಿ ಇವರಿಂದ ತುಳುನಾಡ ವೈಭವ ನಡೆಯುವುದು ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಎ.ವಿ.ತೀರ್ಥರಾಮ, ಕೃಷಿ ಮೇಳ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್, ಕೋಶಾಧಿಕಾರಿ ಸಂತೋಷ್ ಜಾಕೆ, ಸ್ವಾಗತ ಸಮಿತಿ ಸಂಚಾಲಕ ಡಾ.ಎನ್.ಎ.ಜ್ಞಾನೇಶ್, ಸಭಾ ನಿರ್ವಹಣಾ ಸಮಿತಿ ಸಂಚಾಲಕ ದಿನೇಶ್ ಮಡಪ್ಪಾಡಿ, ಸಂಯೋಜಕ ಯಶ್ವಿತ್ ಕಾಳಂಮನೆ, ಮೆರವಣಿಗೆ ಸಮಿತಿ ಸಂಚಾಲಕ ದೊಡ್ಡಣ್ಣ ಬರೆಮೇಲು, ಸಂಚಾಲಕರಾದ ಚಂದ್ರಶೇಖರ ಪೇರಾಲು, ಚಂದ್ರ ಕೋಲ್ಚಾರ್, ಪಿ.ಎಸ್.ಗಂಗಾಧರ, ರಜತ್ ಅಡ್ಕಾರ್, ಪ್ರಣವ ಸೌಹಾರ್ಧ ಸೌಹಾರ್ಧ ಸಹಕಾರಿ ಸಂಘದ ನಿರ್ದೇಶಕ ಸೋಮಪ್ಪ ನಾಯ್ಕ್, ರವಿಶಂಕರ್, ಸಂಯೋಜಕ ರಂಜಿತ್ ಅಡ್ತಲೆ ಮೊದಲಾದವರು ಉಪಸ್ಥಿತರಿದ್ದರು.


