ಅಡ್ಕಾರಿನಲ್ಲಿ ಒಂಟಿ ವೃದ್ಧೆಯ ಸರ ಎಳೆದು ಪರಾರಿಯಾದ ಆಗುಂತಕ: ಪ್ರಕರಣ ದಾಖಲು.

ಅಡ್ಕಾರಿನಲ್ಲಿ ಒಂಟಿ ವೃದ್ಧೆಯ ಸರ ಎಳೆದು ಪರಾರಿಯಾದ ಆಗುಂತಕ: ಪ್ರಕರಣ ದಾಖಲು.

ಸುಳ್ಯ ಜಾಲ್ಸೂರು ಗ್ರಾಮದ ಅಡ್ಕಾರ್ ಬೈತಡ್ಕ ವೈಲ್ಡ್ ಕೆಫೆ ಬಳಿ ಒಬ್ಬಂಟಿ ವೃದ್ದ ಮಹಿಳೆ ಇರುವ ಮನೆಗೆ ಕಳ್ಳನೋರ್ವ ನುಗ್ಗಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಚಿನ್ನ ಕಳೆದುಕೊಂಡ ಮಹಿಳೆ ಬೈತಡ್ಕ ನಿವಾಸಿ ದಿವಂಗತ ಶಿವರಾಯರವರ ಪತ್ನಿ ಕಮಲ (64 ವ )ಎಂದು ತಿಳಿದುಬಂದಿದೆ. ಕಳವಾದ ಚಿನ್ನದ ಸರ 13 ಗ್ರಾಂ ಅಂದಾಜು 45 ಸಾವಿರ ಮೊತ್ತದಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸುಳ್ಯ ಪೊಲೀಸರಿಗೆ ದೂರು ನೀಡಿದ್ದು ಸುಳ್ಯ ಪೊಲೀಸರು ದೂರು ದಾಖಲಿಸಿ ಕೊಂಡು ಕಳ್ಳನ ಪತ್ತೆಗಾಗಿ ಶೋಧ ಕಾರ್ಯ ತೊಡಗಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ