ಸುಳ್ಯ ಕಾಂಗ್ರೆಸ್ ನಲ್ಲಿ ನಂದಕುಮಾರ್ ಪರವಾಗಿ ಹೆಚ್ಚಿದ ಕಾರ್ಯಕರ್ತರ ಒತ್ತಡ

ಸುಳ್ಯ ಕಾಂಗ್ರೆಸ್ ನಲ್ಲಿ ನಂದಕುಮಾರ್ ಪರವಾಗಿ ಹೆಚ್ಚಿದ ಕಾರ್ಯಕರ್ತರ ಒತ್ತಡ

ಸುಳ್ಯ ಕ್ಷೇತ್ರಕ್ಕೆ ಜಿ ಕೃಷ್ಣಪ್ಪರ ಆಯ್ಕೆಯಿಂದ ಕೆರಳಿರುವ ಸುಳ್ಯದ ಕಾರ್ಯಕರ್ತರು ಮತ್ತು ನಂದಕುಮಾರ್ ಅಭಿಮಾನಿಗಳು ಅಭ್ಯರ್ಥಿ ಬದಲಾವಣೆಗೆ ಆಗ್ರಹಿಸಿ ಮಂಗಳೂರು ಚಲೋ ಅಭಿಯಾನದ ಮೂಲಕ ಜಿಲ್ಲಾ ನಾಯಕರಿಗೆ ಒತ್ತಡ ಹೇರಲು ಮಂಗಳೂರಿಗೆ ಸುಳ್ಯ ಮತ್ತು ಕಡಬದಿಂದ ಸಾವಿರಾರು ಕಾರ್ಯಕರ್ತರು ತೆರಳಿದ್ದು ಇಂದು ಮಧ್ಯಾಹ್ನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಮಾವೇಶ ಗೊಳ್ಳಲಿದ್ದಾರೆ. ಮಂಗಳೂರಿಗೆ ತೆರಳುವ ಮುನ್ನ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೇರಿದ ನೂರಾರು ಕಾರ್ಯಕರ್ತರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ್ ರವರಿಗೆ ಮನವಿ ಸಲ್ಲಿಸಿದರು. ಕಡಬದಲ್ಲಿಯೂ ಇದೇ ರೀತಿ ಕಾರ್ಯಕರ್ತರು ಕಡಬ ಬ್ಲಾಕ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಮಂಗಳೂರಿಗೆ ತೆರಳಿದ್ದಾರೆ.


ಜಿಲ್ಲಾ ಕಾಂಗ್ರೆಸ್ ಹಾಗೂ ಹೈಕಮಾಂಡ್ ಗೆಲ್ಲುವ ಅಭ್ಯರ್ಥಿ ನಂದಕುಮಾರ್ ರವರಿಗೆ ಟಿಕೆಟ್ ನೀಡದೆ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಕಾರ್ಯಕರ್ತರ ಆಕ್ರೋಶ ಹೆಚ್ವಿಸಿದೆ.

Uncategorized