ಸುಳ್ಯ ಗುರುಂಪು ಮಣ್ಣು ಕುಸಿದು ಮೃತಪಟ್ಟ ಕುಟುಂಬಕ್ಕೆ ಪರಿಹಾರಕ್ಕೆ ಪ್ರಯತ್ನ ಪಟ್ಟಿದ್ದು ಬಿ.ಎಮ್ ಎಸ್ ಕಾರ್ಮಿಕ ಸಂಘಟನೆ.:


ಬಿ.ಎಂ ಎಸ್ ಕಾರ್ಮಿಕ ಸಂಘಟನೆ ನೋಂದಾಯಿತ ಕಾರ್ಮಿಕರ ಹಿತರಕ್ಷಣೆಗೆ ಬದ್ಧ.

ಮಾ೨೫ ರಂದು ಸುಳ್ಯದ ಗುರುಂಪು ಎಂಬಲ್ಲಿ ನಡೆದ ದುರಂತದಲ್ಲಿ ಮೃತಪಟ್ಟ,ಸೋಮಶೇಖರ ರೆಡ್ಡಿ, ಶಾಂತವ್ವ ಹಾಗೂ ಚಂದ್ರಶೇಖರ ಕುಟುಂಬಕ್ಕೆ ಕಟ್ಟಡ ಮಾಲಿಕರಿಂದ ಪರಿಹಾರ ತೆಗೆಸಿಕೊಟ್ಟದ್ದು ಬಾರತೀಯ ಮಜ್ಧೂರ್ ಸಂಘ,ಮಿಕ್ಕುಳಿದ ಸಂಘ ಕಟ್ಟಡ ಮಾಲಿಕರ ಪರವಾಗಿದ್ದರು ಎಂದು ಬಿ ಎಂ ಎಸ್ ಸಂಘದ ತಾಲೋಕು ಸಂಚಾಲಕ ತಿಳಿಸಿದ್ದಾರೆ . ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಸ್ಟಿ ನಡೆಸಿ ಮಾತನಾಡಿದ ಬಿ ಎಂ ಎಸ್ ಸಂಘಟನೆ ಸಂಚಾಲಕ ಮದುಸೂದನ್ , ಎಲ್ಲಾ ಕಾರ್ಮಿಕರು ರಾಜ್ಯ ಕಾರ್ಮಿಕ ಮಂಡಳಿಯ ಸದಸ್ಯತ್ವ ಪಡೆಯಬೇಕು, ಅವಘಡ ಘಟಿಸುವ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆ ನೆರವಿಗೆ ಬರುತ್ತದೆ , ಮಾ.೨೫ ರಂದು ಗುರುಂಪಿನಲ್ಲಿ ನಡೆದ ದುರ್ಘಟನೆಯಲ್ಲಿ ಬಿ ಎಂ ಎಸ್ ಸಂಘ ಸಂಪೂರ್ಣ ಕಾರ್ಮಿಕರ ಪರವಾಗಿ ನಿಂತು, ಮೃತ ಕಾರ್ಮಿಕರ ಮನೆಯವರಿಗೆ ಪರಿಹಾರ ಸಿಗುವಂತೆ ಮಾಡಿದೆ, ಈಗಾಗಲೆ ತಲಾ ೫೦೦೦೦ ರಂತೆ ಮೃತರ ಮನೆಯವರಿಗೆ ನೀಡಲಾಗಿದೆ, ಮತ್ತು ನಡೆದ ಮಾತುಕತೆಯಲ್ಲಿ ಇನ್ನು ತಲಾ 2,00,000 ನೀಡಲು ಕಟ್ಟಡ ಮಾಲಿಕರು ಒಪ್ಪಿದ್ದಾರೆ. ಅಲ್ಲದೆ ಕಾರ್ಮಿಕ ಮಂಡಳಿಯಿಂದ ಪರಿಹಾರ ಸಿಗುವಂತೆ ಪ್ರಯತ್ನ ಮಾಡಲಾಗುವುದು ಅಲ್ಲದೆ, ಸುಳ್ಯದ ನಿರೀಕ್ಷಿಣಾ ಮಂದಿರದಲ್ಲಿ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿಯೂ ಸರಕಾರದ ಮಟ್ಟದಿಂದ ಪರಿಹಾರ ಒದಗಿಸುವ ಭರವಸೆ ಸಿಕ್ಕಿದೆ ಎಂದು ಹೇಳಿದ್ದಾರೆ.

ನಗರಪಂಚಾಯತ್ ನೀರಿನ ಟ್ಯಾಂಕ್ ವ್ಯಾಪ್ತಿಯಲ್ಲಿ ಇನ್ನೂ ಅನೇಕ ಅಕ್ರಮ ಹಾಗೂ ಅಪಾಯಕಾರಿ ಕಾಮಗಾರಿ ನಡೆಯುತ್ತಿದ್ದು ಇವರ ವಿರುದ್ದ ಕೂಡಲೇ ಪಂಚಾಯತ್ ಕ್ರಮ ಜರುಗಿಸ ಬೇಕು ಮತ್ತು ಕಾರ್ಮಿಕರು ಅಪಾಯಕಾರಿ ಕೆಲಸಕ್ಕೆ ಮುಂದಾಗಬಾರದು, ಕಾರ್ಮಿಕರೆಲ್ಲಾ ಸಂಘಟನೆಯಲ್ಲಿ ನೋಂದಾವಣೆ ಮಾಡಿಕೊಂಡು ಸರಕಾರದ ಸವಲತ್ತು ಪಡೆಯು ವಂತಾಗಬೇಕು ಎಂದರು. ಸುದ್ದಿಗೋಸ್ಟಿಯಲ್ಲಿ ಕಟ್ಟಡ ಕಾಮಗಾರಿ ಮಜ್ದೂರು ಸಂಘದ ನಾರಾಯಣ ಜಿ.ಎನ್. ಕೋಶಾಧಿಕಾರಿ ಮೋನಪ್ಪ ಉಪಸ್ಥಿತರಿದ್ದರು.