

ಸುಳ್ಯ: ಸಂಪಾಜೆ ಕಾಂಗ್ರೆಸ್‌ನಲ್ಲಿ ಕೆಲವು ಮುಖಂಡರು ಕುಟುಂಬ ರಾಜಕೀಯ ಮಾಡುತ್ತಿದ್ದಾರೆ ಇದರಿಂದ ಗ್ರಾಮ ಪಂಚಾಯತ್‌ನಲ್ಲಿ ಗೊಂದಲ ಉಂಟಾಗಿದೆ.ಮತ್ತು ಒಬ್ಬರು ಅನೇಕ ಹುದ್ದೆ ಬಯಸುತ್ತಿರುವುದೇ ಕಾಂಗ್ರೇಸ್ ಬಿಕ್ಕಟ್ಟಿಗೆ ಕಾರಣ ಎಂದು ಗ್ರಾ.ಪಂ.ಸದಸ್ಯ ಪಿ.ಕೆ.ಅಬೂಸಾಲಿ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2020 ರಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆದಾಗ ಮೀಸಲಾತಿ ಪ್ರಕಾರ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ನನಗೆ ಅಧ್ಯಕ್ಷತೆ ನೀಡಬೇಕಿತ್ತು. ಆದರೆ ಅರ್ಹತೆ ಇದ್ದರೂ ಅಂದು ನಾನು ಅಧ್ಯಕ್ಷತೆಗೆ ಆಸೆಪಟ್ಟಿರಲ್ಲಿಲ್ಲ ಆ ಸಂದರ್ಭದಲ್ಲಿ ಮಾತುಕತೆ ನಡೆದಂತೆ ಎರಡೂವರೆ ವರ್ಷದ ಅವಧಿಯನ್ನು ಒಂದೂಕಾಲು ವರ್ಷದಂತೆ ಹಿರಿಯ ಸದಸ್ಯರಾದ ನನಗೆ ಮತ್ತು ಜಿ.ಕೆ.ಹಮೀದ್ ಅವರಿಗೆ ಹಂಚಿಕೆ ಮಾಡಲು ಸದಸ್ಯರ ಸಭೆಯಲ್ಲಿ ಮತ್ತು ಪಕ್ಷದಲ್ಲಿ ನಿರ್ಧರಿಸಲಾಗಿತ್ತು.ನಂತರ ಅಧ್ಯಕ್ಷತೆ ಹಂಚಿಕೆ ಬಗ್ಗೆ ಬೇರೆ ರೀತಿ ನಿರ್ಧಾರ ಆಗಿದೆ ಎಂದು ಹೇಳಲಾಗಿತ್ತು ಆದರೆ ಇದ್ದಕ್ಕೆ ಯಾವುದೆ ಲಿಖಿತ ದಾಖಲೆ ಇಲ್ಲ ಪಕ್ಷದ ನೆಲೆಯಲ್ಲಿ ಅಥವಾ ಸದಸ್ಯರಲ್ಲಿ ಬೇರೆ ಯಾವುದೇ ನಿರ್ಧಾರ ಆಗಿಲ್ಲ ಇದೀಗ ಮಹಮ್ಮದ್ ಕುಂಞಿ ಯವರು ತಮ್ಮಪುತ್ರನಿಗೆ ಅಧ್ಯಕ್ಷತೆ ಸಿಗಬೇಕು ಎಂದು ವಲಯ ಅಧ್ಯಕರ ದಿಕ್ಕು ತಪ್ಪಿಸಿ ಅವರು ಜಿ ಕೆ ಹಮೀದ್ ವಿರುದ್ದ ಎತ್ತಿ ಕಟ್ಟಿದ್ದಾರೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿಯುತ್ತಿದ್ದೇವೆ. ಅಧಿಕಾರ, ಹುದ್ದೆ ಎಲ್ಲರಿಗೂ ನೀಡಬೇಕು. ಕೆಲವೇ ಕೆಲವು ಮಂದಿ ಮಾತ್ರ ಅನುಭವಿಸಿಕೊಂಡು ಬರುವುದಾದರೆ ನಾವೆಲ್ಲ ಯಾಕಾಗಿ ಪಕ್ಷ ಸಂಘಟನೆಗೆ ದುಡಿದಿದ್ದೇವೆ ಎಂದು ಹಿರಿಯ ಕಾಂಗ್ರೇಸ್ ನವರು ಅರಿತು ಕೊಳ್ಳಬೇಕು ಎಂದು ಅಬೂಸಾಲಿ ಹೇಳಿದರು.
ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ ಕಾರಣ ಪಂಚಾಯತ್‌ನಲ್ಲಿ ಪೂರ್ಣ ಅಧಿಕಾರ ದೊರೆತಿದೆ. ಟಿ ಎಂ ಶಹೀದ್ ಸಂಪಾಜೆಯ ಅಭಿವೃದ್ದಿಗಾಗಿ ಸಾಕಷ್ಟು ಅನುದಾನ ಒದಗಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುಂದರಿ ಮುಂಡಡ್ಕ, ಎಸ್.ಕೆ. ಹನೀಫ, ವಿಜಯ್ ಆಲಡ್ಕ ಉಪಸ್ಥಿತರಿದ್ದರು.