


ಪೆರಾಜೆ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘದಿಂದ 31 ನೇ ವರ್ಷದ ಅಯ್ಯಪ್ಪ ಸ್ವಾಮಿ ದೀಪೋತ್ಸವ ಶಾಸ್ತಾವು ದೇವಸ್ಥಾನದ ವಠಾರದಲ್ಲಿ ಡಿ.17.ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಾಜೆ ಅಯ್ಯಪ್ಪ ಸ್ವಾಮೀ ದೀಪೋತ್ಸವ ಸಂಘದ ಅಧ್ಯಕ್ಷ ಸುರೇಶ್ ಪೆರುಮುಂಡ ವಹಿಸಿದ್ದರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ, ಪಂಚಾಯತ್ ಸದಸ್ಯೆ ಭೂದೇವಿ.ಅಯ್ಯಪ್ಪ ಸ್ವಾಮೀ ದೀಪೋತ್ಸವ ಸಂಘದ ಮಾಜೀ ಅಧ್ಯಕ್ಷ ಪಿ.ಎಂ ಭೋಜಪ್ಪ ಪೆರುಮುಂಡ, ಶ್ರೀ ಶಾಸ್ತಾವು ದೇವಸ್ಥಾನ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ತೇಜಪ್ರಸಾದ್

ಅಮೆಚೂರು, ಕಾರ್ಯಕ್ರಮದ ಸ್ಥಳ ದಾನಿ ಗೌತಮ್ ಮೂಲೆಮಜಲು ಮೊದಲಾದವರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ, ಗ್ರಾಮದ ಹಿರಿಯ ಯಕ್ಷಗಾನ ಕಲಾವಿದರಾದ ಕೊಳಂಗಾಯ ಕೃಷ್ಣಪ್ಪ, ಮತ್ತು ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ಇಲಾಖೆಯ ನಿವೃತ ಎಸ್ ಐ, ಬಾಲಕೃಷ್ಣ ಕುಂದಲ್ಪಾಡಿಯವರನ್ನು ಸನ್ಮಾನಿಸಲಾಯಿತು ದಯಾನಂದ ಬನ ಸ್ವಾಗತಿಸಿ, ಮೋಹನ್ ಪಡ್ಪು ವಂದಿಸಿದರು, ಮೋಹನ್ ಮಾಸ್ತರ್ ಪೆರುಮುಂಡ ಕಾರ್ಯಕ್ರಮ ನಿರೂಪಿಸಿದರು , ಯುವಾನಂದ ಪೆರಂಗಜೆ ಸಹಕರಿಸಿದರು ಸ್ಥಳೀಯ ಭಜನಾ ತಂಡದಿಂದ ಭಜನೆ ಮತ್ತು ಅಯ್ಯಪ್ಪ ಸ್ವಾಮಿ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಶಾಸ್ತಾವು ಯಕ್ಷಗಾನ ಸಂಘ ಹಾಗೂ ಹಿರಿಯ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಶಿವ ಪಂಚಾಕ್ಷರಿ ಮಹಿಮೆ ” ಯಕ್ಷಗಾನ ಬಯಲಾಟ ನಡೆಯಿತು.

ಸಂಜೆ ಅರಂತೂಡು ಭಜನಾ ಮಂದಿರದಿಂದ ಕೇರಳ ಚೆಂಡೆ ವಾದನದೊಂದಿಗೆ,ಪಾಲೆಕೊಂಬು ಮೆರವಣಿಗೆ ಸಣ್ಣ ಮಕ್ಕಳ ಹೂದೀಪ,ಅಯ್ಯಪ್ಪ ಭಕ್ತರ ಪೇಟ ತುಳುಪಾಟ್ ಶಾಸ್ತಾವು ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು, ರಾತ್ರಿ ಗಂಟೆ 8.ರಿಂದ,ದೀಪಾರಾಧನೆ, ಅಗ್ನಿ ಸ್ಪರ್ಶ,ಅಯ್ಯಪ್ಪ ಸ್ವಾಮಿಯ ಪೂಜೆ, ಅಯ್ಯಪ್ಪ ಭಕ್ತರಿಂದ ಅಪ್ಪ ಸೇವೆ, ನಡೆದು, ಡಿ.18.ರ ಬೆಳಿಗ್ಗೆ ಅಯ್ಯಪ್ಪ ಭಕ್ತರಿಂದ” ಅಗ್ನಿ ಸೇವೆ,” ಗುರುಪಾದವಂದನ ಮತ್ತು ಪೂಜಾಕಾರ್ಯಕ್ರಮ ನಡೆದು ಅಯ್ಯಪ್ಪ ಸ್ವಾಮಿಯ ಪ್ರಸಾದ ವಿತರಿಸಲಾಯಿತು, ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು.


