

ರಾಜ್ಯದಲ್ಲಿ ಯಾವುದೇ ಸರಕಾರ ಆಡಳಿತಕ್ಕೆ ಬಂದರೂ ಮಂತ್ರಿಗಿರಿ ಅಪೇಕ್ಷೆ ಇಲ್ಲ: ಬದಲಾಗಿ ಕಳೆದ 30 ವರ್ಷ ಸುಳ್ಯಕ್ಷೇತ್ರಕ್ಕೆ ಆದ ನಷ್ಟ ತುಂಬಿಸಲು ಸುಳ್ಯ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಮಾತ್ರ ಸಾಕು:
ನಂದಕುಮಾರ್ ಮನದಾಳದ ಇಂಗಿತ..
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿದ್ದು ಕೈ ಟಿಕೆಟ್ ವಂಚಿತರಾದ ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್ ಅವರು ವಿಧಾನಸಭಾ ಚುನಾವಣೆಗೆ ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಮಂಗಳವಾರ ಕಡಬದಲ್ಲಿ ನಡೆದ ನಂದಕುಮಾರ್ ಅಭಿಮಾನಿ ಕಾರ್ಯಕರ್ತರ ಕೋರ್ ಕಮಿಟಿ ಸಭೆಯಲ್ಲಿ ನಂದಕುಮಾರ್ ಅವರು ಚುನಾವಣೆಗೆ ಸ್ಪರ್ಧಿಸುವ ತೀರ್ಮಾನ ಮಾಡಲಾಗಿದ್ದು ಅಭಿಮಾನಿಗಳ ಬಯಕೆ ಪೂರ್ಣಗೊಳಿಸುವ ಇಂಗಿತವನ್ನು ಪೂರೈಸುವ ಭರವಸೆ ನೀಡಿದ್ದಾರೆ ಈ ಬಗ್ಗೆ ನಾಮಪತ್ರ ಸಲ್ಲಿಕೆಯ ದಿನಾಂಕವನ್ನು ಏ.12ರಂದು ಪ್ರಕಟಿಸಲಾಗುವುದು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಗುವುದು. ಕಾಂಗ್ರೆಸ್ ಪಕ್ಷದ ವತಿಯಿಂದ ಬಿ ಫಾರಂ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿ ಯಾಗಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲಾಗುವುದು.
ಕಾರ್ಯಕರ್ತರ, ಅಭಿಮಾನಿಗಳ ಹಾಗು ಸ್ನೇಹಿತರ ಅಭಿಪ್ರಾಯದ ಮೇರೆಗೆ ಚುನಾವಣಾ ಕಣಕ್ಕೆ ಇಳಿಯುವುದಾಗಿ ನಂದಕುಮಾರ್ ತಿಳಿಸಿದ್ದಾರೆ.
ಸುಳ್ಯ ಕ್ಷೇತ್ರ ಕಳೆದ ಮುವತ್ತು ವರುಷಗಳಿಂದ ಅಭಿವೃದ್ದಿಯಲ್ಲಿ ಕುಂಠಿತವಾಗಿದೆ ,ಹಲವು ಅಭಿವೃದ್ದಿ ಕಾರ್ಯಗಳು ಬಾಕಿಯಾಗಿದೆ ನನಗೆ ವೈಯುಕ್ತಿಕವಾಗಿ ಯಾರೊಂದಿಗೂ ಬಿನ್ನಾಭಿಪ್ರಾಯ ಇಲ್ಲ , ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಮತ್ತಷ್ಟು ಅಭಿವೃದ್ದಿ ಪಡಿಸಬಹುದಿತ್ತು, ಹಲವು ಕಾಲೋನಿಗಳಲ್ಲಿ ದಲಿತರು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಹಾಗೆಂದು ಕಷ್ಟಗಳು ಯಾವುದೇ ಜಾತಿ ದರ್ಮಕ್ಕೆ ಮೀಸಲಾಗಿಲ್ಲ ಎಲ್ಲಾ ಜಾತಿಯಲ್ಲೂ ಬಡತನದಲ್ಲಿದ್ದಾರೆ , ಸರಕಾರಿ ಸವಲತ್ತುಗಳು ಸುಳ್ಯದ ಪ್ರತಿಯೊಬ್ಬರ ಮನೆಗೂ ಸರಕಾರಿ ಸೌಲಭ್ಯ ದೊರೆಯಬೇಕು , ಊರಿನ ರಸ್ತೆಗಳು ಅಭಿವೃದ್ದಿಯಾಗಬೇಕು , ಕುಡಿಯುವ ನೀರು , ತೂಗು ಸೇತುವೆಗಳು ಇದ್ದಲ್ಲಿ ಶಾಶ್ವತ ಸೇತುವೆ ನಿರ್ಮಾಣವಾಗಬೇಕು.ಎಷ್ಟೋಕಡೆ ರಸ್ತೆ, ಚರಂಡಿ ನೀರು ಕಾಲು ಸಂಕ , ಸೇರಿದಂತೆ ಹಲವು ಬೇಡಿಕೆಗೆ ಮತದಾನ ಭಹಿಷ್ಕಾರ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಇವರೆಲ್ಲರ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯದಲ್ಲಿ ಯಾವುದೇ ಸರಕಾರ ಬಂದರೂ , ಪಕ್ಷೇತರವಾಗಿ ನಾನು ಆಯ್ಕೆಯಾದಲ್ಲಿ , ನನಗೆ ಯಾವುದೇ ಮಂತ್ರಿಗಿರಿ ಬೇಡ ಬದಲಾಗಿ ನನ್ನ ಸುಳ್ಯ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಬೇಕಾಗುವಷ್ಟು ಅನುದಾನ ನನ್ನ ಷರತ್ತು ಆಗಿರುತ್ತದೆ ಎಂದು ನ್ಯೂಸ್ ರೂಮ್ ಫಸ್ಟ್ ಜೊತೆ ತಮ್ಮ ತುಡಿತ ಹಂಚಿಕೊಂಡಿದ್ದಾರೆ.