ನ.27 ರಂದು ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿ ಲಿ ಸುಳ್ಯ, ಮೀನುಗಾರಿಕಾ ಇಲಾಖೆ ಮಂಗಳೂರು, ಇದರ ಜಂಟಿಆಶ್ರಯದಲ್ಲಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಂಡೆಕೋಲು ಇದರ ಸಹಕಾರದೊಂದಿಗೆ, ಒಳನಾಡು ಮೀನುಗಾರಿಕೆ ಅವಕಾಶಗಳು ಹಾಗೂ ಇಲಾಕಾ ಸವಲತ್ತುಗಳ ಮಾಹಿತಿ ಕಾರ್ಯಾಗಾರ ಮಂಡೆಕೋಲಿನ ಅಮೃತ ಸಭಾಭವನದಲ್ಲಿ ನಡೆಯಲಿದೆ ಎಂದು ಮಹಶೀರ್ ಮತ್ಸ್ಯ ರೈತ ಉತ್ಪಾದಕರ ಕಂಪೆನಿಯ ತಾಲೋಕು ಅಧ್ಯಕ್ಷ ಮಹೇಶ್ ರೈ ಮೇನಾಲ ತಿಳಿಸಿದ್ದಾರೆ.ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ಮಾತನಾಡಿದ ಅವರು ಕಾರ್ಯಕ್ರಮವನ್ನು ಮೀನುಗಾರಿಕೆ ಬಂದರು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ನಿಗಮದ ಅದ್ಯಕ್ಷ ಎ ವಿ ತೀರ್ಥರಾಮ, ಮಾಜಿ ಜಿ.ಪಂ ಸದಸ್ಯ ಹರೀಶ ಕಂಜಿಪಿಲಿ, ಪುತ್ತೂರು ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ಬುಡಿಯಾರು ರಾಧಾಕೃಷ್ಣ ರೈ, ತಾ. ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ,ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ, ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾನಿಲಯದ ಡೀನ್ ಡಾ. ಶಿವಕುಮಾರ್ ಮಗದ,ಮಂಗಳೂರು ಮೀನುಗಾರಿಕಾ ಉಪನಿರ್ದೇಶಕಿ ಡಾ. ಸುಶ್ಮಿತಾ ರಾವ್, ದ.ಕ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ ಜೆ ರಮೇಶ್ ಬಾಗವಹಿಸಲಿದ್ದು, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಎಂ ವಿಶ್ವನಾಥ್ ರೆಡ್ಡಿ,ವ ಗೌತಮ್ ಬೆಂಗಳೂರು ಹಾಜರಿದ್ದು ಮೀನುಗಾರಿಕ ಕೃಷಿ ಮತ್ತು ಲಾಬಾಂಶ, ಮಾರಾಟ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ, ಅಲ್ಲದೆ ಅದೇದಿವಸ ಆಯ್ದ ರೈತ ರಿಗೆ ೧ ಲಕ್ಷದಷ್ಟು ಮೀನು ಮರಿ ವಿತರಿಸಲಾಗುವುದು ಎಂದು ಹೇಳಿದ್ದಾರೆ, ಈ ಸಂದರ್ಬ ದಲ್ಲಿ ನಿರ್ದೇಶಕರಾದ ಸುಪ್ರೀತ್ ಮೊಂಟಡ್ಕ,ಪ್ರಶಾಂತ್ ಅಂಬೆಕಲ್ಲು, ನವೀನ್ ಚಾತುಬಾಯಿ, ವಿಜೇತ್ ಅಡ್ಯಡ್ಕ,ಹಾಗು ಧನುಷ್ ಮೊದಲಾದವರಿದ್ದರು
add a comment