

ಕಡಬ: ಕಡಬ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಆನೆ ದಾಳಿ ನಡೆಸಿದ್ದು,ಯುವತಿ ಸಹಿತ ಇಬ್ಬರು ಮೃತಪಟ್ಟ ಘಟನೆ ಕುಟುಪಾಡಿ ಗ್ರಾಮದ ಮೀನಾಡಿ ಸಮೀಪ ನಡೆದಿದೆ. ಈ ದುರ್ಘಟನೆ ಫೆ.20ರ ಬೆಳಿಗ್ಗೆ 6.30 ಕ್ಕೆ ನಡೆದಿದೆ
ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ ರೈ ನೈಲ (27) ಎಂಬವರು ಮನೆಯಿಂದ ಸೊಸೈಟಿಗೆ ನಡೆದುಕೊಂಡು ತೆರಳುತ್ತಿದ್ದ ವೇಳೆ ಆನೆ ದಾಳಿ ನಡೆಸಿದೆ.

ಇದೇ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ (57) ಎಂಬವರು ರಕ್ಷಣೆಗೆ ಆಗಮಿಸಿದ್ದು ಅವರ ಮೇಲೂ ಆನೆ ದಾಳಿ ನಡೆಸಿದ್ದು, ಆನೆಯ ಅಟ್ಟಹಾಸಕ್ಕೆ ರಮೇಶ್ ರೈ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ರಮೇಶ್ ರೈ ಯವರ ಹೊಟ್ಟೆಗೆ ಆನೆ ಮೆಟ್ಟಿದ್ದು ಕರುಳು ಹೊರ ಬಂದಿದೆ. ಯುವತಿಯನ್ನು ಎತ್ತಿ ಬಿಸಾಡಿದ ರೀತಿ ಕಂಡುಬಂದಿದೆ. ಯುವತಿಯ ಕುತ್ತಿಗೆ ತಿರುಚಿದ ರೀತಿ ಇತ್ತೆನ್ನಲಾಗಿದೆ

ಯುವತಿಯನ್ನು ನೆಲ್ಯಾಡಿಯ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೇಳೆದಿದ್ದಾರೆ.
ವರದಿ: ಶಿವ ಭಟ್ ಸುಬ್ರಹ್ಮಣ್ಯ.
add a comment