ರಾಜ್ಯ

ಕುರುಂಜಿ ವೆಂಕಟರಮಣ ಗೌಡ ಸುಳ್ಯದ ದಂತಕಥೆ:ಡಾ. ಅಂಜನಪ್ಪ ಟಿ.ಎಮ್ ಕೆ ವಿ ಜಿ ಸುಳ್ಯಹಬ್ಬ ಸಮಾಜ ಸೇವಾ ಸಂಘ ದಿಂದ ಕೆ.ವಿ.ಜಿ ಸುಳ್ಯ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ.

ಆಧುನಿಕ ಸುಳ್ಯದ ನಿರ್ಮಾತೃ ದಿ. ಡಾ. ಕುರುಂಜಿ ವೆಂಕಟರಮಣ ಗೌಡರ 94 ನೇ ಜಯಂತೋತ್ಸವದ ಅಂಗವಾಗಿ ಸುಳ್ಯದಲ್ಲಿ ಅಧ್ದೂರಿಯಾ ಸುಳ್ಯ ಹಬ್ಬವನ್ನು ಕೆ ವಿ ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದಿಂದ ಆಚರಿಸಿಕೊಂಡು ಬರುತ್ತಿದ್ದು, ಡಿ, ೨೬. ರಂದು ಸುಳ್ಯ ಹಬ್ಬದ ಎರಡನೇ ದಿನದ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ ಕೆ.ವಿ ಚಿದಾನಂದ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ವೈಧ್ಯ ಡಾ. ಅಂಜನಪ್ಪ ಟಿ.ಎಮ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು ನಂತರ ಮಾತನಾಡಿದ ಅವರು.ಕುರುಂಜಿ ವೆಂಕಟರಮಣ ಗೌಡ ಸುಳ್ಯದ ದಂತಕಥೆ,ವಿದ್ಯೆಗಿರುವ ಮಹತ್ವ ಅಪರಿಮಿತವಾದುದು, ಜೀವನಕ್ಕೆ ವಿದ್ಯೆಯೇ ಶ್ರೇಷ್ಟ, ಇಂತಹಾ ವಿದ್ಯಾಸಂಸ್ಥೆಗಳ ಸ್ಥಾಪಕರಾದ ಪೂಜ್ಯ ಕುರುಂಜಿ ಯಾವ ಸ್ವಾಮೀಜಿಗೂ ಕಡಿಮೆಯಿಲ್ಲ, ಎಂದು ಹೇಳಿದರಲ್ಲದೆ, ಕರುಂಜಿಯವರು ಒಬ್ಬರು ರೈತರಾಗಿದ್ದರು, ನನ್ನ ತಂದೆಯೂ ರೈತರಾಗಿದ್ದರು, ನಾನು ಕೂಡ ರೈತನ ಮಗ ಎನ್ನಲು ಹೆಮ್ಮೆ ಪಡುತ್ತೇನೆ ಎಂದು ಹೇಳಿದರು,ಡಾ ರಾಜ್ ಕುಮಾರ್ ರವರು ನಾನು

ವೈದ್ಯನಾಗಲು ಪ್ರೇರಕ ಶಕ್ತಿ , ವೈದ್ಯ ನಾಗಿ ಸಾವೀರಾರು ಜನರ ಜೀವ ಉಳಿಸಿದ ಸಂತೋಷ ನನಗಿದೆ, ನನ್ನಂತಹ ವೈದ್ಯರನ್ನು ತಯಾರು ಮಾಡುವ ಕಾರ್ಯಕ್ಕೆ ಕೈ ಹಾಕಿದವರು ಡಾ. ಕುರುಂಜಿಯವರು. ಅವರ ಸಾಧನೆ ಶ್ರೇಷ್ಟ ವಾದುದು ಎಂದರು,
ಮುಖ್ಯ ಅತಿಥಿಯಾಗಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ ರೇಣುಕಾಪ್ರಸಾದ್, ಬಾಗವಹಿಸಿದ್ದರು, ವೇದಿಕೆಯಲ್ಲಿ ಕೆ ವಿ ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಉಬರಡ್ಕ, ಕೋಶಾಧಿಕಾರಿ ಆನಂದ ಖಂಡಿಗ ಉಪಸ್ಥಿತಿಯಿದ್ದರು, ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಪ್ರೋ ಬಾಲಚಂದ್ರ ಗೌಡ ಎಂ, ಹಾಗೂ ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್ ಕೆ ನಾಯರ್ ಅವರನ್ನು ಸಾಧನೆಯನ್ನು ಗುರುತಿಸಿ ಕೆ ವಿ ಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೊಡ್ಡಣ್ಣ ಬರೆಮೇಲು ಸ್ವಾಗತಿಸಿ ಡಾ .ಕೆ ವಿ ಚಿದಾನಂದರು ಧನ್ಯವಾದ ಸಮರ್ಪಿಸಿದರು.

Leave a Response

error: Content is protected !!