
ಕೊರೋನಾ ಎಂಬುದೇ ಒಂದು ವೈದ್ಯಕೀಯ ಮಾಫಿಯಾ ಕೋರೊನಾ ಇಂದು ನೆನ್ನೆಯದಲ್ಲ ಇದು ಹಲವು ವರ್ಷಗಳ ಹಿಂದೆಯೇ ಇತ್ತು, ನಾನು ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲೇ ಇತ್ತು, ಇದು ಒಂದು ಶೀತ ಭಾದೆಯಷ್ಟೆ, ಇದಕ್ಕೆ ವಿಶೇಷ ಔಷದಿ ಏನೂ ಇಲ್ಲ, ನಮ್ಮ ಹಳ್ಳಿಯ ಮಣ್ಣಿನಲ್ಲಿ ದುಡಿಯುವ ರೈತನಿಗೆ , ಹಳ್ಳಿ ಬದುಕಿನ ಹಳ್ಳ ಕೊಳ್ಳಗಳ, ದೂಳು ಗಾಳಿಗಳ ನಡುವೆ ಆಡಿಬೆಳೆದ ಮಕ್ಕಳ ಬಳಿ ಕೊರೊನಾ ಸೋಂಕುವದೇ ಇಲ್ಲ ನಾನೊಬ್ಬ ವಿಜ್ಞಾನಿಯಾಗಿ, ನಾನೊಬ್ಬ ವೈದ್ಯನಾಗಿ ಇದನ್ನು ಮತ್ತೆ ಮತ್ತೆ ದೈರ್ಯದಿಂದ ಹೇಳತ್ತೇನೆ ಕೊರೊನಾ ಹೆಸರಲ್ಲಿ ವೈದ್ಯಕೀಯ ಮಾಫಿಯ ನಡೆದಿದೆ, ಕೋರೊನಾ ಹೆಸರಲ್ಲಿ ಯಾರು ಭಯಪಡುವ ಅವಶ್ಯಕತೆ ಇಲ್ಲ ಎಂದು ಖ್ಯಾತ ವೈದ್ಯ, ವಿಜ್ಞಾನಿ ಡಾ. ಅಂಜನಪ್ಪ ಹೇಳಿದ್ದಾರೆ. ಅವರು ಕೆ ವಿ ಜಿ ಸುಳ್ಯ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ಹಿಂದೆ ಕೊರೋನಾ ಎರಡನೆ ಅಲೆ ಸಂದರ್ಭದಲ್ಲಿ ಮೂರು ನಾಲ್ಕು ಸಾವಿರ ರೂಪಾಯಿಗಳ ಇಂಜೆಕ್ಷನ್ ಬೆಲೆ ಅರವತ್ತು ಸಾವಿರಕ್ಕೆ ಹೆಚ್ಚಿಸಲಾಗಿತ್ತು, ಮತ್ತೆ ಇದರ ಬೆಲೆ ಮೂರು ನಾಲ್ಕು ಲಕ್ಷದ ಬೆಲೆಗೂ ಏರಿತ್ತು, ಜೀವ ಉಳಿಸಿಕೊಳ್ಳಲು. ಇದ್ದ ಬದ್ದ ಆಸ್ತಿ ಮಾರಿ ಆಸ್ಪತ್ರೆಗೆ ಹಾಕಿದ್ದ ಬಡ ಜನರ ಸ್ಥಿತಿ ನೆನೆದು ದುಖಿತನಾಗಿದ್ದೇನೆ ಎಂದರು, ಆದರು ನಾನು ವೈದ್ಯನಾಗಿ 35000 ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಿ ಜೀವ ಉಳಿಸಿರುವ ತೃಪ್ತಿ ಇದೆ ಎಂದರು.
