ರಾಜ್ಯ

ಈ ಬಾರಿ ಬಿಜೆಪಿಯಿಂದ ಗೆಲುವು ಪಡೆಯಲು ಅಂಗಾರರಿಂದ ಮಾತ್ರ ಸಾಧ್ಯ ಹಾಗಾಗೀ ಅಂಗಾರರಿಗೇ ಟಿಕೆಟ್ ನೀಡಿ.. ಸುಳ್ಯ ಮತ್ತು ಕಡಬದಲ್ಲಿ ಬಿ ಜೆ ಪಿ ದಲಿತ ಮೋರ್ಚಾ ಸದಸ್ಯರು ಆಗ್ರಹ:

ಈ ಬಾರಿ ಬಿಜೆಪಿಯಿಂದ ಗೆಲುವು ಪಡೆಯಲು ಅಂಗಾರರಿಂದ ಮಾತ್ರ ಸಾಧ್ಯ ಹಾಗಾಗೀ ಅಂಗಾರರಿಗೇ ಟಿಕೆಟ್ ನೀಡಿ.. ಸುಳ್ಯ ಮತ್ತು ಕಡಬದಲ್ಲಿ ಬಿ ಜೆ ಪಿ ದಲಿತ ಮೋರ್ಚಾ ಸದಸ್ಯರು ಆಗ್ರಹ ವ್ಯಕ್ತ ಪಡಿಸಿದ್ದಾರೆ
ಶುಕ್ರವಾರ ಕಡಬ. ಮತ್ತು ಸುಳ್ಯದಲ್ಲಿದಲ್ಲಿ ಸರಣಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ದಲಿತ ಮೋರ್ಚಾದ ವಿವಿಧ ಪದಾಧಿಕಾರಿಗಳು ಅಂಗಾರ ಅವರಂತಹ ಅಪರೂಪದ ಮಾದರಿ ರಾಜಕಾರಣಿ ಕರ್ನಾಟಕದಲ್ಲೇ ಸಿಗುವುದು ಕಷ್ಟ ಆದ್ದರಿಂದ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಹಾಗೂ ಸಂಘ ಪರಿವಾರದ ಮುಖಂಡರಿಗೆ ನಾವು ಮನವಿ ಮಾಡುವ ಮೂಲಕ ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದೇವೆ.

ಅಂಗಾರ ಬಗ್ಗೆ ಮತದಾರರಲ್ಲಿ ಅಸಮಾಧಾನ ಎಂದು ಬಿಂಬಿಸುತ್ತಿರುವುದು ಭಿನ್ನ ನಿಲುವು ಹೊಂದಿರುವವರು ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ ಮತ್ತು ಅಪ ಪ್ರಚಾರವೇ ಹೊರತು ಅದು ಮತದಾರರ ಅಭಿಪ್ರಾಯವಲ್ಲ. ಆದರೆ ಮತದಾರರಿಗೆ ಅಂಗಾರರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂಬ ಅಭಿಪ್ರಾಯ ಎಲ್ಲಾ ಕಡೆಯಿಂದ ಕೇಳಿ ಬರುತ್ತಿದೆ. ಈ ಬಾರಿಯೂ ಸುಳ್ಯ ವಿಧಾನ ಸಭಾ ಕ್ಷೇತ್ರದ ಪ.ಜಾತಿಯ ಎಲ್ಲಾ ಮತದಾರರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬೆಂಬಲವನ್ನು ಎಸ್. ಅಂಗಾರರಿಗೆ ನೀಡಲಿದ್ದಾರೆ.
ಪಕ್ಷಕ್ಕಾಗಲೀ, ಸಮಾಜಕ್ಕಾಗಲೀ ಚ್ಯುತಿ ಬರುವ ರೀತಿಯಲ್ಲಿ ಅಂಗಾರ ಅವರು ವರ್ತಿಸಿಲ್ಲ. ಇತ್ತೀಚೆಗೆ ಸುಳ್ಯ ವಿಧಾನ ಸಭಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರೆನ್ನುವ ಬಗ್ಗೆ ಹಲವು ಗೊಂದಲಗಳಿವೆ, ಅಂಗಾರ ಅವರನ್ನು ಹೊರತುಪಡಿಸಿ ಬೇರೆಯವರ ಹೆಸರುಗಳು ಕೇಳಿಬರುತ್ತಿವೆ, ಅವರೆಲ್ಲಾ ಅಂಗಾರ ಅವರ ಸರಿಸಮಾನ ಆಗಲಾರರು, ತಳಮಟ್ಟದ ಕಾರ್ಯಕರ್ತರಿಗೆ ಈಗ ಕೇಳಿಬರುತ್ತಿರುವ ಹೆಸರಿನ ಜನಗಳ ಬಗ್ಗೆ ಗೊತ್ತೇ ಇಲ್ಲ. ಅವರೆಲ್ಲ ಒಂದು ಗ್ರಾಮಕ್ಕೆ ಸೀಮಿತವಾಗಿದ್ದಾರೆ.


ಶಾಸಕರು ಕ್ಷೇತ್ರದ ಹಳ್ಳಿ ಹಳ್ಳಿಗಳಿಗೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ ಒಬ್ಬ ಆದರ್ಶ ನಾಯಕನಾಗಿದ್ದಾರೆ. ಅಂಗಾರರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರಪಡಿಸುವುದರಲ್ಲಿ ನಾವೆಲ್ಲ ಸೋತಿದ್ದೇವೆ, ಕಾರ್ಯಕರ್ತರ ಮನಸ್ಸಿಗೆ ನೋವಾಗುವಂತಹ ಕೆಲವನ್ನು ಅವರು ಯಾವತ್ತೂ ಮಾಡಿಲ್ಲ ಇಂತಹ ಹಿರಿಯ ರಾಜಕಾರಣಿಗೆ ಈ ಬಾರಿ ಮತ್ತೋಮ್ಮೆ ಒಮ್ಮೆ ಅವಕಾಶ ನೀಡಬೇಕು ಉಳಿದ ಆಕಾಂಕ್ಷಿಗಳಿಗೆ ಮುಂದಿನ ಬಾರಿ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಕಡಬದ ಪತ್ರಿಕಾಗೋಷ್ಟಿಯಲ್ಲಿ ಸುಳ್ಯ ಮಂಡಲ ಬಿಜೆಪಿ ಸಮಿತಿಯ ಸದಸ್ಯ ನೆಲ್ಯಾಡಿಯ ಮಹಾಬಲ ಪಡುಬೆಟ್ಟು, ಆಲಂಕಾರು ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಗಾನಂತಿ, ರಾಮಕುಂಜ ಗ್ರಾಮ ಪಂಚಾಯಿತಿ ಸದಸ್ಯ ಕೇಶವ ಗಾಂಧಿಪೇಟೆ, ಪ್ರಮುಖರಾದ ಸಂಜೀವ ಕೆ ಶಾರದಾನಗರ, ಬಾಬು ಎಂ ಮರುವಂತಿಲ, ಪ್ರೇಮನಾಥ ಮರುವಂತಿಲ, ಮೋಹನ ಉಜುರ್ಲಿ, ಸಂದೀಪ್ ಪಾಂಜೋಡಿ ಮತ್ತಿತರರು ಉಪಸ್ಥಿತರಿದ್ದರು. ಸುಳ್ಯದಲ್ಲಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯ್ ಆಲಡ್ಕ, ಅಕ್ರಮ ಸಕ್ರಮ‌ ಸಮಿತಿಯ ಮಾಜಿ ಸದಸ್ಯ ಬಾಳಪ್ಪ ಮಣಿಮಜಲು ಕಳಂಜ, ಮೊಗೇರ ಸಮಾಜ‌ ಸಂಘದ ಕೋಶಾಧಿಕಾರಿ ವಸಂತ ಛತ್ರಪ್ಪಾಡಿ ಉಪಸ್ಥಿತರಿದ್ದರು.

Leave a Response

error: Content is protected !!