

ಶಿಕ್ಷಣ ಬ್ರಹ್ಮ ಡಾ.ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟು ಹಬ್ಬವನ್ನು ಸುಳ್ಯದ ಪತ್ರಕರ್ತರು ಭವ್ಯ ಸುಳ್ಯ ಸಂಕಲ್ಪ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದು ಇಂದು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಿತು.ಬಸ್ ನಿಲ್ದಾಣದಲ್ಲಿ ಇರುವ ಡಾ.ಕುರುಂಜಿಯವರ ಪುತ್ಥಳಿಗೆ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಮಾಲಾರ್ಪಣೆ ಮಾಡಿ,
ಬಳಿಕ ಕುರುಂಜಿಯವರ ಆಶಯದ ಪ್ರತಿಜ್ಞಾವಿಧಿ ಬೋಧನೆ ಮಾಡಿದರು.
ಮುಖ್ಯ ಅತಿಥಿಯಾಗಿ ನಗರ ಪಂಚಾಯತ್ ಅಧ್ಯಕ್ಷ
ವಿನಯಕುಮಾರ್ ಕಂದಡ್ಕ ಹಾರಾರ್ಪಣೆ ಮಾಡಿ ಶುಭ
ಹಾರೈಸಿದರು.ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಶುಭ ಹಾರೈಸಿದರು.ಮಡಪ್ಪಾಡಿ, ಎ.ಸಿ.ವಸಂತ,.ಎಸ್.ಗಂಗಾಧರ್, ಕೆ.ಎಂ.
ಮುಸ್ತಫಾ, ದಿನೇಶ್ ಅಂಬೆಕಲ್ಲು, ಸೀತಾರಾಮ ಗೌಡ,
ಜನಾರ್ದನ ನಾಯ್ಕ ಕೇರ್ಪಳ, ಡಾ.ಎನ್.ಎ.ಜ್ಞಾನೇಶ್,
ಜಯರಾಮ ದೇರಪ್ಪಜ್ಜನಮನೆ, ತೇಜೇಶ್ವರ್ ಕುಂದಲ್ಪಾಡಿ,ಜಯಶ್ರೀ ಕೊಯಿಂಗೋಡಿ, ಪ್ರಜ್ಞಾ ಎಸ್. ನಾರಾಯಣ ಅಚ್ಚಪ್ಪಾಡಿ, ಪೂಜಾಶ್ರೀ ವಿತೇಶ್ ಕೋಡಿ, ರಾಜು ಪಂಡಿತ್,ಭೀಮರಾವ್ ವಾಷ್ಠರ್, ಮಂಜುನಾಥ್ ಬಳ್ಳಾರಿ, ಪದ್ಮನಾಭ ಮುಂಡೋಕಜೆ, ಹಸೈನಾರ್ ಜಯನಗರ, ರಮೇಶ್ ನೀರಬಿದಿರೆ, ಶರೀಫ್ ಜಟ್ಟಿಪಳ್ಳ, ಕೃಷ್ಣ ಬೆಟ್ಟ, ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ್ ಕಲ್ಲಪಳ್ಳಿ, ಶಿವಪ್ರಸಾದ್ ಕೇರ್ಪಳ
ಉಪಸ್ಥಿತರಿದ್ದರು.ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್ ಕ್ಲಬ್ ಕೋಶಾಧಿಕಾರಿ ಯಶ್ಚಿತ್ ಕಾಳಮ್ಮನೆ ವಂದಿಸಿದರು.
